ಚೈತ್ರ ಕೊಟ್ಟೂರು ಅಭಿಮಾನಿಗಳಿಗೆ ಮತ್ತೆ ಸಿಹಿ ಸುದ್ದಿ, ಖಡಕ್ ಪಾತ್ರದಲ್ಲಿ ಮತ್ತೆ ನಿಮ್ಮ ಮುಂದೆ ಬರುತ್ತಿದ್ದರೆ, ಯಾವ ಪಾತ್ರ ಗೊತ್ತೇ??
ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ನಲ್ಲಿ ಒಮ್ಮೆ ಭಾಗವಹಿಸಿದರೆ ಸಾಕು ಅವರಿಗೆ ಖಂಡಿತವಾಗಿ ಜನಪ್ರಿಯತೆ ಸಿಕ್ಕೆ ಸಿಗುತ್ತದೆ ಎಂಬುದಾಗಿ ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ನಂಬಿಕೆಯಿದೆ. ಇದರಂತೆ ಇದರಲ್ಲಿ ಸ್ಪರ್ಧಿಸಿರುವ ಬಹುತೇಕ ಎಲ್ಲಾ ಸ್ಪರ್ಧಿಗಳು ಕೂಡ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಇದೇ ಬಿಗ್ ಬಾಸ್ ಮೂಲಕ ಈಗಾಗಲೇ ಜನಪ್ರಿಯತೆ ಪಡೆದುಕೊಂಡಿರುವ ಸ್ಪರ್ಧಿಯೊಬ್ಬರ ಕುರಿತಂತೆ ಹಿಂದಿನ ಲೇಖನದಲ್ಲಿ ನಾವು ಹೇಳಲು ಸಿದ್ದರಿದ್ದೇವೆ. ಹೌದು ನಾವು ಮಾತನಾಡುತ್ತಿರುವುದು ಚೈತ್ರಾ ಕೋಟೂರು ರವರ ಕುರಿತಂತೆ.
ಚೈತ್ರ ರವರು ಬಿಗ್ ಬಾಸ್ ನಲ್ಲಿ ಕೂಡ ಹಲವಾರು ವಿಚಾರಗಳಿಗಾಗಿ ಸುದ್ದಿಯಾಗಿದ್ದರು. ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ಕೂಡ ಹಲವಾರು ಆಲ್ಬಮ್ ಸಾಂಗ್ ಗಳಲ್ಲಿ ಕಾಣಿಸಿಕೊಂಡಿದ್ದರು. ಇಷ್ಟು ಮಾತ್ರವಲ್ಲದೆ ಮದುವೆ ಹಾಗು ಪ್ರೀತಿ ವಿಚಾರದಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಇವೆಲ್ಲವನ್ನೂ ಹೊರತುಪಡಿಸಿ ನಾವು ಈಗ ಮಾತನಾಡಲು ಹೊರಟಿರುವುದೇ ಬೇರೆ ವಿಚಾರ. ಹೌದು ಚೈತ್ರ ರವರು ಹಲವಾರು ಸಮಯಗಳಿಂದ ಯಾವುದೇ ಸುದ್ದಿಯಲ್ಲೂ ಕೂಡ ಇರದೆ ಸೈಲೆಂಟ್ ಆಗಿದ್ದರು.
ಈಗ ಮತ್ತೊಮ್ಮೆ ದೊಡ್ಡ ಸುದ್ದಿಯ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ಹೌದು ಚೈತ್ರ ರವರು ಹೊಸ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುವ ಮೂಲಕ ದೊಡ್ಡ ಸುದ್ದಿಯಲ್ಲಿ ಶಾಮೀಲಾಗಿದ್ದಾರೆ. ಚಾರ್ಜ್ ಶೀಟ್ ಎನ್ನುವ ಚಿತ್ರದಲ್ಲಿ ಚೈತ್ರಾ ರವರು ಈಗ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರವನ್ನು ಗುರುರಾಜ ಕುಲಕರ್ಣಿ ರವರು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಚೈತ್ರಾ ರವರು ಡೆಪ್ಯೂಟಿ ಕಮಿಷನರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರ ಕ್ರೈಂ ಥ್ರಿಲ್ಲರ್ ಆಗಿದೆ. ಚಿತ್ರ ಶಾಲಾ ವಿದ್ಯಾರ್ಥಿಯೊಬ್ಬಳು ಮರಣದ ಸುತ್ತ ನಡೆಯುವಂತಹ ಕುತೂಹಲಕಾರಿ ಘಟನೆ ಯನ್ನು ಒಳಗೊಂಡಿದೆ. ಬಿಗ್ ಬಾಸ್ ಖ್ಯಾತಿಯ ಚೈತ್ರಾ ಅವರು ಸಿನಿಮಾದಲ್ಲಿ ನಟನೆ ಮಾಡುವ ಮೂಲಕ ಕಮ್ ಬ್ಯಾಕ್ ಮಾಡುತ್ತಿರುವುದರ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
Comments are closed.