Neer Dose Karnataka
Take a fresh look at your lifestyle.

ಜೇಮ್ಸ್ ಬಗ್ಗೆ ಗೊತ್ತು, ಆದರೆ ಪವರ್ ಸ್ಟಾರ್ ಪುನೀತ್ ನಟಿಸಬೇಕಿದ್ದ ಈ ಸಿನಿಮಾಗಳು ಕೊನೆಗೂ ಕೂಡ ಪೂರ್ಣ ವಾಗಲೇ ಇಲ್ಲ. ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗ ಆಲ್-ರೌಂಡರ್ ಪ್ರತಿಭೆಯಾಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ತಬ್ಬಲಿ ಯಾಗಿದೆ ಎಂದು ಹೇಳಬಹುದಾಗಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಏನನ್ನಾದರೂ ಹೊಸತನ್ನು ಹೇಳುವ ಹಂಬಲವಿತ್ತು. ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕನ್ನಡದ ನಟರ ಪೈಕಿ ಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕೂಡ ಕಾಣಿಸಿಕೊಳ್ಳುತ್ತಾರೆ.

ಹೌದು ಗೆಳೆಯರೇ ವರ್ಕೌಟ್ ಮಾಡುತ್ತಿರಬೇಕಾದರೆ ಹೃದಯಾಘಾತದಿಂದ ಕುಸಿದುಬಿದ್ದು ಇಹಲೋಕ ಯಾತ್ರೆಯನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮುಗಿಸಿದರು. ಇನ್ನು 46ನೇ ವಯಸ್ಸಿಗೆ ಕೊನೆಯುಸಿರನ್ನು ಹೇಳದಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಹಲವಾರು ಸಿನಿಮಾಗಳನ್ನು ಪೂರೈಸ ಬೇಕಾಗಿತ್ತು. ಅವುಗಳು ಯಾವುವು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ.

ದ್ವಿತ್ವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಲೂಸಿಯಾ ಪವನ್ ಕುಮಾರ್ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಸೈಕಲಾಜಿಕಲ್ ಥ್ರಿಲ್ಲರ್ ದ್ವಿತ್ವ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಲು ಮುಂದಾಗಿತ್ತು. ಇನ್ನು ಚಿತ್ರದ ಟೈಟಲ್ ಕೂಡ ಅಧಿಕೃತವಾಗಿ ಬಿಡುಗಡೆಯಾಗಿತ್ತು ಚಿತ್ರದ ನಾಯಕಿಯನ್ನಾಗಿ ತ್ರಿಷಾ ಅವರನ್ನು ಕೂಡ ಫೈನಲ್ ಮಾಡಲಾಗಿತ್ತು. ಜೇಮ್ಸ್ ಜೇಮ್ಸ್ ಚಿತ್ರದ ಚಿತ್ರೀಕರಣ ಈಗಾಗಲೇ ಬಹುತೇಕ ಭಾಗಶಹ ಪೂರ್ಣಗೊಂಡಿದ್ದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಾಯಕನಟನಾಗಿ ಮೂಡಿಬರುತ್ತಿರುವ ಈ ಚಿತ್ರವನ್ನು ಬಹದ್ದೂರ್ ಚೇತನ್ ಕುಮಾರ್ ರವರು ನಿರ್ದೇಶಿಸಿದ್ದರು. ಈಗಾಗಲೆ ಚಿತ್ರದ ಕುರಿತಂತೆ ಕೆಲ ಪೋಸ್ಟರ್ ಗಳು ಹಾಗು ವಿಡಿಯೋಗಳು ಬಿಡುಗಡೆಯಾಗಿದ್ದು ಚಿತ್ರದ ಕುರಿತಂತೆ ಅಭಿಮಾನಿಗಳು ಕಾತರರಾಗಿದ್ದರು.

ಪಿಆರ್ ಕೆ ಪ್ರೊಡಕ್ಷನ್ ಸಿನಿಮಾ ತಮ್ಮ ಪಿಆರ್ ಕೆ ಪ್ರೊಡಕ್ಷನ್ಸ್ ಸಿನಿಮಾ ನಿರ್ಮಾಣ ಸಂಸ್ಥೆಯಿಂದ ಹಲವಾರು ಹೊಸ ಪ್ರತಿಭೆಗಳಿಗೆ ಹಾಗೂ ಯುವ ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶವನ್ನು ನೀಡಿದ್ದರು ಆದರೆ ತಾವು ತಮ್ಮ ಹೋಮ್ ಬ್ಯಾನರ್ ನಲ್ಲಿ ನಟಿಸಿರಲಿಲ್ಲ. ಪಿಆರ್ ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಪೃಥ್ವಿ ಖ್ಯಾತಿಯ ಜೇಕಬ್ ನಿರ್ದೇಶನದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಾಯಕನಟನಾಗಿ ನಟಿಸುವ ಒಂದು ಹೊಸ ಚಿತ್ರ ಮೂಡಿ ಬರಬೇಕಾಗಿತ್ತು.

ಇನ್ನು ಈಗಾಗಲೇ ದಿನಕರ್ ತೂಗುದೀಪ್ ರವರೊಂದಿಗೆ ಹೊಸ ಚಿತ್ರದ ಘೋಷಣೆಯಾಗಿದ್ದು ನಿಮಗೆ ಗೊತ್ತಿದೆ. ಇನ್ನು ಪೈಲ್ವಾನ್ ಕೃಷ್ಣ ನಿರ್ದೇಶನದಲ್ಲಿ ಕೂಡ ರಾ ಏಜೆಂಟ್ ಮಾದರಿಯ ಸಿನಿಮಾದ ಘೋಷಣೆ ಕೂಡ ನಡೆದಿತ್ತು. ಈ ಎಲ್ಲಾ ಸಿನಿಮಾಗಳ ಮೂಲಕ ಪ್ರೇಕ್ಷಕರ ಸಮೂಹಕ್ಕೆ ವಿಭಿನ್ನ ಮಾದರಿಯ ಮನರಂಜನೆಯನ್ನು ನೀಡಲು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಕನಸುಕಂಡಿದ್ದರು. ಆದರೆ ಆ ಕನಸು ಕನಸಾಗಿ ಉಳಿದುಕೊಂಡು ಬಿಟ್ಟಿದೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಮತ್ತೊಮ್ಮೆ ಸಿನಿಮಾ ಪರದೆ ಮೇಲೆ ನೋಡುವ ಎಲ್ಲಾ ಆಸೆಗಳು ಕೂಡ ಕಮರಿ ಹೋಗಿವೆ. ಆದರೆ ಅವರು ಕನ್ನಡ ಚಿತ್ರರಂಗಕ್ಕೆ ಹಾಗೂ ಕನ್ನಡ ಚಿತ್ರರಂಗದ ಅಭಿಮಾನಿಗಳಿಗೆ ಬಿಟ್ಟು ಹೋದಂತಹ ಹಲವಾರು ನೆನಪುಗಳು ಸದಾಕಾಲ ಜೀವಂತವಾಗಿರುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೆ ಹಂಚಿಕೊಳ್ಳಿ.

Comments are closed.