Neer Dose Karnataka
Take a fresh look at your lifestyle.

ತಾವೇ ಕಥೆ ಬರೆದರೂ ಕೂಡ ವಿಷ್ಣುವರ್ಧನ್ ರವರು ಆ ಸಿನಿಮಾದಲ್ಲಿ ನಟನೆ ಮಾಡಲಿಲ್ಲ ಯಾಕೆ ಗೊತ್ತೇ??

ಕನ್ನಡ ಚಿತ್ರರಂಗದಲ್ಲಿ ಹೃದಯವಂತಿಕೆಗೆ ಹೆಸರಾಗಿ ಇದ್ದವರು ಸಾಹಸಸಿಂಹ ಡಾ.ವಿಷ್ಣುವರ್ಧನ್. ಈಗಲೂ ವಿಷ್ಣುದಾದ ಅಭಿಮಾನಿಗಳ ಮನಸ್ಸಿನಲ್ಲಿ ಅಜರಾಮರವಾಗಿ ಉಳಿದಿದ್ದಾರೆ. ವಿಷ್ಣುವರ್ಧನ್ ಅವರು ಎಂಥಾ ಅದ್ಭುತವಾದ ನಟ ಎನ್ನುವ ವಿಚಾರ ನಮಗೆಲ್ಲಾ ಗೊತ್ತಿದೆ. ನಟನೆ ಜೊತೆಗೆ ವಿಷ್ಣುದಾದ ಅವರು ಗಾಯಕನಾಗಿ ಸಹ ಗುರುತಿಸಿಕೊಂಡಿದ್ದರು. ತಮ್ಮ ಸಿನಿಮಾಗೆ ಮತ್ತು ಹಲವು ಭಕ್ತಿ ಗೀತೆಗಳನ್ನು ಹಾಡಿದ್ದರು. ಇದೆಲ್ಲದನ್ನು ಹೊರತುಪಡಿಸಿ ವಿಷ್ಣುವರ್ಧನ್ ಅವರಲ್ಲಿ ಮತ್ತೊಂದು ವಿಶೇಷ ಆಸಕ್ತಿ ಇತ್ತು. ಅದೇ ಸಿನಿಮಾ ಕಥೆ ಬರೆಯುವ ಬಗ್ಗೆ.

ವಿಷ್ಣುದಾದ ಅವರ ಮನಸ್ಸಿನಲ್ಲಿ ಹಲವು ಕಥೆಗಳಿದ್ದವು, ಅವರ ಮನಸ್ಸಿನಲ್ಲಿದ್ದ ಒಂದು ಕಥೆ ಸಿನಿಮಾ ಸಹ ಆಯಿತು. ಆದರೆ ಆ ಸಿನಿಮಾದಲ್ಲಿ ವಿಷ್ಣುದಾದ ಅವರು ನಟಿಸಲಿಲ್ಲ. ಕನ್ನಡದ ಮತ್ತೊಬ್ಬ ಖ್ಯಾತ ನಟ ನಾಯಕನಾದರು. ವಿಷ್ಣುವರ್ಧನ್ ಅವರ ಮೋಜುಗಾರ ಸೊಗಸುಗಾರ, ಮದುವೆ ಮಾಡು ತಮಾಷೆ ನೋಡು, ಏಕದಂತ ಸಿನಿಮಾಗಳನ್ನು ನೋಡಿದರೆ, ಅವರಲ್ಲಿದ್ದ ಹಾಸ್ಯಪ್ರಜ್ಞೆ ಎಷ್ಟರ ಮಟ್ಟಗೆ ಇತ್ತು ಎಂದು ಗೊತ್ತಾಗುತ್ತದೆ. ವಿಷ್ಣುವರ್ಧನ್ ಅವರು ಬರೆದಿದ್ದ ಕಥೆ ಕೂಡ ಇದೇ ರೀತಿ ಹಾಸ್ಯಮಯವಾಗಿತ್ತು. ಅಷ್ಟಕ್ಕೂ ಆ ಕಥೆ ಯಾವುದು? ವಿಷ್ಣುದಾದ ಅವರ ಕತೆಗೆ ನಾಯಕನಾದವರು ಯಾರು? ತಿಳಿಸುತ್ತೇವೆ ನೋಡಿ..

90ರ ದಶಕದಲ್ಲಿ ನಿರ್ದೇಶಕ ಫಣಿ ರಾಮಚಂದ್ರ ಅವರು ಗಣೇಶ ಸೀರಿಸ್ ಸಿನಿಮಾಗಳ ಮೂಲಕ ಕನ್ನಡ ಸಿನಿಪ್ರಿಯರಿಗೆ ಮನರಂಜನೆಯ ರಸದೌತಣ ನೀಡಿದರು. ಗಣೇಶ ಸುಬ್ರಹ್ಮಣ್ಯ, ಗಣೇಶನ ಮದುವೆ, ಗಣೇಶನ ಗಲಾಟೆ, ಹೀಗೆ, ಅನಂತ್ ನಾಗ್ ಅವರು ನಾಯಕರಾಗಿ, ಫಣಿ ರಾಮಚಂದ್ರ ಅವರು ನಿರ್ದೇಶನ ಮಾಡಿದ ಗಣೇಶ ಸೀರೀಸ್ ಸೂಪರ್ ಹಿಟ್ ಆಗಿದ್ದವು. ಆದರೆ ಕೊನೆಯ ಒಂದೆರಡು ಗಣೇಶ ಸೀರೀಸ್ ಸಿನಿಮಾಗಳು ಅಂದುಕೊಂಡ ಹಾಗೆ ಯಶಸ್ಸು ಪಡೆಯದ ಕಾರಣ, ವಿಭಿನ್ನವಾದ ಹೊಸ ರೀತಿಯ ಕಥೆಗಾಗಿ ಫಣಿ ರಾಮಚಂದ್ರ ಅವರು ಹುಡುಕಾಟ ನಡೆಸುತ್ತಿದ್ದರು.

ಆಗ ಅವರಿಗೆ ನೆನಪಾಗಿದ್ದು, ವಿಷ್ಣುದಾದ. ಫಣಿ ರಾಮಚಂದ್ರ ಅವರೊಡನೆ ವಿಷ್ಣುವರ್ಧನ್ ಅವರು ಒಮ್ಮೆ ಮಾತನಾಡುವಾಗ, ತಮ್ಮ ಮನಸ್ಸಿನಲ್ಲಿದ್ದ ಕಥೆಯನ್ನು ಒಂದು ಎಳೆಯಾಗಿ ಹೇಳಿದ್ದರು. ಆ ಕಥೆ ನೆನಪಾಗಿ, ವಿಷ್ಣುವರ್ಧನ್ ಅವರನ್ನು ಫಣಿ ರಾಮಚಂದ್ರ ಅವರು ಭೇಟಿ ಮಾಡಿದರು. ಇಬ್ಬರ ನಡುವೆ ಒಳ್ಳೆಯ ಗೆಳೆತನ ಇದ್ದ ಕಾರಣ ವಿಷ್ಣುವರ್ಧನ್ ಅವರು ಸಂತೋಷವಾಗಿಯೇ ತಮ್ಮ ಕಥೆಯನ್ನು ಫಣಿರಾಮಚಂದ್ರ ಅವರಿಗೆ ನೀಡಿದರು. ಆ ಕಥೆ ಮತ್ಯಾವುದು ಅಲ್ಲ, ನಟ ಅನಂತ್ ನಾಗ್ ಮತ್ತು ನಟಿ ಸಿತಾರ ಅವರು ನಾಯಕ ನಾಯಕಿಯಾಗಿದ್ದ ಗಣೇಶ ಐ ಲವ್ ಯೂ ಸಿನಿಮಾ.

ಈ ಸಿನಿಮಾ ಒಂದು ವಿಶೇಷವಾದ ಲವ್ ಸ್ಟೋರಿ ಆಗಿತ್ತು. ಊನ ಎನ್ನುವುದು ನೋಡುವ ದೃಷ್ಟಿಕೋನದಲ್ಲಿ ಮಾತ್ರ ಇರುತ್ತದೆ, ಮನಸ್ಸಿನಲ್ಲಿ ಇರುವುದಿಲ್ಲ ಎನ್ನುವುದನ್ನು ತಿಳಿಸಿ ಹೇಳುವ ಅದ್ಭುತವಾದ ಕಥೆಯಾಗಿತ್ತು. ಈ ಕಥೆಯನ್ನು ಹಾಸ್ಯರೂಪವಾಗಿ ತೆಗೆದುಕೊಂಡು ಹೋಗಲಾಗಿದೆ. ಈ ಸಿನಿಮಾದ ಚಿತ್ರಕಥೆ ಬರೆದು, ನಿರ್ದೇಶನ ಮಾಡಿದವರು ಫಣಿ ರಾಮಚಂದ್ರ. ಈ ಸಿನಿಮಾ ಈಗಲೂ, ಕನ್ನಡದ ಎವರ್ ಗ್ರೀನ್ ಸಿನಿಮಾ ಎನ್ನಿಸಿಕೊಂಡಿದೆ. ಗಣೇಶ ಐ ಲವ್ ಯೂ ಸಿನಿಮಾ ಶುರುವಿನಲ್ಲಿ ವಿಷ್ಣುದಾದ ಬರುತ್ತಾರೆ.

ಸ್ಕ್ರಿಪ್ಟ್ ನೀಡಿ, ನಿಮಗೆ ಒಳ್ಳೆಯದಾಗಲಿ ಎಂದು ಹೇಳುತ್ತಾರೆ. ಆಗ ಕಥೆ, ಸಾಹಸಸಿಂಹ ವಿಷ್ಣುವರ್ಧನ್, ಎಂದು ತೋರಿಸಲಾಗುತ್ತದೆ. ಈ ಸಿನಿಮಾ ನೋಡಿದರೆ, ವಿಷ್ಣುದಾದ ಅವರು ಎಂಥಹ ಅದ್ಭುತವಾದ ಕಥೆಗಾರ ಎನ್ನುವುದು ಅರ್ಥವಾಗುತ್ತದೆ. ಈ ಸಿನಿಮಾ ಫಣಿ ರಾಮಚಂದ್ರ ಮತ್ತು ಅನಂತ್ ನಾಗ್ ಇಬ್ಬರಿಗೂ ಹೆಸರು ತಂದುಕೊಟ್ಟಿತು. ವಿಷ್ಣು ದಾದ ಅವರಲ್ಲಿ ಎಂಥಹ ಕಥೆಗಾರ ಇದ್ದಾರೆ ಎನ್ನುವುದು ಸಹ ಇದರಿಂದ ಸಾಬೀತಾಯಿತು

Comments are closed.