ಒಂದು ಕಾಲದಲ್ಲಿ ಮಿಂಚಿ ಇನ್ನು ನಟನೆ ಮಾಡಬಹುದಾದರೂ ಕೂಡ ಕಣ್ಮರೆಯಾಗುತ್ತಿರುವ ಟಾಪ್ ನಟಿಯರು ಯಾರ್ಯಾರು ಗೊತ್ತೇ??
ಕನ್ನಡ ಚಿತ್ರರಂಗದಲ್ಲಿ ಇಂದಿನ ಪೀಳಿಗೆ ಶುರುವಾದ ಬಳಿಕ, ಮುದ್ದು ಮುಖದ ಸಾಕಷ್ಟು ನಟಿಯರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆರಂಭದ ದಿನಗಳಲ್ಲಿ ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳಲ್ಲಿ ಸಹ ನಟಿಸಿದರು. ಬೇಡಿಕೆಯನ್ನು ಸಹ ಉಳಿಸಿಕೊಂಡಿದ್ದರು. ಆದರೆ ನಂತರದ ದಿನಗಳಲ್ಲಿ ಏನಾಯಿತೋ ಏನೋ.. ಕೆಲವು ಕಲಾವಿದೆಯರು ಬೇರೆ ಭಾಷೆಗಳಲ್ಲಿ ಹೆಚ್ಚು ನಟಿಸಲು ಶುರು ಮಾಡಿದರು, ಇನ್ನು ಕೆಲವು ಕಲಾವಿದೆಯರು ಚಿತ್ರರಂಗದಿಂದಲೇ ದೂರವಾಗಿದ್ದಾರೆ. ಅಂತಹ ನಟಿಯರು ಯಾರ್ಯಾರು ಎಂದು ಇಂದು ನಿಮಗೆ ತಿಳಿಸುತ್ತೇವೆ ನೋಡಿ..
ಪ್ರಣೀತಾ ಸುಭಾಷ್ :- ಇವರು ಅಪ್ಪಟ ಬೆಂಗಳೂರಿನ, ಕರ್ನಾಟಕದ ದೇಸಿ ಪ್ರತಿಭೆ. ಡಿಬಾಸ್ ದರ್ಶನ್ ಅವರೊಡನೆ ಪೊರ್ಕಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು. ನಂತರ ದುನಿಯಾ ವಿಜಯ್, ಉಪೇಂದ್ರ ಸೇರಿದಂತೆ ಕನ್ನಡದ ಸ್ಟಾರ್ ಕಲಾವಿದರೊಡನೆ ನಟಿಸಿದರು. ಬಳಿಕ ತೆಲುಗು, ತಮಿಳು ಹಾಗೂ ಬಾಲಿವುಡ್ ಗು ಸಹ ಎಂಟ್ರಿ ಕೊಟ್ಟರು. ಆದರೆ ಈಗ ಇವರು ಕನ್ನಡ ಸಿನಿಮಾಗಳಲ್ಲಿ ನಟಿಸುವುದೇ ಕಡಿಮೆಯಾಗಿದೆ
ನಿಖಿತಾ ತುಕ್ರಾಲ್ :- ಮೂಲತಃ ಉತ್ತರ ಭಾರತದವರಾದರು, ಕನ್ನಡದಲ್ಲಿ ಸಹ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪುನೀತ್ ರಾಜ್ ಕುಮಾರ್, ದರ್ಶನ್ ಮತ್ತು ಸುದೀಪ್ ಮೂವರ ಜೊತೆಯಲ್ಲೂ ನಟನೆ ಮಾಡಿದ್ದಾರೆ. ಕನ್ನಡದ ಬಹು ಬೇಡಿಕೆಯ ನಟಿಯಾಗಿದ್ದಾ ನಿಖಿತಾ ಅವರು ಮದುವೆ ನಂತರ ನಟಿಸುವುದು ಕಡಿಮೆ ಮಾಡಿದ್ದಾರೆ.
ದೀಪಾ ಸನ್ನಿಧಿ :- ಡಿಬಾಸ್ ಅವರೊಡನೆ ಸಾರಥಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ದೀಪಾ ಸನ್ನಿಧಿ, ಇವರು ಪುನೀತ್ ರಾಜ್ ಕುಮಾರ್ ಅವರೊಡನೆ ಪರಮಾತ್ಮ ಸಿನಿಮಾದಲ್ಲಿ ನಟಿಸುವ ಮೂಲಕ ಇನ್ನಷ್ಟು ಜನಪ್ರಿಯತೆ ಮಾಡಿಕೊಂಡರು. ಹಲವು ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದರು, ಆದರೆ ಈಗ ದೀಪಾ ಸನ್ನಿಧಿ ಅವರು ಸಿನಿಮಾಗಳಲ್ಲಿ ನಟಿಸುತ್ತಿಲ್ಲ..
ಅಮೂಲ್ಯ :- ಮುದ್ದು ಮುಖದ ನಟಿ ಅಮೂಲ್ಯ ಅವರು ಬಾಲನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಕೆಲವೇ ವರ್ಷದಲ್ಲಿ ಹೀರೋಯಿನ್ ಆದರು. ಬಹುಬೇಡಿಕೆ ಹೊಂದಿದ್ದ, ಟಾಪ್ ನಟಿಯಾಗಿದ್ದರು ಅಮೂಲ್ಯ. ಆದರೆ ಮದುವೆಯಾದ ನಂತರ ಅಮೂಲ್ಯ ಅವರು ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿಬಿಟ್ಟರು.
ಐಂದ್ರಿತಾ ರೇ :- ಮೂಲತಃ ಡೆಂಟಿಸ್ಟ್ ಆಗಿರುವ ಐಂದ್ರಿತಾ ರೇ ಅವರು ಮೆರವಣಿಗೆ ಸಿನಿಮಾ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದರು..ಪೀಕ್ ನಲ್ಲಿರುವಾಗಲೇ ಸ್ಯಾಂಡಲ್ ವುಡ್ ನ ದೂದ್ ಪೇಡಾ ದಿಗಂತ್ ಅವರ ಜೊತೆ ಮದುವೆಯಾದರು. ಮದುವೆ ನಂತರ ಐಂದ್ರಿತ ರೇ ಅವರು ನಟನೆಯನ್ನು ಕಡಿಮೆ ಮಾಡಿದ್ದಾರೆ..
ಹರ್ಷಿಕಾ ಪೂಣಚ್ಚ :- ಇವರು ಕೊಡಗಿನ ಬೆಡಗಿ, ಹರ್ಷಿಕಾ ಅವರು ನಾಯಕಿಯಾಗಿ ಮತ್ತು ಎರಡನೇ ನಾಯಕಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಈಗ ಇವರು ಬೇರೆ ಕೆಲಸಗಳಲ್ಲಿ, ನಿರೂಪಣೆ ಕೆಲಸಗಳಲ್ಲಿ ಬ್ಯುಸಿ ಇರುವ ಕಾರಣ ಸಿನಿಮಾದಲ್ಲಿ ನಟಿಸುವುದನ್ನು ಕಡಿಮೆ ಮಾಡಿದ್ದಾರೆ.
ಶ್ರುತಿ ಹರಿಹರನ್ :- ಇವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಲೂಸಿಯಾ ಸಿನಿಮಾ ಮೂಲಕ. ಅದಾದ ಬಳಿಕ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ, ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿದರು. ಮೀಟು ಅರೋಪದಿಂದ ಬಹಳಷ್ಟು ಚರ್ಚೆಗೆ ಒಳಗಾದ ನಂತರ ಶ್ರುತಿ ಅವರು ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದ್ದಾರೆ.
ಮಯೂರಿ :- ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ಮಯೂರಿ, ಧಾರಾವಾಹಿ ಯಶಸ್ಸಿನಿಂದ ಮಯೂರಿ ಅವರು ಬೆಳ್ಳಿತೆರೆಗೂ ಎಂಟ್ರಿ ಕೊಟ್ಟರು. ಕೆಲವು ಯಶಸ್ವಿ ಕನ್ನಡ ಸಿನಿಮಾಗಳಲ್ಲಿ ಸಹ ನಟಿಸಿದರು. ತಮ್ಮ ಬಹುಕಾಲದ ಗೆಳೆಯ ಅರುಣ್ ಅವರೊಡನೆ ಮದುವೆಯಾದ ನಂತರ ಸಿನಿಮಾ ಇಂದ ದೂರ ಉಳಿದಿದ್ದಾರೆ ನಟಿ ಮಯೂರಿ.
Comments are closed.