ಇರಲಾರದೆ ಇರುವ ಬಿಟ್ಟುಕೊಂಡರು ಅಂದರೆ ಇದೇನಾ?? ಮದುವೆಯಾಗಲು ಹೊರಟ 60 ವರ್ಷದ ತಾತಪ್ಪ. ಆದರೆ ಸುಂದರಿ ಆಂಟಿ ಮಾಡಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ವಯಸ್ಸಲ್ಲದ ವಯಸ್ಸಿನಲ್ಲಿ ಮದುವೆ ಆದರೆ ಏನಾಗುತ್ತದೆ ಎನ್ನುವುದಕ್ಕೆ ಇಂದು ನಾವು ಹೇಳಹೊರಟಿರುವ ನಿಜ ಜೀವನ ದೃಷ್ಟಾಂತವೇ ನಿಮಗೆ ಜೀವಂತ ಉದಾಹರಣೆಯಾಗಬಹುದು. ನಾವು ಇಂದು ಮಾತನಾಡಲು ಹೊರಟಿರುವುದು 60ವರ್ಷದ ರೂಪದಾಸ್ ಎನ್ನುವ ಮುದುಕನ ಕುರಿತಂತೆ. ಈತನ ಪತ್ನಿ ಸಾಕಮ್ಮ 1991 ರಲ್ಲಿ ತೀರಿ ಹೋಗಿರುತ್ತಾರೆ. ಹೀಗಾಗಿ ರೂಪದಾಸ್ ಒಂಟಿ ಜೀವನದಿಂದ ಬೇಸತ್ತು ಹಲವಾರು ವರ್ಷಗಳ ನಂತರ ಮತ್ತೆ ಎರಡನೇ ಮದುವೆಯಾಗುವ ಯೋಚನೆಯನ್ನು ಮಾಡುತ್ತಾನೆ. ಈತ ಮೂರು ಸಾವಿರ ರೂಪಾಯಿಯನ್ನು ಮ್ಯಾಟ್ರಿಮೋನಿಯಲ್ಲಿ ಕೊಟ್ಟು ತನ್ನ ಪ್ರೊಫೈಲ್ ರಿಜಿಸ್ಟರ್ ಮಾಡಿಕೊಳ್ಳುತ್ತಾನೆ.
ನನ್ನ ಬಳಿ ಸಾಕಷ್ಟು ಆಸ್ತಿ ಇದೆ ಇಷ್ಟು ಮಾತ್ರವಲ್ಲದೆ ದಾಂಪತ್ಯ ಜೀವನದಲ್ಲಿ ಕೂಡ ನನ್ನಿಂದ ಚೆನ್ನಾಗಿರಬಹುದು ಎಂಬುದಾಗಿ ಬರೆದುಕೊಳ್ಳುತ್ತಾನೆ. ಇದನ್ನು ನೋಡಿ ಶಶಿಕಲಾ ಎನ್ನುವ 35 ವರ್ಷದ ಆಂಟಿ ಒಬ್ಬಳು ನಾನು ಮದುವೆಯಾಗಲು ಸಿದ್ದಳಿದ್ದೇನೆ ಎಂಬುದಾಗಿ ಹೇಳಿ ಮದುವೆಯಾಗಲು ಒಪ್ಪಿಕೊಂಡು ಇಬ್ಬರು ಕೂಡ ಎಲ್ಲರೂ ಸಮ್ಮುಖದಲ್ಲಿ ಮದುವೆಯಾಗುತ್ತಾರೆ. ರೂಪ ದಾಸ್ ಶಶಿಕಲಾ ಳನ್ನು ಮದುವೆಯಾದ ನಂತರ ಚೆನ್ನಾಗಿ ನೋಡಿಕೊಳ್ಳುತ್ತಾನೆ ಅವಳು ಬೇಕು ಎಂದು ಹೇಳಿದ್ದನ್ನೆಲ್ಲ ಕೊಡಿಸುತ್ತಾನೆ. ಇಷ್ಟು ಮಾತ್ರವಲ್ಲದೆ ಮನೆಯ ಬೀರುವಿನ ಕೀಯನ್ನು ಕೂಡ ನೀಡುತ್ತಾನೆ ಹಾಗೂ ಈ ಮನೆಯ ಜವಾಬ್ದಾರಿ ಇನ್ನೂ ಮುಂದೆ ನಿನ್ನದೇ ಎಂಬುದಾಗಿ ಜವಾಬ್ದಾರಿಯನ್ನು ಕೂಡ ನೀಡುತ್ತಾನೆ.
ಒಂದು ದಿನ ಯಾವುದೋ ಕಾರಣಕ್ಕೆ ರೂಪದಾಸ್ ತನ್ನ ಪತ್ನಿ ಶಶಿಕಲಾಳನ್ನು ಕೂಗುತ್ತಾನೆ. ಆದರೆ ಆಕೆ ಪ್ರತಿಕ್ರಿಯಿಸುವುದಿಲ್ಲ. ಆಗ ಈತ ಹೋಗಿ ನೋಡಿದಾಗ ಅಲ್ಲಿ ಅವಳು ಇರುವುದಿಲ್ಲ ಮನೆಯ ಬೀರು ಖಾಲಿ ಖಾಲಿ ಆಗಿಹೋಗಿತ್ತು. ರೂಪದಾಸ್ ಮೊದಲನೇ ಹೆಂಡತಿಯ ಚಿನ್ನಾಭರಣಗಳು ಮನೆಯಲ್ಲಿರುವ ನಗನಾಣ್ಯ ಎಲ್ಲವೂ ಕೂಡ ಶಶಿಕಲಾ ಪಾಲಾಗಿತ್ತು. ಮನೆಯಲ್ಲಿರುವ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣಗಳನ್ನು ಹಾಗೂ 3 ಲಕ್ಷ ರೂಪಾಯಿ ನಗದನ್ನು ಶಶಿಕಲಾ ಕದ್ದುಕೊಂಡು ಹೋಗಿರುತ್ತಾಳೆ. ಇಳಿವಯಸ್ಸಿನಲ್ಲಿ ಆಂಟಿಯನ್ನು ಮದುವೆಯಾಗಲು ಹೋದ ತಾತನಿಗೆ ಈ ರೀತಿ ಆಗಿದ್ದು ನೋಡಿದರೆ ಕಂಡಿತವಾಗಿ ಬೇಜಾರಾಗುತ್ತದೆ. ಆದರೆ ಈ ವಯಸ್ಸಿನಲ್ಲಿ ಆಸೆಪಟ್ಟು ಮದುವೆಯಾಗುವ ಉಸಾಬರಿ ಯಾಕೆ ಬೇಕಿತ್ತು ಎಂದು ಕೂಡ ಅನಿಸುತ್ತದೆ.
Comments are closed.