ಈ ಫೇಮಸ್ ನಟ ನಟಿಯರು ಲವ್ ಮಾಡಿ ಮತ್ತೆ ಬ್ರೇಕ್ ಅಪ್ ಮಾಡಿಕೊಂಡಿದ್ದು ಯಾಕೆ ಗೊತ್ತಾ?? ಅಚ್ಚರಿಯ ಕಾರಣಗಳ ಸಮೇತ ವಿವರಣೆ.
ನಮಸ್ಕಾರ ಸ್ನೇಹಿತರೇ, ಸಾಕಷ್ಟು ಸೆಲಿಬ್ರೆಟಿ ನಟ ನಟಿಯರು, ಪರಸ್ಪರ ಪ್ರೀತಿಸಿ, ಕೊನೆಯೆ ಬೇರೆ ಬೇರೆ ಕಾರಣಗಳಿಂದ ದೂರವಾಗುತ್ತಾರೆ. ಸಿನಿಮಾ ರಂಗದಲ್ಲಿ ಎಷ್ಟೇ ಯಶಸ್ಸನ್ನು ಕಂಡಿದ್ದರೂ ಕೊನೆಗೆ ಪ್ರೀತಿ ಸಂಬಂಧದ ವಿಷಯಕ್ಕೆ ಬಂದಾಗ ಸೋಲನ್ನು ಅನುಭವಿಸುತ್ತಾರೆ. ಹಾಗಾದರೆ ಅಂಥ ಯಾವ ಸೆಲಿಬ್ರೆಟಿ ಜೋಡಿ, ಪ್ರೀತಿಸಿ ಇಂದು ದೂರ ದೂರವಾಗಿದ್ದಾರೆ ನೋಡೋಣ ಬನ್ನಿ.
ದಕ್ಷಿಣ ಭಾರತದ ಮೆಚ್ಚಿನ ತ್ರಿಶಾ ಮತ್ತು ಬಾಹುಬಲಿ ಖ್ಯಾತಿಯ ರಾಣಾ ದಗ್ಗುಪಾಟಿ ಕೆಲವು ಕಾಲ ಪ್ರೀತಿಸಿ, ಒಟ್ಟಾಗಿ ಮೀಡಿಯಾ ಮುಂದೆಯೂ ಕಾಣಿಸಿಕೊಂಡು, ನಂತರ ಕಾರಣಾಂತರಗಳಿಂದ ಬೇರೆಯಾಗುತ್ತಾರೆ. ಕಾಲಿವುಡ್ ನ ಪ್ರಮುಖ ನಟಿಯಾದ ಶೃತಿ ಹಾಸನ್ ಮೈಕಲ್ ನನ್ನು ಪ್ರೀತಿಸಿ ನಂತರ ಮದುವೆಯಾಗದೇ ಸಂಬಂಧಕ್ಕೆ ತಿಲಾಂಜಲಿ ಇಟ್ಟರು. ಇನ್ನು ನಟಿ ಹಂಸಿಕಾ ಮೊಂಡ್ವಾನಿ ಹಾಗು ನಟ ಸಿಂಬು ಕೂಡ ಜೊತೆಯಾಗಿ ಸಮಾರಂಭಗಳಲ್ಲಿಯೂ ಕಾಣಿಸಿಕೊಂಡು ಕೊನೆಗೆ ವಯಕ್ತಿಕ ಕಾರಣಗಳಿಗೆ ದೂರವಾಗಬೇಕಾಯಿತು. ನಂತರ ಸಿಂಬು ನಟಿ ನಯನ ತಾರಾ ಜೊತೆಯೂ ಪ್ರೀತಿ ಸಂಬಂಧ ಬೆಳೆಸಿ ಅದನ್ನೂ ಅರ್ಧದಲ್ಲಿಯೇ ಮೊಟಕು ಗೊಳಿಸಿದರು.
ಇನ್ನು ನಟಿ ಇಲಿಯಾನ ಆಸ್ಟ್ರೇಲಿಯಾದ ಫೋಟೋಗ್ರಾಫರ್, ಆಂಡ್ರೋ ಅವರನ್ನು ಪ್ರೀತಿಸಿ, ಸ್ವಲ್ಪ ಸಮಯದ ಬಳಿಕ ಬ್ರೇಕ್ ಅಪ್ ಮಾಡಿಕೊಂಡರು. ಹಾಗೆಯೇ ತೆಲಗು ಚಿತ್ರರಂಗದ ಬಹು ಬೇಡಿಕೆಯ ನಟಿ ಸಮಂತ ನಟ ಸಿದ್ದಾರ್ಥ್ ಅವರನ್ನು ಪ್ರೀತಿಸಿ ಕೊನೆಗೆ ಕಾರಣಾಂತರಗಳಿಂದ ದೂರವಾದರು ಇದು ಅಭಿಮಾನಿಗಳಿಗೂ ಕೂಡ ನೋವಿನ ಸಂಗತಿಯಾಗಿತ್ತು. ನಟಿ ವರಲಕ್ಷ್ಮಿ ಹಾಗೂ ವಿಶಾಲ್ ಇಬ್ಬರೂ ಟಾಲಿವುಡ್ ನ ಫೇಮಸ್ ಕಲಾವಿದರೆ. ಇವರೂ ಕೂಡ ಪ್ರೀತಿಸುತ್ತಿದ್ದುದು ಅಭಿಮಾನಿಗಳಿಗೂ ಖುಷಿ ಕೊಟ್ಟಿತ್ತು. ಆದರೆ ಈ ಖುಷಿ ಹೆಚ್ಚು ದಿನ ಉಳಿದಿರಲಿಲ್ಲ. ಇಬ್ಬರೂ ಕಾರಣಾಂತರಗಳಿಂದ ದೂರಾದರು.
ದಕ್ಷಿಣ ಭಾರತ ಸಿನಿಮಾ ಕ್ಷೇತ್ರವನ್ನು ಆಳುತ್ತಿರುವ ನಟಿ ನಯನಾ ತಾರಾ. ನಯನಾ ತಾರಾ ಹಾಗೂ ನಟ ಪ್ರಭುದೇವ್ ಮೂರುವರೆ ವರ್ಷಗಳ ಕಾಲ ಜೊತೆಗಿದ್ದು ಮತ್ತೆ ದೂರಾದರು. ಇದೀಗ ನಯನ ತಾರಾ ತಮಿಳು ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಲಿವಿನ್ ಸಂಬಂಧದಲ್ಲಿದ್ದಾರೆ. ಇನ್ನು ಕನ್ನಡ ಚಿತ್ರರಂಗಕ್ಕೆ ಬಂದರೆ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಒಂದಾದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ಯುವ ನಟ ರಕ್ಷಿತ್ ಶೆಟ್ಟಿ ಇಬ್ಬರೂ ಪ್ರೀತಿಸಿ, ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದು ಕನ್ನಡಿಗರಿಗೆ ಖುಷಿಯ ವಿಚಾರವಾಗಿತ್ತು. ಆದರೆ ದುರದೃಷ್ಟವಶಾತ್ ಇವರಿಬ್ಬರೂ ಕೂಡ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ.
Comments are closed.