ವೈದ್ಯರು ಗುಣಪಡಿಸಲು ಸಾಧ್ಯವಾಗದ ಕಾಯಿಲೆಗೆ ತನ್ನ ಮಗನಿಗಾಗಿ ತಾನೇ ಔಷದಿ ಕಂಡು ಹಿಡಿದ ತಂದೆ, ಅಷ್ಟಕ್ಕೂ ನಡೆದ್ದದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಮಕ್ಕಳಿಗೆ ಏನಾದರೂ ಆದರೆ ತಂದೆ ತಾಯಿ ಪಡುವ ನೋವು ಆಷ್ಟಿಷ್ಟಲ್ಲ, ಅದರಲ್ಲೂ ಮಕ್ಕಳಿಗೆ ಖಾಯಿಲೆ ಬಂದರೆ ಅದನ್ನು ಗುಣಪಡಿಸುವುದಕ್ಕೆ ಎಷ್ಟೇ ಕಷ್ಟವಾದರೂ ಶತಾಯಗತಾಯಃ ಪ್ರಯತ್ನಿಸುತ್ತಾರೆ. ಅಂಥ ಒಂದು ಮನಮಿಡಿಯುವ ಕಥೆಯನ್ನು ನಾವಿಲ್ಲಿ ಹೇಳುತ್ತಿದ್ದೇವೆ.
ಮಕ್ಕಳಿಗೆ ಖಾಯಿಲೆ ಬಂತೆಂದರೆ ಅದನ್ನ ಸಹಿಸುವುದೇ ಕಷ್ಟ, ಅಂಥದ್ದರಲ್ಲಿ ಬಂದ ಖಾಯಿಲೆಯನ್ನು ಗುಣಪಡಿಸಲು ಔಷಧಿಯೇ ಇಲ್ಲವೆಂದರೆ! ಅಪ್ಪನಾದವನು ಏನು ಮಾಡಿಯಾನು? ಹೌದು ಇಂಥ ಒಂದು ಘಟನೆ ನಡೆದನ್ನು ದೂರದ ಚೀನಾದಲ್ಲಿ. ಕ್ಸು ವೀ ಯ ಎರಡು ವರ್ಷದ ಮಗು ಹಾವೊಯಾಂಗ್ ಅಪರೂಪದ ಅನುವಂಶಿಕ ಅಸ್ವಸ್ಥತೆಯಿಂದ ಬಳಲುತ್ತಿತ್ತು. ಇದಕ್ಕೆ ಸೂಕ್ತವಾದ ಚಿಕಿತ್ಸೆ ಚೀನಾದಲ್ಲಿ ಲಭ್ಯವಿರಲಿಲ್ಲ. ಚಿಕಿತ್ಸೆಗಾಗಿ ಬೇರೆ ದೇಶಕ್ಕೆ ಹೋಗುವ ಅಗತ್ಯವಿತ್ತು. ಆದರೆ ಈ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ದೇಶದ ಗಡಿಗಳನ್ನು ಮುಚ್ಚಲಾಗಿದೆ, ಆದ್ದರಿಂದ ಅವನು ಚಿಕಿತ್ಸೆಗಾಗಿ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಕ್ಸು ವಿ ಮಾಡಿದ್ಡೇನು ಗೊತ್ತೇ?
ಆದರೆ ಇದರಿಂದ ಭರವಸೆ ಕಳೆದುಕೊಳ್ಳದ ಕ್ಸು ವಿ ತಾನೇ ಸ್ವತಃ ಔಷಧ ಕಂಡುಹಿಡಿಯಲು ಮುಂದಾಗುತ್ತಾನೆ. ಮನೆಯಲ್ಲಿಯೇ ಒಂದು ಪ್ರಯೋಗಾಲಯವನ್ನು ಆರಂಭಿಸುತ್ತಾನೆ. ಕ್ಸು ವಿ ಕಲಿತದ್ದು ಕೇವಲ ಹೌಸ್ಕೂಲ್ ಮಾತ್ರ. ಇದನ್ನು ಮಾಡ ಬೇಕೋ ಬೇಡವೋ ಎಂದು ಯೋಚಿಸುವ ಸ್ಥಿತಿಯಲ್ಲಿ ನಾನಿರಲಿಲ್ಲ, ನನಗೆ ಇದನ್ನು ಮಾಡಬೇಕಿತ್ತು ಅಷ್ಟೇ ಎದ್ಮು ಹೇಳಿಕೆ ನೀಡಿದ್ದಾರೆ. ಮೊದಲು ತಮ್ಮ ತಂದೆಯ ಜಿಮ್ ನಲ್ಲಿ ಡಿಐವೈ ಲ್ಯಾಬ್ ಅನ್ನು ಸ್ಥಾಪಿಸಿದರು. ನಂತರ ಆರು ವಾರಗಳ ಸತತ ಪ್ರಯತ್ನದಿಂದ ಕಾಪರ್ ಹಿಸ್ಟಿಡೈನ್ ನ ಒಂದು ಸೀಸೆಯನ್ನು ತಯಾರಿಸಿದ ಕ್ಸು ವಿ. ಮೊದಲು ಅದನ್ನು ಮೊಲಗಳ ಮೇಲೆ ಪ್ರಯೋಗ ಮಾಡಿದ ನಂತರ ತನ್ನ ದೇಹಕ್ಕೆ ಚುಚ್ಚಿಕೊಂಡ ನಂತರ ಮಗನಿಗೂ ಕೊಟ್ಟ.
ಆದರೆ ಖಾಯಿಲೆ ವಾಸಿಯಾಗಲಿಲ್ಲವಾದರೂ ಅವರ ಪ್ರಯತ್ನ ಮೆಚ್ಚುವಂಥದ್ದು. ಈ ಔಷಧವನ್ನು ಆರಂಭದಲ್ಲಿ ನೀಡಿದ್ದರೆ ಪರಿಣಾಮಕಾರಿಯಾಗಿರುತ್ತೆ ಎಂದು ಫ್ರಾನ್ಸ್ ನ ಟೂರ್ಸ್ ಯೂನಿವರ್ಸಿಟಿ ಆಸ್ಪತ್ರೆಯ ಅಪರೂಪದ ರೋಗಗಳ ತಜ್ಞ ಪ್ರೊಫೆಸರ್ ಅನ್ನಿಕ್ ಟೌಟೈನ್ ಹೇಳಿದ್ದಾರೆ. ಇದಕ್ಕೆ ಅಲ್ಲವೇ ಹೇಳುವುದು ತಂದೆ ತಾಯಿ ಮಕ್ಕಳ ಸಂಬಂಧ ಎನ್ನುವುದು.
Comments are closed.