ನೂರಾರು ಕೋಟಿಯ ಒಡತಿಯಾಗಿದ್ದರೂ ಹೊಸ ಉದ್ಯೋಗಕ್ಕೆ ಸೇರಿಕೊಂಡ ಸಚಿನ್ ಪುತ್ರಿ. ಮೊದಲ ಪ್ರಯತ್ನದಲ್ಲಿಯೇ ಬಾರಿ ಯಶಸ್ಸು. ಏನು ಕೆಲಸ ಗೊತ್ತೇ??
ನಮಸ್ಕಾರ ಸ್ನೇಹಿತರೇ ಸಚಿನ್ ತೆಂಡೂಲ್ಕರ್ ಕ್ರಿಕೇಟ್ ಜಗತ್ತಿನ ದೇವರು. ಇದುವರೆಗೂ ಸಚಿನ್ ಅಂತರಾಷ್ಟ್ರೀಯ ಕ್ರಿಕೇಟ್ ನಲ್ಲಿ ನಿರ್ಮಿಸಿದ ದಾಖಲೆಗಳನ್ನ ಇದುವರೆಗೂ ಯಾರು ಮುರಿಯಲು ಸಾಧ್ಯವಿಲ್ಲ. ಸಚಿನ್ ನಿವೃತ್ತಿ ನಂತರ ಮುಂಬೈ ಇಂಡಿಯನ್ಸ್ ನ ಮೆಂಟರ್ ಆಗಿ, ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ನಿ ಅಂಜಲಿ, ಪುತ್ರ ಅರ್ಜುನ್ ಹಾಗೂ ಪುತ್ರಿ ಸಾರಾ ಜೊತೆ ಸುಖ ಸಂಸಾರ ನಡೆಸುತ್ತಿದ್ದಾರೆ.
ಈ ನಡುವೆ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ಕ್ರಿಕೇಟಿಗ ಶುಭಮಾನ್ ಗಿಲ್ ಜೊತೆ ಗಾಸಿಪ್ ಕಾಲಂ ನಲ್ಲಿ ಸಾರಾ ಹೆಸರು ಕೇಳಿ ಬಂದಿತ್ತು. ನಂತರ ಸಾರಾ ಆಗಲಿ ಅಥವಾ ಶುಭಮಾನ್ ಆಗಲಿ ಆ ವಿಷಯದ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡಿರಲಿಲ್ಲ. ಇನ್ನು ತಾಯಿ ಅಂಜಲಿ ತೆಂಡೂಲ್ಕರ್ ರಂತೆ ಎಂ.ಬಿ.ಬಿ.ಎಸ್ ವಿದ್ಯಾರ್ಥಿಯಾಗಿದ್ದ ಸಾರಾ , ಈಗ ಹೊಸ ವೃತ್ತಿಯನ್ನ ಆಯ್ದುಕೊಂಡಿದ್ದು, ಆ ವೃತ್ತಿಯ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.
ಸದ್ಯ ಮಾಡೆಲ್ ಆಗಿರುವ ಸಾರಾ ಅಜಿಯೋ ಹಾಗೂ ಅಜಿಯೋ ಲಕ್ಸ್ ಎಂಬ ಫ್ಯಾಶನ್ ಮಟೀರಿಯಲ್ ಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಪ್ರಾಡಕ್ಟ್ ಗಳ ಜಾಹೀರಾತೀ ಲಂಡನ್ ಹಾಗೂ ಸ್ವಿಜರಲ್ಯಾಂಡ್ ಮುಂತಾದೆಡೆ ಶೂಟಿಂಗ್ ನಡೆದಿದ್ದು ಸದ್ಯ ಎಲ್ಲೆಡೆ ಪ್ರಸಾರವಾಗುತ್ತಿವೆ. ಮಾಡೆಲಿಂಗ್ ವೃತ್ತಿಯಲ್ಲಿ ಯಶಸ್ವಿಯಾಗಲೆಂದು ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.
Comments are closed.