ಅಲಿಯಾ ಭಟ್ ಹಾಗೂ ರಣ್ಬೀರ್ ಕಪೂರ್ ರವರ ಮದುವೆ, ಮಕ್ಕಳು ಹಾಗೂ ಅವರ ಹೊಂದಾಣಿಕೆ ಕುರಿತು ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ ಹೇಳಿದ್ದೇನು ಗೊತ್ತೇ??
ಬಾಲಿವುಡ್ ನಲ್ಲಿ ಸಧ್ಯದ ಹಾಟ್ ಟಾಪಿಕ್ ಎಂದರೆ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆ ವಿಚಾರ. ಇವರಿಬ್ಬರ ಪ್ರೀತಿ ಪ್ರೇಮದ ಬಗ್ಗೆ ಸಾಕಷ್ಟು ಗುಸು ಗುಸುಗಳು ಕೇಳಿ ಬರುತ್ತಿದ್ದವು. ನಂತರ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನುವ ವಿಷಯ ಜೋರಾಗಿಯೇ ಸದ್ದು ಮಾಡಿತು. ಇದೀಗ ಇವರಿಬ್ಬರ ಮದುವೆ ವಿಚಾರ ದೊಡ್ಡದಾಗಿ ಸುದ್ದಿಯಾಗುತ್ತಿದೆ. ಈ ತಿಂಗಳಿನಲ್ಲೇ ರಣಬೀರ್ ಆಲಿಯಾ ಮದುವೆ ನಡೆಯಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಇವರಿಬ್ಬರ ಹುಟ್ಟಿದ ದಿನಾಂಕದ ಆಧಾರದ ಮೇಲೆ ಕೆಲವು ಜ್ಯೋತಿಷಿಗಳು ಟಿವಿ ಚಾನೆಲ್ ನಲ್ಲಿ ಕುಳಿತು, ರಣಬೀರ್ ಆಲಿಯಾ ಮದುವೆ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ರಣಬೀರ್ ಆಲಿಯಾ ಮದುವೆ, ರಿಸೆಪ್ಶನ್, ಬ್ಯಾಚುಲರ್ ಪಾರ್ಟಿ ಎಲ್ಲದರ ಬಗ್ಗೆಯೂ ಸುದ್ದಿಗಳು ಕೇಳಿ ಬರುತ್ತಿವೆ. ಆದರೆ ಈ ಇಬ್ಬರು ಕಲಾವಿದರಿಂದ ಅಥವಾ ಇವರ ಕುಟುಂಬ ವರ್ಗದವರಿಂದ ಮದುವೆ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಆದರೆ ಆಲಿಯಾ ರಣಬೀರ್ ಮದುವೆ ಬಗ್ಗೆ ಸುದ್ದಿಗಳು ಕೇಳಿಬಂದ ನಂತರ ಹಿಂದಿ ಕಿರುತೆರೆ ವಾಹಿನಿಗಳಲ್ಲಿ ಇವರಿಬ್ಬರ ವೈವಾಹಿಕ ಜೀವನ ಹೇಗಿರುತ್ತದೆ ಎನ್ನುವುದರ ಬಗ್ಗೆ ಭವಿಷ್ಯ ನುಡಿಯಲಾಗುತ್ತಿದೆ. ಖಾಸಗಿ ವಾಹಿನಿಯೊಂದರಲ್ಲಿ ಜ್ಯೋತಿಷಿಯೊಬ್ಬರು, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆ ಬಗ್ಗೆ ಭವಿಷ್ಯ ಹೇಳಿದ್ದಾರೆ.
ಆ ಜ್ಯೋತಿಷಿ ಹೇಳಿದ ಪ್ರಕಾರ, ಇವರಿಬ್ಬರಿಗೂ ಈಗ ಗುರುಬಲ ಶುರುವಾಗುತ್ತಿದ್ದು, ಮದುವೆಯಾಗಲು ಇದು ಸೂಕ್ತವಾದ ಸಮಯ ಆಗಿದೆ. ಏಪ್ರಿಲ್ ತಿಂಗಳು ಬಿಟ್ಟರೆ ಮದುವೆಗೆ ಒಳ್ಳೆಯ ಸಮಯ ಜೂನ್ ತಿಂಗಳಾಗಿದ್ದು, ಏಪ್ರಿಲ್ ನಲ್ಲೇ ಇವರಿಬ್ಬರ ಮದುವೆ ನಡೆದರೆ ಒಳ್ಳೆಯದು ಎನ್ನಲಾಗುತ್ತಿದೆ. ಜೊತೆಗೆ, ಆಲಿಯಾ ಭಟ್ ಅವರಿಗೆ ಕುಟುಂಬದ ಮೇಲೆ ಕಾಳಜಿ ಹೆಚ್ಚಾಗಿರುತ್ತದೆ, ಅದು ಅವರ ಸ್ವಭಾವ. ಇನ್ನು ರಣಬೀರ್ ಕಪೂರ್ ಮಿಸ್ಟರ್ ಪರ್ಫೆಕ್ಟ್ ಆಗಿದ್ದಾರೆ. ಹಾಗಾಗಿ ಇವರಿಬ್ಬರ ನಡುವೆ ಹೊಂದಾಣಿಕೆ ಚೆನ್ನಾಗಿರಲಿದೆ. ಜಗಳವಾದರು ಇಬ್ಬರು ಅನುಸರಿಸಿಕೊಂಡು ಚೆನ್ನಾಗಿರುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
Comments are closed.