ಅಸಲಿಗೆ ಮದುವೆಯಾಗದವರು ಹೋಟೆಲ್ ರೂಮ್ ತೆಗೆದುಕೊಳ್ಳಬಹುದೇ?? ಈ ವಿಚಾರ ನೆನಪಿನಲ್ಲಿಡಿ, ಖಂಡಿತಾ ಉಪಯೋಗಕ್ಕೆ ಬರುತ್ತದೆ.
ನಮಸ್ಕಾರ ಸ್ನೇಹಿತರೇ ಮದುವೆಯಾದವರು ಬೇಕಾದರೆ ಎಲ್ಲಿ ಕೂಡ ತಿರುಗಾಡಬಹುದು ಹೋಟೆಲ್ ನಲ್ಲಿ ಕೂಡ ವಾಸಿಸಬಹುದು ಆದರೆ ಮದುವೆ ಆಗದೆ ಇರುವವರು ಅಂದರೆ ಲವರ್ಸ್ ಹೋಟೆಲ್ ನಲ್ಲಿ ಉಳಿದುಕೊಳ್ಳುವುದು ಸರಿ ಎಂದು ಅನಿಸುವುದಿಲ್ಲ. ಸಮಾಜದ ಪ್ರಕಾರ ಇದು ತಪ್ಪು ಆದರೆ ಕಾನೂನಿನ ಪ್ರಕಾರ ಇದು ಅಪರಾಧವಲ್ಲ. ಆದರೂ ಕೂಡ ಕೆಲ ವಿಚಾರಗಳನ್ನು ನೀವು ಗಮನದಲ್ಲಿಟ್ಟುಕೊಂಡು ಹೋಟೆಲ್ನಲ್ಲಿ ಇರಬಹುದಾಗಿದೆ.
ಹೌದು ಗೆಳೆಯರೇ ಈಗ ಪ್ರೇಮಿಗಳ ಪ್ರೀತಿ ಎನ್ನುವುದು ಕೇವಲ ಗಾರ್ಡನ್ ಸಿನಿಮಾ ಥಿಯೇಟರ್ ಗಳಿಗೆ ಮಾತ್ರ ಸೀಮಿತವಾಗಿರದೆ ಈಗ ಹೋಟೆಲ್ ರೂಂಗಳಿಗೆ ಕೂಡ ಕಾಲಿಟ್ಟಿದೆ. ಆದರೆ ಮದುವೆ ಆಗದೆ ಇರೋ ಜೋಡಿಗಳು ಇಲ್ಲಿಗೆ ಬರಲು ಸಾಕಷ್ಟು ಹೆದರುತ್ತಾರೆ. ಆದರೆ ಹೆದರಿ ಕೊಳ್ಳಬೇಕಾದ ಯಾವ ಅಗತ್ಯತೆ ಕೂಡ ಇಲ್ಲ. ಯಾಕೆಂದರೆ ಇದು ಕಾನೂನು ಪ್ರಕಾರ ಯಾವುದೇ ಅಪರಾಧಕ್ಕೆ ಸೀಮಿತವಾಗಿಲ್ಲ. ಆದರೂ ಕೂಡ ನೀವು ಕೆಲವೊಂದು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಹಲವಾರು ಜೋಡಿಗಳು ಮದುವೆಯಾಗದೆ ಲಿವಿಂಗ್ ಟುಗೆದರ್ ಸಂಬಂಧದಲ್ಲಿ ಇರುವವರು ಕೂಡ ಇದೇ ಮಾದರಿಯಲ್ಲಿ ಬರುವುದರಿಂದ ಮದುವೆಯಾಗದೆ ಇರುವ ಜೋಡಿಗಳು ಹೋಟೆಲ್ ನಲ್ಲಿ ರೂಮನ್ನು ತೆಗೆದುಕೊಂಡಿರಬಹುದು. ಇದರ ಕುರಿತಂತೆ ಯಾವುದೇ ಕಾನೂನು ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ಈ ಕುರಿತಂತೆ ಕೆಲಸ ಜನರು ಹೇಳುವಂತೆ ಹೋಟೆಲ್ನಲ್ಲಿ ಮದುವೆಯಾಗದೆ ಉಳಿದುಕೊಳ್ಳುವುದಕ್ಕೆ ಯಾವುದೇ ಅಡೆತಡೆ ಕೂಡ ಇರುವುದಿಲ್ಲ ಯಾಕೆಂದರೆ ಇದು ನಿಮ್ಮ ಸ್ವಂತ ನಿರ್ಧಾರವಾಗಿರುತ್ತದೆ ಹಾಗೂ ನಿಮ್ಮ ನಿರ್ಧಾರವನ್ನು ತಳ್ಳಿಹಾಕುವ ಹಕ್ಕು ಯಾರಿಗೂ ಕೂಡ ಇರುವುದಿಲ್ಲ. ನಿಮ್ಮ ನಿರ್ಧಾರವನ್ನು ತಳ್ಳಿಹಾಕುವ ಸಾಧ್ಯತೆ ಯಾರಿಗೂ ಕೂಡ ಇರುವುದಿಲ್ಲ ಆದರೆ ಕೆಲವು ವಿಚಾರಗಳನ್ನು ಕೂಡ ನೀವು ಮನದಟ್ಟು ಮಾಡಿಕೊಳ್ಳಬೇಕು.
ಎಲ್ಲದಕ್ಕಿಂತ ಮುಖ್ಯವಾಗಿ ನೀವು ಪ್ರಬುದ್ಧರು ಅಂದರೆ 18 ವರ್ಷದವರು ಆಗಿರಲೇಬೇಕು. 18 ವರ್ಷ ಆಗಿರುವುದು ಒಂದು ಮುಖ್ಯ ಮೂಲ ಮಾಪನವಾಗಿದೆ. ಇನ್ನು ವಯಸ್ಸಿನ ಕಾನೂನು ಬೇರೆಬೇರೆ ಹೋಟೆಲ್ ರೂಂಗಳಲ್ಲಿ ಬೇರೆಬೇರೆ ರೀತಿಯಾಗಿರುತ್ತದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ 18ವರ್ಷದ ಗಿಂತ ಮೇಲ್ಪಟ್ಟವರು ಆಗಿರಬೇಕು.
ಇನ್ನು ಹುಡುಗ ಹಾಗೂ ಹುಡುಗಿ ಇಬ್ಬರದ್ದು ಕೂಡ ಗುರುತುಪತ್ರ ಇರಲೇಬೇಕು. ಹೌದು ಗೆಳೆಯರೇ ಐಡಿ ಪ್ರೂಫ್ ಖಡಾಖಂಡಿತವಾಗಿ ಸಮಯದಲ್ಲಿ ಇರಲೇಬೇಕು. ಈ ನಿಯಮಗಳು ಭಾರತದ ಪ್ರತಿಯೊಂದು ಹೋಟೆಲ್ನಲ್ಲಿ ಕೂಡ ಅನ್ವಯವಾಗುತ್ತದೆ. ಇನ್ನು ಮದುವೆಯಾಗದ ಪ್ರತಿಯೊಬ್ಬ ಹುಡುಗ ಹಾಗೂ ಹುಡುಗಿ ತಮ್ಮ ನಗರದಲ್ಲೇ ರೂಮನ್ನು ತೆಗೆದುಕೊಳ್ಳಬಹುದಾಗಿದೆ ಆದರೆ ಆ ಹೋಟೆಲಿನ ಮ್ಯಾನೇಜರ್ ಅಥವಾ ಮಾಲೀಕರು ನಿಮಗೆ ರೂಮನ್ನು ಕೊಡಲು ಇಚ್ಚಿಸುತ್ತಾರೆಯೋ ಇಲ್ಲವೋ ಎಂಬುದರ ಮೇಲೆ ಕೂಡ ನಿರ್ಧಾರವಾಗಿರುತ್ತದೆ.
ಆದರೆ ಯಾವುದೇ ಈ ತರಹದ ಕಾನೂನು ಇಲ್ಲ ಆದರೂ ಕೂಡ ಅವರ ಅನುಮತಿ ಮೇರೆಗೆ ನೀವು ರೂಮನ್ನು ತೆಗೆದುಕೊಳ್ಳಬಹುದು. ಇನ್ನು ಓಯೋ ರೂಮ್ ನ ವರದಿಯ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಅವಿವಾಹಿತರು ರೂಮನ್ನು ಆನ್ಲೈನ್ ಬುಕಿಂಗ್ ಮಾಡುವುದು ಕೊಳ್ಳುವುದರಲ್ಲಿ 60% ಹೆಚ್ಚಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಮಿಸ್ ಮಾಡದೆ ಹಂಚಿಕೊಳ್ಳಿ.
Comments are closed.