ಕರುನಾಡಿನ ಪ್ರೇಮ ಪಕ್ಷಿಗಳು ಪ್ರೀತಿ ಮಾಡುವಾಗ ಬರುತ್ತಿದ್ದ ಫೋನ್ ಬಿಲ್ ಎಷ್ಟು ಗೊತ್ತೇ?? ಅದೆಷ್ಟು ಮಾತನಾಡುತಿದ್ದರು ಉಪ್ಪಿ ಹಾಗೂ ಪ್ರಿಯಾಂಕಾ ಗೊತ್ತೇ??
ನಮ್ಮ ಕರ್ನಾಟಕದ ಮುದ್ದಾದ ಜೋಡಿಗಳ ಪೈಕಿ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕ ಅವರು ಸೇರಿಕೊಳ್ಳುತ್ತಾರೆ ಎಂದರೆ ತಪ್ಪಾಗಲಾರದು. ಆ ಜೋಡಿಗಳು ಮದುವೆ ಆಗುವವರೆಗೂ ತಾವು ಪ್ರೀತಿಸುತ್ತಿರುವ ವಿಚಾರ ಬಿಟ್ಟು ಕೊಡದೆ, ತಮ್ಮ ಪ್ರೀತಿಯನ್ನು ಬಹಳ ಗೌಪ್ಯವಾಗಿ ಇಟ್ಟವರು. ಬರಿ ಜನರಿಂದ ಮಾತ್ರವಲ್ಲ,ತಮ್ಮ ಮನೆಯವರಿಂದ ಕೂಡ ಅವರ ಪ್ರೀತಿಯ ವಿಚಾರ ಬಚ್ಚಿಟ್ಟು, ತಮ್ಮಬ್ಬರ ಲೋಕದಲ್ಲಿ ಮುಳುಗಿದ್ದ ಜೋಡಿಗಳು. ಆದರೆ ಒಂದು ಬಿಲ್ ಸಲುವಾಗಿ ಇವರಿಬ್ಬರ ಪ್ರೀತಿಯ ವಿಚಾರ ಪ್ರಿಯಾಂಕ ಅವರ ಮನೆಗೆ ತಿಳಿಯಿತು. ಅದೇ ಹೇಗೆ ಅಂತ ನಿಮಗೆಲ್ಲ ಗೊಂದಲ ಆಗುವುದು ಸಹಜ. ನಿಮ್ಮ ಗೊಂದಲಗಳಿಗೆಲ್ಲ ಉತ್ತರ ಪಡೆಯಲು ಮುಂದಿನ ಸಾಲುಗಳನ್ನು ಓದಿ.
‘ಪ್ರಿಯಾಂಕ ಮತ್ತು ಉಪೇಂದ್ರ’ ಅವರಿಗೆ ಪರಿಚಯ ವಾದದ್ದು “H2O” ಸಿನೆಮಾ ಮುಕಾಂತರ. ಈ ಸಿನಿಮಾದಿಂದ ಇವರಿಬ್ಬರ ಪರಿಚಯವಾಗಿ, ಪರಿಚಯ ಸ್ನೇಹವಾಗಿ, ಒಬ್ಬೊರೊಬ್ಬರನ್ನು ಅರಿತುಕೊಂಡು, ತಮ್ಮ ಇಚ್ಛೆ, ಅಭಿಪ್ರಾಯಗಳನ್ನು ಹಂಚಿಕೋಳ್ಳಲು ಶುರುಮಾಡಿದರು. ಇವರಿಬ್ಬರ ಅಭಿರುಚಿಗಳು ಮತ್ತು ಮನದ ಇಚ್ಛೆಗಳು ಒಂದೆ ಆದ್ದರಿಂದ ತಾವಿಬ್ಬರು ಒಟ್ಟಾಗಿ ಜೀವನ ನಡೆಸಿದರೆ ಬಹಳ ಸುಂದರವಾಗಿ ಇರಬಹುದು ಎಂಬ ನಂಬಿಕೆಯಿಂದ ತಮ್ಮ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ, ಮುಂದಿನ ಜೀವನದ ಸಮಯವನ್ನು ಒಟ್ಟಾಗಿ ಕಳೆಯಲು ನಿರ್ಧರಿಸಿದರು.
ಹೀಗಿ ಇವರಿಬ್ಬರ ಪ್ರೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತದೆ. ಅದೆಷ್ಟರ ಮಟ್ಟಿಗೆ ಎಂದರೆ ಬೆಳಿಗ್ಗೆ ಎಲ್ಲಾ ಒಟ್ಟಾಗಿ ಸಮಯ ಕಳೆದರು ಮತ್ತೆ ರಾತ್ರಿ ಫೋನ್ ನಲ್ಲಿ ಮಾತನಾಡುತ್ತಾ ಸಮಯ ಒಟ್ಟಾಗಿ ಕಳೆಯುತ್ತಿದ್ದರು. ಇವರಿಬ್ಬರು ಫೋನ್ ನಲ್ಲಿ ಎಷ್ಟು ಮಾತನಡುತ್ತಿದ್ದರೆಂದರೆ ಸುಮಾರು 10 ಗಂಟೆಗೆ ಶುರುವಾದ ಮಾತು ಬೆಳಗಿನ ಜಾವ 5 ಗಂಟೆಯ ವರೆಗೂ ನಡೆಯುತ್ತಲೇ ಇತ್ತು.
ಪ್ರಿಯಾಂಕ ಅವರ ಮನೆಯಲ್ಲಿ ಪ್ರತಿಬಾರಿ ಕೇವಲ 4 ರಿಂದ 5 ಸಾವಿರ ಬರುತ್ತಿದ್ದ ಬಿಲ್, ಬರೋಬ್ಬರಿ 40,000 ಸಾವಿರ ಬರಲು ಆರಂಭವಾಯಿತು. ಇದನ್ನು ಗಮನಿಸಿದ ಪ್ರಿಯಾಂಕ ಮನೆಯವರಿಗೆ ಕೊಂಚ ಅನುಮಾನ ಶುರುವಾಯಿತು. ಇದನ್ನು ಬಹಳ ಗಂಭೀರವಾಗಿ ತೆಗೆದುಕೊಂಡ ಪ್ರಿಯಾಂಕ ಅವರ ತಾಯಿ ಪ್ರಿಯಾಂಕ ಮತ್ತು ಉಪೇಂದ್ರ ಅವರು ಪ್ರೀತಿಸುತ್ತಿರುವ ವಿಚಾರವನ್ನು ತಿಳಿದುಕೊಂಡರು. ಇದಾದ ಬಳಿಕ ಕೆಲ ಸಮಯ ತೆಗೆದುಕೊಂಡು ಮನೆಯವರನೆಲ್ಲಾ ಒಪ್ಪಿಸಿ “2003” ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ “ಆಯುಷ್ ಮತ್ತು ಐಶ್ವರ್ಯ” ಎಂದು ಎಂಬ ತಮ್ಮ ಪ್ರೀತಿಯ ಮಕ್ಕೊಳೊಂದಿಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
Comments are closed.