ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಬಂಪರ್ ಆಫರ್, ಬರೋಬ್ಬರಿ ಎರಡು ಲಕ್ಷ ಸಹಾಯಧನ, ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತೇ??
ನಮಸ್ಕಾರ ಸ್ನೇಹಿತರೇ, ಇಂದು ಅಂತರ್ಜಲಮಟ್ಟ ಕುಸಿತದಿಂದಾಗಿ ಹಲವಾರು ರೈತರಿಗೆ ಬೆಳೆಯನ್ನು ಬೆಳೆಯಲು ಸರಿಯಾಗಿ ಜಮೀನಿಗೆ ನೀರು ಸಿಗದಂತಾಗಿದೆ. ಇದಕ್ಕಾಗಿ ರೈತರು ತಮ್ಮ ಜಮೀನಿನಲ್ಲಿ ಬೋರ್ವೆಲ್ ಅಥವಾ ತೆರೆದ ಬಾವಿಗಳನ್ನು ನಿರ್ಮಿಸುವ ಅನಿವಾರ್ಯತೆ ಇದೆ. ಆದರೆ ಇದಕ್ಕೆ ತಗಲುವ ವೆಚ್ಚ ಕೂಡ ಅಧಿಕವಾಗಿದ್ದು ಸಣ್ಣ ರೈತರಿಗೆ ಇದು ಬಹಳ ಕಷ್ಟದ ಕೆಲಸ. ಹಾಗಾಗಿ ಸರ್ಕಾರದ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಸರ್ಕಾರ ರೈತರಿಗೆ ಸಹಾಯ ಧನವನ್ನು ನೀಡುತ್ತದೆ. ಫಲಾನುಭವಿಗಳು ವೈಯಕ್ತಿಕ ಅರ್ಜಿ ಸಲ್ಲಿಸುವ ಮೂಲಕ ಎರಡು ಲಕ್ಷದವರೆಗೆ ಸಹಾಯಧನವನ್ನು ಪಡೆಯಬಹುದು.
ಗಂಗಾ ಕಲ್ಯಾಣ ಯೋಜನೆ 2021, ಇದು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಮೀಸಲಿರುವ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ, ಬೋರ್‌ವೆಲ್ ಕೊರೆಯುವ ಮೂಲಕ ಅಥವಾ ತೆರೆದ ಬಾವಿ ತೋಡುವ ಮೂಲಕ ಕೃಷಿ ಭೂಮಿಗೆ ನೀರಾವರಿ ಸೌಲಭ್ಯಗಳನ್ನು ಒದಗಿಸಲಾಗುಗುವುದು. ನಂತರ ಪಂಪ್ ಸೆಟ್‌ಗಳು ಮತ್ತು ಪರಿಕರಗಳನ್ನು ಅಳವಡಿಸಲಾಗುತ್ತದೆ. ಈಗಾಗಲೇ ಅಂತರ್ಜಲ ಕುಸಿದಿರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಿಗೆ 4.50 ಲಕ್ಷ ರೂ.ಗೆ ನಿಗದಿಪಡಿಸಿದೆ ಸರ್ಕಾರ.
ಇನ್ನು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವವರು ಅಲ್ಪಸಂಖ್ಯಾತರಾಗಿರಬೇಕು ಹಾಗೂ ಸಣ್ಣ ರೈತರಾಗಿರಬೇಕು. ಜೊತೆಗೆ ವಾರ್ಷಿಕ ಆದಾಯ 40000 ಮೀರಿರಬಾರದು. ಕನಿಷ್ಠ ಎರಡು ಎಕರೆ ಹಾಗೂ ಗರಿಷ್ಠ 5 ಎಕರೆ ಜಮೀನನ್ನು ಮಾತ್ರ ಹೊಂದಿರಬೇಕು. ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. ಇನ್ನು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧಿಕೃತ ಸೈಟ್ https://kmdc.karnataka.gov.in/ ಮೂಲಕ ಅರ್ಜಿ ಸಲ್ಲಿಸಬೇಕು. ಯೋಚನೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾಗಿದ್ದಎಲ್ಲಿ +91 08022864720 ಈ ಸಹಾಯವಾಣಿ ನಂಬರ್ ಗೆ ಕರೆ ಮಾಡಬಹುದು ಅಥವಾ [email protected] ಗೆ ಇ-ಮೇಲ್ ಕಳುಹಿಸಬಹುದು. ಅಥವಾ kmdc.karnataka.gov.in ಗೆ ಭೇಟಿ ನೀಡಿ.
Comments are closed.