Neer Dose Karnataka
Take a fresh look at your lifestyle.

ಕನ್ಯಾಕುಮಾರಿ ಧಾರಾವಾಹಿಯಲ್ಲಿ ಮಿಂಚುತ್ತಿರುವ ಆಸಿಯಾ ಫಿರ್ದೋಸ್ ನಿಜಕ್ಕೂ ಯಾರು ಗೊತ್ತೇ?? ಅವರ ಹಿನ್ನಲೆ ಏನು ಗೊತ್ತೇ??

ಇತ್ತೀಚೆಗಂತೂ ನಮ್ಮ ಕಿರುತೆರೆಯಲ್ಲಿ ಹಲವಾರು ಹೊಸ ಪ್ರತಿಭೆಗಳಿಗೆ ಹೊಸ ಹೊಸ  ರಿಯಾಲಿಟಿ ಶೋನಲ್ಲಿ ಅವಕಾಶಗಳು ಸಿಕ್ಕಿದೆ. ಇದರಿಂದ ಅದೆಷ್ಟೋ ಹೊಸ ಮುಖಗಳು ಜಗತ್ತಿಗೆ ಪರಿಚಯಿಸಿಕೊಂಡಿದೆ. ಹೀಗೆ ಹೊಸ ಎಂಟ್ರಿ ಯಲ್ಲಿ ಎಲ್ಲರ ಮನೆಮಾತಾಗಿರುವುದು ಕನ್ಯಾಕುಮಾರಿ ಖ್ಯಾತಿಯ ಕನ್ನಿಕಾ ಪಾತ್ರದಾರಿಯಾದ “ಆಸಿಯಾ ಫಿರ್ದೋಸ್”. ಈಕೆಗೆ  ನಟನೆಯ ಬಗ್ಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ. ಹಾಗಾಗಿ ಆಸಿಯಾ ಬಿಬಿಎ ಓದುತ್ತಿದ್ದರು. ಪದವೀಧರೆ ಆದ ಬಳಿಕ, ಇವರ ರೂಪ ನೋಡಿ ಬಹಳಷ್ಟು ಮಂದಿ ನೀವು ಯಾಕೆ ನಟನೆಯ ಹಾದಿಯನ್ನು ಹಿಡಿಯಬಾರದು ಎಂದು ಸಲಹೆಯನ್ನು ನೀಡುತ್ತಿದ್ದರು.

ಅವರೆಲ್ಲರ ಮಾತನ್ನು ಬಹಳ ಗಂಭೀರವಾಗಿ ತೆಗದುಕೊಂಡ ಆಸಿಯಾ, ಹಲವಾರು ಬಾರಿ ಹಲವಾರು ಕಡೆ ಆಡಿಷನ್ ನೀಡುತ್ತಿದ್ದರು. ಕೊನೆಗೆ “ನಾನು ನನ್ನ ಕನಸು” ಎಂಬ ಧಾರಾವಾಹಿಗೆ ಆಯ್ಕೆಯಾದರು. ಈ ವಿಷಯ ತಿಳಿದ ಆಸಿಯಾ ಫಿರ್ದೋಸ್ ಬಹಳ ಆಸಕ್ತಿಯಿಂದ ಹಾಗೂ ಶ್ರದ್ಧೆಯಿಂದ ಧಾರಾವಾಹಿಯಲ್ಲಿ ನಟಿಸುತ್ತಾ ಬರುತ್ತಿದ್ದರು. ಆದರೆ ಕರೊನಾ ಕಾರಣದಿಂದ ಇಡೀ ದೇಶ ಸ್ತಬ್ಧ ವಾಗುವಂತಹ ಪರಿಸ್ಥಿತಿ ಎದುರಾಯಿತು. ಆಗ ಇವರು ನಟಿಸುತ್ತಿದ್ದ ಧಾರಾವಾಹಿಯ ಶೂಟಿಂಗ್ ಸಂಪಪೂರ್ಣವಾಗಿ ನಿಂತುಹೋಯಿತು. ಆಗ ತಾನೇ ನಟನೆಯಲ್ಲಿ ಅರಳುತ್ತಿದ್ದ ಹೂವನ್ನು ಕಿತ್ತು ಬಿಸಾಕಿದಂತೆ ಆಗಿತ್ತು. ಹೀಗಿದ್ದರೂ ಬೇಸರ ಮಾಡಿಕೊಳ್ಳದೆ ನಟನೆಯಲ್ಲಿ ಏನಾದರು ಸಾಧಿಸಬೇಕು ಎಂದು ದೃಢ ನಿರ್ಧಾರ ಮಾಡಿ, ಇದೆ ದಾರಿಯಲ್ಲಿ ಮುಂದುವರೆಯಲು ಖಾಸಗಿ ವಾಹಿನಿಯ ನಿರೂಪಕಿಯಾದರು.

ಈ ವೃತ್ತಿ ನಿಭಾಯಿಸುತ್ತ ಅಡಿಷನ್ ಮತ್ತು ಮಾಡಲಿಂಗ್ ಬಗ್ಗೆ ಹೆಚ್ಚು ಗಮನ ಹರಿಸುತ್ತ ಸತತ ಪ್ರಯತ್ನ ಮಾಡುತ್ತಿದ್ದರು. ಅವರ ನಿರೂಪಣಾ ವೃತ್ತಿ ಮತ್ತು ಆಕ್ಟಿಂಗ್ ಕನಸು ಎರಡನ್ನು ಸಮಾನವಾಗಿ ತೂಗಿಸಿಕೊಳ್ಳುತ್ತಾ ಹೋಗುವ ಸಂಧರ್ಭದಲ್ಲಿ ಅವರ ಬಳಿ ಬಂದಿದ್ದು ಕನ್ಯಾ ಕುಮಾರಿ ಧಾರವಾಹಿಗಾಗಿ ಖಳನಾಯಕಿಯನ್ನು ಹುಡುಕುತ್ತಿರುವ ವಿಚಾರ. ಖಳನಾಯಕಿಯ ಪಾತ್ರಕ್ಕಾಗಿ ಆಡಿಷನ್ ಕೊಟ್ಟರು ಆದರೆ ಈಕೆಯನ್ನು ಕನ್ಯಾಕುಮಾರಿ ತಂಡ ತಿರಸ್ಕರಿಸಿತ್ತು. ಈತರಹ ತಿರಸ್ಕರಣೆ ಆಸಿಯಾ ಫಿರ್ದೋಸ್ ಅವರಿಗೆ ಹೊಸದಾಗಿರಲಿಲ್ಲ, ಹಾಗಾಗಿ ತಮ್ಮ ನಿರೂಪಣೆ ಮತ್ತೆ ಮಾಡೆಲಿಂಗ್ ನಲ್ಲಿ ತೊಡಗಿಸಿಕೊಂಡಾಗ, ಇದೇ ಕನ್ಯಾಕುಮಾರಿ ಧಾರವಹಿ ತಂಡ ಇವರನ್ನು ಹುಡುಕಿಬಂದರು, ಆದರೆ ಈ ಬಾರಿ ಖಳ  ನಾಯಕಿಯ ಪಾತ್ರಕ್ಕಾಗಿ ಅಲ್ಲ..

ಅದೇ ಧಾರಾವಾಹಿಯ ನಾಯಕಿಯಾಗಬೇಕೆಂದು ಈ ತಂಡ ಆಸಿಯಾ ಫಿರ್ದೋಸ್ ಅವರ ಬಳಿ ಬಂದಿತ್ತು.  ಬಹಳ ಸಂತೋಷದಿಂದ ಈ ಪಾತ್ರವನ್ನು ಒಪ್ಪಿಕೊಂಡರು ಆಸಿಯಾ, ಇಲ್ಲಿಯವರೆಗೂ ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಬಂದಿದ್ದಾರೆ. ಈ ಪಾತ್ರದ ಮೂಲಕ ಹಲವಾರು ಜನರ ಮನಸನ್ನು ಗೆದ್ದು ಅಭಿಮಾನಿಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. ಇದಕ್ಕೆ ಸಾಕ್ಷಿಯಾಗಿ, ಇತ್ತೀಚೆಗೆ ಆಸಿಯಾ ಫಿರ್ದೋಸ್ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಯೊಬ್ಬರು, ಅನಾಥಾಶ್ರಮದಲ್ಲಿ ಮಕ್ಕಳಿಗೆ ಬಟ್ಟೆ ಹಾಗೂ ಊಟವನ್ನು ನೀಡಿ,  ಅಲ್ಲಿನ ಮಕ್ಕಳಿಂದ ಆಸಿಯಾ ಫಿರ್ದೋಸೆ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದರು. ಆ ವಿಡಿಯೊವನ್ನು  ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇವರ ಈ ಯಶಸ್ಸಿನ ದಾರಿ ಹೀಗೆ ಸಾಗಲಿ ಹಲವಾರು ಪ್ರಾಜೆಕ್ಟ್ ಇವರ ಕೈ ಸೇರಲಿ ಎಂದು ನಾವೆಲ್ಲರೂ ಹಾರೈಸೋಣ.

Comments are closed.