ಎಲ್ಲರೂ ಕುರುಡ ಹುಡುಗನನ್ನು ಪ್ರೀತಿಸಿ, ಕುರುಡ ಬಾಯ್ ಫ್ರೆಂಡ್ ಸಿಗುವುದು ಅದೃಷ್ಟ ಎಂದ ಹುಡುಗಿ. ಕಾರಣಗಳೇನಂತೆ ಗೊತ್ತೇ?? ಯಾಕೆ ಎಂದು ವಿವರಣೆ ನೀಡಿ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇಂದಿನ ಕಾಲದ ಹುಡುಗಿಯರಿಗೆ ಅವರ ಕನಸಿನ ರಾಜಕುಮಾರ ಎನ್ನುವವನು ಪ್ರತಿಯೊಂದು ವಿಧದಲ್ಲೂ ಕೂಡ ಪರ್ಫೆಕ್ಟ್ ಆಗಿರಬೇಕು. ಯಾವುದೇ ಒಂದು ಕೊರತೆ ಕಂಡರೂ ಕೂಡ ಆತನನ್ನು ರಿಜೆಕ್ಟ್ ಮಾಡುತ್ತಾರೆ. ಆದರೆ ಇಲ್ಲೊಬ್ಬ ಹುಡುಗಿಗೆ ಪರ್ಫೆಕ್ಟ್ ಆಗಿರುವ ಹುಡುಗನೂ ಬೇಡ ಸುಂದರವಾಗಿರುವ ಹುಡುಗನೂ ಬೇಡ. ಆಕೆ ಒಬ್ಬ ಕುರುಡನ ಜೊತೆಗೆ ಇದ್ದಾಳೆ. ಇತ್ತೀಚಿಗಷ್ಟೇ ನಿಯಾ ಎಸ್ಪರೆಂಜಾ ಎನ್ನುವ ಯುವತಿ ತನ್ನ ಟಿಕ್ ಟಾಕ್ ನಲ್ಲಿ ಕುರುಡ ಬಾಯ್ಫ್ರೆಂಡ್ ಹೊಂದಿರುವುದರಿಂದಾಗಿ ಇರುವ ಲಾಭಗಳು ಏನು ಎಂಬುದರ ಕುರಿತಂತೆ ವಿಡಿಯೋ ಮಾಡಿದ್ದು ಇದು ಸಾಕಷ್ಟು ವೈರಲ್ ಆಗಿದೆ. ಇದೇ ಯುವತಿ ಕುರುಡ ಬಾಯ್ ಫ್ರೆಂಡ್ ಜೊತೆ ಡೇಟ್ ಮಾಡುತ್ತಿರುವುದು.
ಇಷ್ಟು ಮಾತ್ರವಲ್ಲದೆ ಆ ಯುವತಿ ವಿಡಿಯೋದಲ್ಲಿ ಕುರುಡ ಬಾಯ್ಫ್ರೆಂಡ್ ಹೊಂದಿದ್ದರೆ ಯಾವೆಲ್ಲ ಪ್ರಯೋಜನ ಇರುತ್ತದೆ ಎಂಬುದರ ಕುರಿತಂತೆ ಕೂಡ ವಿವರವಾಗಿ ಹೇಳಿದ್ದಾರೆ. ಇದನ್ನು ಕೇಳಿದ ಮೇಲೆ ನೀವು ಕೂಡ ಇದೇ ರೀತಿ ಕುರುಡ ಬಾಯ್ಫ್ರೆಂಡ್ ಹೊಂದುವುದರಲ್ಲಿ ಯಾವುದೇ ಅನುಮಾನವಿಲ್ಲ ವಂತೆ. ಹಾಗಿದ್ದರೆ ಆ ಅಂಶಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. 1 ಪ್ರತಿಯೊಬ್ಬ ಹುಡುಗ ಒಬ್ಬ ಹುಡುಗಿ ಜೊತೆ ಕಮಿಟ್ ಆದಮೇಲೆ ಕೂಡ ಬೇರೆ ಒಬ್ಬ ಸುಂದರಿಯ ಜೊತೆಗೆ ಸಂಬಂಧ ಹೊಂದಲು ಪ್ರಯತ್ನಿಸುತ್ತಾನೆ ಅಥವಾ ಆಕೆ ಜೊತೆಗೆ ಫ್ಲರ್ಟ್ ಮಾಡಲು ಬಯಸುತ್ತಾರೆ. ಆದರೆ ಅಂಧ ಬಾಯ್ ಫ್ರೆಂಡ್ ಅದನ್ನು ಮಾಡಲು ಚಾನ್ಸೇ ಇಲ್ಲ. ಹೀಗಾಗಿ ಹುಡುಗಿ ಕೂಡ ಯಾವುದೇ ಅನುಮಾನವಿಲ್ಲದೆ ನೆಮ್ಮದಿಯಾಗಿ ಆತನ ಜೊತೆ ಇರಬಹುದು.
2 ಮತ್ತೊಂದು ಪ್ರಮುಖವಾಗಿ ಪ್ರತಿಯೊಬ್ಬ ಹುಡುಗಿ ಕೂಡ ತನ್ನ ಹುಡುಗ ಎದುರು ಚೆನ್ನಾಗಿ ಕಾಣಬೇಕು ಎಂಬುದಾಗಿ ಚೆನ್ನಾಗಿ ಮೇಕಪ್ ಅಥವಾ ಡ್ರೆಸ್ ಮಾಡಿಕೊಳ್ಳಲು ಸಾಕಷ್ಟು ದುಬಾರಿ ವೆಚ್ಚವನ್ನು ಮಾಡುತ್ತಾರೆ. ಆದರೆ ಇಲ್ಲಿ ಹುಡುಗ ಕುರುಡನಾಗಿ ಇರುವುದರಿಂದಾಗಿ ಆತ ನಿಮ್ಮ ಒಳ್ಳೆಯ ವ್ಯಕ್ತಿತ್ವವನ್ನು ಮಾತ್ರ ಕಾಣಲು ಸಾಧ್ಯ ನಿಮ್ಮ ಮೇಕಪ್ ಅನ್ನು ಅಲ್ಲ. ಇದು ಕೂಡ ಹುಡುಗಿಯರಿಗೆ ಲಾಭದಾಯಕ ವಾದದ್ದು ಎಂಬುದಾಗಿ ಇಲ್ಲಿ ಗಮನಿಸಬಹುದಾಗಿದೆ.
3 ಒಂದು ವೇಳೆ ಕಣ್ಣು ಇರುವ ಹುಡುಗನಿಗಾದರೆ ಸರ್ಪ್ರೈಸ್ ಅಥವಾ ಏನಾದರೂ ಗಿಫ್ಟ್ ನೀಡುವ ಪ್ಲಾನಿಂಗ್ ಮಾಡಬೇಕಾದರೆ ಅವನಿಂದ ರಹಸ್ಯವಾಗಿ ವಿಚಾರಗಳನ್ನು ನೀಡಬೇಕಾಗುತ್ತದೆ. ಆದರೆ ಕುರುಡನ ಆಗಿರುವ ಹುಡುಗನೆದುರು ಯಾವುದೇ ಸರ್ಪ್ರೈಸ್ ಪ್ಲಾನಿಂಗ್ ಕೂಡ ಮಾಡಬಹುದು ಆತನಿಗೆ ತಿಳಿಯುವುದಿಲ್ಲ. ಯಾಕೆಂದರೆ ಆತನಿಗೆ ಕಣ್ಣು ಕಾಣುವುದಿಲ್ಲ ಹೀಗಾಗಿ ಆತನ ಎದುರೇ ಎಲ್ಲಾ ಪ್ಲಾನಿಂಗ್ ಮಾಡಿದರು ಕೂಡ ಆತನಿಗೆ ಗೊತ್ತಾಗುವುದಿಲ್ಲ.
4 ಇನ್ನೊಂದು ಪ್ರಯೋಜನವೇನೆಂದರೆ ಯಾವಾಗ ಬೇಕಾದರೂ ಕೂಡ ತನ್ನ ಕುರುಡ ಬಾಯ್ ಫ್ರೆಂಡ್ ನ ಫೋಟೋವನ್ನು ಹುಡುಗಿ ಕ್ಲಿಕ್ಕಿಸಬಹುದಾಗಿದೆ. ಆ ಹುಡುಗನಿಗೆ ಇದು ತಿಳಿಯುವುದು ಕೂಡ ಇಲ್ಲ. ಇದು ಕೂಡ ಒಂದು ಮಹತ್ವವಾದ ಲಾಭ ಎಂದು ಹೇಳಬಹುದಾಗಿದೆ. ಇದರಿಂದಾಗಿ ತನ್ನ ಹುಡುಗನ ನ್ಯಾಚುರಲ್ ಫೋಟೋ ಹುಡುಗಿಗೆ ದೊರೆಯುತ್ತದೆ.
5 ಕೊನೆಯ ಕಾರಣವನ್ನು ಹೇಳುತ್ತಾ ಅವಳು ಹೇಳುತ್ತಾಳೆ ಕುರುಡ ಬಾಯ್ಫ್ರೆಂಡ್ ಇರುವ ಕಾರಣದಿಂದಾಗಿ ಕಾರಿನಲ್ಲೇ ಆಗಲಿ ಅಥವಾ ಬೈಕಿನಲ್ಲೇ ಆಗಲಿ ಹಿಂದೆ ಕುಳಿತು ಕೊಳ್ಳಬೇಕೆಂಬ ಅವಶ್ಯಕತೆ ಇರುವುದಿಲ್ಲ ನೀವು ವಾಹನವನ್ನು ಚಲಾಯಿಸಬಹುದಾದಂತಹ ಸಂಪೂರ್ಣ ಸ್ವಾತಂತ್ರ್ಯವಿರುತ್ತದೆ ಎಂಬುದಾಗಿ ಹೇಳುತ್ತಾಳೆ. ಅವಳು ಹೇಳಿರುವ ಅಂಶಗಳ ಕುರಿತು ನಿಮ್ಮ ಅನಿಸಿಕೆ ಏನೆಂಬುದನ್ನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.
Comments are closed.