ನೇರ ಸಂದರ್ಶನ ಆಯ್ಕೆಯಾದ್ರೆ ತಿಂಗಳಿಗೆ ಒಂದು ಲಕ್ಷ ಸಂಬಳ; ಯಾವ ಹುದ್ದೆ ಗೊತ್ತೇ ಇಲ್ಲಿದೆ ಸಂಪೂರ್ಣ ಮಾಹಿತಿ
ನಮಸ್ಕಾರ ಸ್ನೇಹಿತರೇ, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ತನ್ನಲಿರುವ ಖಾಲಿ ಇರುವ ಹುದ್ದೆಗಳನ್ನು ಸೂಕ್ತ ಅಭ್ಯರ್ಥಿಗಳಿಂದ ಭರ್ತಿ ಮಾಡುವ ಪ್ರಕ್ರಿಯೆಗೆ ಮುಂದಾಗಿದೆ. ದೇಶದ ಹಲವು ಖಾಸಗಿ ಹಾಗೂ ಸರ್ಕಾರಿ ವಲಯಗಳಲ್ಲಿ ಉದ್ಯೋಗಾವಕಾಶಗಳು ಇತ್ತೀಚಿಗೆ ಹೆಚ್ಚಾಗಿ ಸೃಷ್ಟಿಯಾಗುತ್ತಿದ್ದು ನಿಮ್ಮ ಅರ್ಹತೆಗೆ ತಕ್ಕ ಉದ್ಯೋಗವನ್ನು ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದೀಗ ಸ್ಟೀಲ್ ಅಥಾರೆಟಿ ಆಫ್ ಇಂಡಿಯಾದಲ್ಲಿ (ಸೆಲ್) ಖಾಲಿ ಇರುವ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಬಗ್ಗೆ ಇನ್ನಷ್ಟು ತಿಳಿಯೋಣ ಬನ್ನಿ.
ಸೆಲ್ ನಲ್ಲಿಒಟ್ಟೂ ಖಾಲಿ ಇರುವ ಹುದ್ದೆಗಳು 24. ಅವುಗಳಲ್ಲಿ ಸ್ಪೆಷಲಿಸ್ಟ್ – 08 ಹುದ್ದೆಗಳು ಹಾಗೂ ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್- 16 ಹುದ್ದೆಗಳು ಖಾಲಿ ಇವೆ. ಸೆಲ್ ನ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಕಾಲೇಜಿನಿಂದ ಎಂಬಿಬಿಎಸ್, ಎಂಎಸ್, ಎಂಡಿ ಪೂರ್ಣಗೊಳಿಸಿರುವ ದಾಖಲೆ ಹೊಂದಿರಬೇಕು. ಸ್ಪೆಷಲಿಸ್ಟ್ ಹುದ್ದೆಗೆ ಪಿಜಿ ಡಿಪ್ಲೋಮಾ/ ಪದವಿ, ಎಂಬಿಬಿಎಸ್ ಅಗಿರಬೇಕು ಹಾಗೂ ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್- ಎಂಬಿಬಿಎಸ್ ಮುಗಿಸಿರಬೇಕು. ಇನ್ನು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರ ವಯಸ್ಸು ವಯಸ್ಸು 69 ವರ್ಷ ಮೀರಿರಬಾರದು.
ಜನವರಿ ತಿಂಗಳಿನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ನೇರ ಸಂದರ್ಶನವು ಫೆಬ್ರವರಿ 9 ರಿಂದ 11ರ ವರೆಗೆ ನಡೆಯಲಿದೆ. ಪಶ್ಚಿಮ ಬಂಗಾಳದ ಪಶ್ಚಿಮ ಬರ್ಧಮಾನ್ನಲ್ಲಿ ಆಯ್ಕೆಯಾದ ಅಭ್ಯರ್ಥಿಗೆ ಉದ್ಯೋಗ ನೀಡಲಾಗುತ್ತದೆ. ಇನ್ನು ಜಿಡಿಎಂಒ ಹುದ್ದೆಗೆ ತಿಂಗಳಿಗೆ 70,000, ಸ್ಪೆಷಲಿಸ್ಟ್ (ಪಿಜಿ ಡಿಪ್ಲೊಮಾ) ಹುದ್ದೆಗೆ 90,000 ರೂ. ಹಾಗೂ ಸ್ಪೆಷಲಿಸ್ಟ್ (ಪಿಜಿ ಡಿಗ್ರಿ)- ತಿಂಗಳಿಗೆ 1,20,000 ರೂ. ಸಂಬಳ ಸಿಗಲಿದೆ. ದಾಖಲಾತಿ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಸಂದರ್ಶನವು ಈ ಕೆಳಗಿನ ಸ್ಥಳದಲ್ಲಿ ನಡೆಯಲಿದೆ. ED ಕಚೇರಿ (M&HS), DSP ಮುಖ್ಯ ಆಸ್ಪತ್ರೆ ದುರ್ಗಾಪುರ- 713205, ಪಶ್ಚಿಮ್ ಬರ್ಧಮಾನ್.
Comments are closed.