ದೊಡ್ಡ ಪರದೆಯಲ್ಲಿ ದೂಳೆಬ್ಬಿಸಿ, ಮಿಷಿನರಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಅಖಂಡ ಚಿತ್ರ ಚಿಕ್ಕ ಪರದೆಯ ಮೇಲೆ ಯಾವಾಗ ಬರುತ್ತಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಈ ವರ್ಷದ ಅತ್ಯಂತ ಹೆಚ್ಚು ಸದ್ದು ಮಾಡಿರುವ ಚಿತ್ರರಂಗವೆಂದರೆ ತೆಲುಗು ಚಿತ್ರರಂಗ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಅದರಲ್ಲೂ ಕೂಡ ನಟ ಸಿಂಹ ಬಾಲಯ್ಯ ನಟನೆಯ ಅಖಂಡ ಚಿತ್ರ ಬಾಕ್ಸಾಫೀಸ್ ನಲ್ಲಿ ಯಾರು ಕೂಡ ಊಹಿಸಲಾಗದಂತಹ ಕಲೆಕ್ಷನ್ ಮಾಡಿತ್ತು. ಬಾಲಯ್ಯನವರ ಬೇಡಿಕೆ ತೆಲುಗು ಚಿತ್ರರಂಗದಲ್ಲಿ ಮುಗಿದು ಹೋಯಿತು ಎಂದು ಆಡಿಕೊಳ್ಳುತ್ತಿದ್ದ ವರಿಗೆ ಅಖಂಡ ಚಿತ್ರದ ಮೂಲಕ ಬಾಲಯ್ಯ ಅವರು ಸರಿಯಾದ ತಿರುಗೇಟು ನೀಡಿದ್ದಾರೆ.
ಮಾಸ್ ನಿರ್ದೇಶಕರಾಗಿರುವ ಬೋಯಾಪತಿ ರವರ ಜೊತೆಗೆ ಸೇರಿ ಬಾಲಯ್ಯ ನವರು ಬರೋಬ್ಬರಿ ಹ್ಯಾಟ್ರಿಕ್ ವಿಜಯವನ್ನು ಸಾಧಿಸಿದ್ದಾರೆ. ಕೇವಲ ಹತ್ತೇ ದಿನದಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದಂತಹ ಸಾಧನೆಯನ್ನು ಅಖಂಡ ಚಿತ್ರ ಮಾಡಿತ್ತು. ಚಿತ್ರದ ಕಥೆ ಮೇಕಿಂಗ್ ಪ್ರೇಕ್ಷಕರ ಮನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಬಾಲಯ್ಯನವರ ಪಾತ್ರವೂ ಕೂಡ ಕೇವಲ ಅಭಿಮಾನಿಗಳಿಗೆ ಮಾತ್ರವಲ್ಲದೆ ನ್ಯೂಟ್ರಲ್ ಪ್ರೇಕ್ಷಕರಿಗೆ ಕೂಡ ಇಷ್ಟವಾಗಿತ್ತು. ದೊಡ್ಡ ಪರದೆ ಮೇಲೆ ನೋಡಿದ್ದ ಅಖಂಡ ಚಿತ್ರವನ್ನು ಚಿಕ್ಕ ಪರದೆ ಮೇಲೆ ನೋಡಲು ಪ್ರೇಕ್ಷಕರು ಕಾತರರಾಗಿದ್ದರು. ಚಿತ್ರತಂಡ ಇದರ ಕುರಿತಂತೆ ಅಧಿಕೃತವಾಗಿ ಘೋಷಣೆ ಮಾಡದಿದ್ದರೂ ಕೂಡ ಈಗ ಅದರ ದಿನಾಂಕ ತಿಳಿದುಬಂದಿದೆ.
ಅಖಂಡ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಡಿಸ್ನಿ ಹಾಟ್ ಸ್ಟಾರ್ ಪಡೆದುಕೊಂಡಿತ್ತು. ಇದರ ಪ್ರಕಾರ ಅಖಂಡ ಚಿತ್ರ ಇದೆ ಅಪ್ಲಿಕೇಶನ್ ನಲ್ಲಿ ಜನವರಿ 12ರಿಂದ ಪ್ರಸಾರಗೊಳ್ಳಲಿದೆ. ಸ್ಟಾರ್ ಮಾ ಸಂಸ್ಥೆ ಸ್ಯಾಟಲೈಟ್ ಹಕ್ಕುಗಳನ್ನು ಪಡೆದುಕೊಂಡಿದ್ದು ಜನವರಿ 27ರಿಂದ ಟೆಲಿಕಾಸ್ಟ್ ಆಗಲಿದೆ. ಇಷ್ಟು ಮಾತ್ರವಲ್ಲದೆ ಅಖಂಡ ಚಿತ್ರ ಹಿಂದಿ ಡಬ್ಬಿಂಗ್ ರೈಟ್ಸ್ ನಲ್ಲಿ ಕೂಡ 20 ಕೋಟಿ ರೂಪಾಯಿ ಪಡೆದುಕೊಂಡಿದೆ. ಅಖಂಡ ಚಿತ್ರ ಹಿಂದಿಯಲ್ಲಿ ಕೂಡ ರಿಮೇಕ್ ಆಗುವ ಸಾಧ್ಯತೆ ಇದ್ದು ಅಂದುಕೊಂಡಂತೆ ಆದರೆ ಬಾಲಯ್ಯನವರ ಪಾತ್ರವನ್ನು ಅಕ್ಷಯ್ ಕುಮಾರ್ ಅವರು ಅಥವಾ ಅಜಯ್ ದೇವನ್ ನಿರ್ವಹಿಸುವ ಸಾಧ್ಯತೆ ಹೆಚ್ಚಳವಾಗಿದೆ.
Comments are closed.