ಅಪ್ಪು ರವರ ಜೊತೆ ಮಿಲನ ಹಾಗೂ ಪೃಥ್ವಿ ಸಿನೆಮಾದಲ್ಲಿ ನಟನೆ ಮಾಡಿರುವ ಪಾರ್ವತೀರವರ ನಿಜವಾದ ವಯಸ್ಸು ಎಷ್ಟು ಗೊತ್ತೇ??
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಡನೆ ಮಿಲನ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಪಾರ್ವತಿ ಮೆನನ್ ಅವರಿಗೆ ಕನ್ನಡದಲ್ಲಿ ದೊಡ್ಡ ಫ್ಯಾನ್ ಬೇಸ್ ಇತ್ತು. ಈಕೆ ಮೂಲತಃ ಮಲಯಾಳಿ ಆದರೂ ಕನ್ನಡ ಕಲಿತು, ಕನ್ನಡದಲ್ಲಿ ತಾವೇ ಡಬ್ ಮಾಡಿ, ಕನ್ನಡ ಸಂದರ್ಶನಗಳಲ್ಲಿ ಅಚ್ಚುಕಟ್ಟಾಗಿ ಕನ್ನಡ ಮಾತನಾಡುವ ಮೂಲಕ, ಕನ್ನಡ ಸಿನಿಪ್ರಿಯರಿಗೆ ಹತ್ತಿರವಾಗಿದ್ದರು. ಈ ನಟಿ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದು ಕಡಿಮೆ, ಆದರೆ ಈಗಲೂ ಮಿಲನ ಸಿನಿಮಾವನ್ನು ಯಾರು ಮರೆತಿಲ್ಲ. ಅಂಜಲಿ ಪಾತ್ರ ಎಲ್ಲರ ಫೇವರೆಟ್ ಎಂದರೆ ತಪ್ಪಾಗುವುದಿಲ್ಲ. ಮಿಲನ ಸಿನಿಮಾ ತೆರೆಕಂಡು ಇನ್ನೇನು 15 ವರ್ಷ ಆಗಲಿದೆ, ಈಗಲೂ ಅದೇ ರೀತಿ ಯಂಗ್ ಆಗಿ ಕಾಣುವ ಪಾರ್ವತಿ ಮೆನನ್ ಅವರ ವಯಸ್ಸು ಎಷ್ಟು ಗೊತ್ತಾ?
ನಟಿ ಪಾರ್ವತಿ ಮೆನನ್ ಹುಟ್ಟಿದ್ದು ಬೆಳೆದದ್ದು ಎಲ್ಲವೂ ಕೇರಳದಲ್ಲಿ. ನಟನೆ ಶುರು ಮಾಡಿದ್ದು ಸಹ ಮಲಯಾಳಂ ಸಿನಿಮಾ ಮೂಲಕ. ಪಾರ್ವತಿ ಮೆನನ್ ಅವರು ಉಳಿದ ನಟಿಯರ ಹಾಗಲ್ಲ, ಈಕೆ ಸೆಲೆಕ್ಟ್ ಮಾಡಿಕೊಳ್ಳುವುದು ಚಾಲೆಂಜಿಂಗ್ ಆದಂತಹ ಪಾತ್ರಗಳನ್ನೇ, ಹೆಚ್ಚಾಗಿ ಮಹಿಳಾ ಪ್ರಧಾನ ಪಾತ್ರಗಳಿರುವ ಸಿನಿಮಾಗಳಲ್ಲಿ ನಟಿಸುತ್ತಾರೆ ಪಾರ್ವತಿ ಮೆನನ್. ತಮ್ಮದೇ ಆದ ವಿಭಿನ್ನ ಶೈಲಿಯ ಅಭಿನಯದ ಮೂಲಕ ದೊಡ್ಡ ಫ್ಯಾನ್ ಬೇಸ್ ಗಳಿಸಿಕೊಂಡಿದ್ದಾರೆ. ಇವರ ಅಭಿನಯಕ್ಕೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಸಹ ಸಿಕ್ಕಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವವರು ನಟಿ ಪಾರ್ವತಿ ಮೆನನ್.
ಪುನೀತ್ ರಾಜ್ ಕುಮಾರ್ ಅವರ ಮಿಲನ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟರು ಪಾರ್ವತಿ, ಮಿಲನ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಆಲ್ ಟೈಮ್ ಬ್ಲಾಕ್ ಬಸ್ಟರ್ ಎಂದೇ ಹೆಸರು ಪಡೆದುಕೊಂಡಿದೆ. ನಂತರ ಕನ್ನಡದಲ್ಲಿ, ಮಳೆ ಬರಲಿ ಮಂಜು ಇರಲಿ ಸಿನಿಮಾದಲ್ಲಿ ನಟಿಸಿದರು, ಆ ಸಿನಿಮಾ ಅಷ್ಟೇನು ಯಶಸ್ಸು ಕಾಣಲಿಲ್ಲ. ನಂತರ ಪಾರ್ವತಿ ಅವರು ಪುನೀತ್ ಅವರೊಡನೆ ಪೃಥ್ವಿ ಸಿನಿಮಾದಲ್ಲಿ ಮತ್ತೊಮ್ಮೆ ನಟಿಸಿ, ಕಂಬ್ಯಾಕ್ ಮಾಡಿದ್ದರು. ಅದಾದ ಬಳಿಕ ಶಿವಣ್ಣ ಅವರೊಡನೆ ಅಂದರ್ ಬಾಹರ್ ಸಿನಿಮಾದಲ್ಲಿ ನಟಿಸಿದರು. ಅಂದರ್ ಬಾಹರ್ ನಂತರ ಕನ್ನಡದಲ್ಲಿ ಇನ್ಯಾವ ಸಿನಿಮಾದಲ್ಲೂ ಪಾರ್ವತಿ ಅವರು ನಟಿಸಿಲ್ಲ. ಈಗ ಇವರು ಸಿನಿಮಾಗಳಲ್ಲಿ ನಟಿಸುವುದು ಸಹ ಕಡಿಮೆಯಾಗಿದೆ. ಈಗಲೂ ಬಹಳ ಯಂಗ್ ಆಗಿರುವ ಪಾರವತಿ ಅವರ ವಯಸ್ಸು 34 ವರ್ಷ. ಇನ್ನುಮುಂದೆ ಇವರು ಕನ್ನಡಕ್ಕೆ ಮತ್ತೆ ಕಂಬ್ಯಾಕ್ ಮಾಡಲಿ ಎನ್ನುತ್ತಿದ್ದಾರೆ ಅಭಿಮಾನಿಗಳು.
Comments are closed.