ರಾಹುಲ್ ಗಿಂತ ಈತನೇ ಹರಾಜಿನಲ್ಲಿ ಹೆಚ್ಚು ಹಣ ಗಳಿಸುತ್ತಾನೆ ಎಂದು ಭವಿಷ್ಯ ನುಡಿದ ಲಕ್ಷ್ಮಣ್ – ಆತ ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಈ ಭಾರಿಯ ಐಪಿಎಲ್ ಹರಾಜು ಭಾರಿ ನೀರಿಕ್ಷೆ ಮೂಡಿಸಿದೆ. ಎಲ್ಲರ ಕಣ್ಣು ಕೆ.ಎಲ್.ರಾಹುಲ್, ಡೇವಿಡ್ ವಾರ್ನರ್, ಕಗಿಸೋ ರಬಾಡ, ರಶೀದ್ ಖಾನ್ ಮೇಲಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಎರಡು ಹೊಸ ಫ್ರಾಂಚೈಸಿಗಳು ಈ ಭಾರಿ ಸೇರಿಕೊಳ್ಳುತ್ತಿರುವ ಕಾರಣ ಆಟಗಾರರ ಹರಾಜಿಗೆ ಹೆಚ್ಚಿನ ಬೇಡಿಕೆ ಬಂದಿದೆ.
ಸಹಜವಾಗಿಯೇ, ನಾಯಕ, ಆರಂಭಿಕ ಹಾಗೂ ವಿಕೇಟ್ ಕೀಪರ್ ಹೀಗೆ ಮೂರು ರೀತಿಯ ಜವಾಬ್ದಾರಿ ನಿರ್ವಹಿಸುವ ಕೆ.ಎಲ್.ರಾಹುಲ್ ಹೆಚ್ಚಿನ ಬೆಲೆಗೆ ಹರಾಜಾಗಬಹುದೆಂದು ಎಲ್ಲರೂ ಹೇಳುತ್ತಿದ್ದರು. ಆದರೇ ಇದಕ್ಕೆ ತದ್ವಿರುದ್ದ ಎಂಬಂತೆ ಭಾರತ ತಂಡದ ಮಾಜಿ ಆಟಗಾರ ಹೈದರಾಬಾದ್ ನ ಕಲಾತ್ಮಕ ಬ್ಯಾಟ್ಸಮನ್ ವಿ.ವಿ.ಎಸ್.ಲಕ್ಷ್ಮಣ್ , ಕೆ.ಎಲ್.ರಾಹುಲ್ ಅಲ್ಲ, ಆತನ ಬದಲು ಈತನ ಹಿಂದೆ ಎಲ್ಲಾ ಫ್ರಾಂಚೈಸಿಗಳು ಮುಗಿಬಿದ್ದು ಖರೀದಿಸಲು ಮುಂದಾಗುತ್ತವೆ ಎಂದು ಭವಿಷ್ಯ ನುಡಿದಿದ್ದಾರೆ.
ಅಷ್ಟಕ್ಕೂ ಆತ ಬೇರೆ ಯಾರೂ ಅಲ್ಲ. ಆರ್ಸಿಬಿಯ ಪ್ರಮುಖ ಸ್ಪಿನ್ನರ್ ಆಗಿದ್ದ ಯುಜವೇಂದ್ರ ಚಾಹಲ್. ಹೌದು ಬಹಳ ಬುದ್ದಿವಂತ ಹಾಗೂ ಚಾಣಾಕ್ಷ ಸ್ಪಿನ್ನರ್ ಎಂದು ಹೆಸರುವಾಸಿಯಾಗಿರುವ ಯುಜವೇಂದ್ರ ಚಾಹಲ್, ಟಿ 20 ಕ್ರಿಕೇಟ್ ನಲ್ಲಿ ವಿಕೇಟ್ ಟೇಕಿಂಗ್ ಬೌಲರ್ ಎಂದು ಕರೆಸಿಕೊಳ್ಳುತ್ತಿದ್ದರು. ಆರ್ಸಿಬಿ ಪರ ಸಹ ಹೆಚ್ಚು ವಿಕೇಟ್ ಕಬಳಿಸಿದ ಕೀರ್ತಿ ಚಾಹಲ್ ಗೆ ಸಲ್ಲುತ್ತದೆ. ಈ ಭಾರಿ ಆರ್ಸಿಬಿ ಯುಜವೇಂದ್ರ ಚಾಹಲ್ ರನ್ನ ರಿಟೇನ್ ಮಾಡಿಕೊಳ್ಳದ ಕಾರಣ, ಚಾಹಲ್ ಮೆಗಾ ಹರಾಜಿನಲ್ಲಿ ಇದ್ದಾರೆ. ಹಾಗಾಗಿ ಚಾಹಲ್ ರನ್ನ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಎಲ್ಲಾ ಹತ್ತು ಫ್ರಾಂಚೈಸಿಗಳು ಮುಗಿ ಬೀಳಲಿದ್ದು, ಕೆ.ಎಲ್.ರಾಹುಲ್ ಗಿಂತ ಯುಜವೇಂದ್ರ ಚಾಹಲ್ ರವರೇ ಹೆಚ್ಚು ಮೊತ್ತಕ್ಕೆ ಬಿಕರಿಯಾಗಬಹುದು ಎಂದು ಲಕ್ಷ್ಮಣ್ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.
Comments are closed.