ಅಪ್ಪ ಸಿದ್ದಾರ್ಥ್ ರವರ ಆಸ್ತಿ ಬಿಟ್ಟು, ಡಿಕೆಶಿ ಅಳಿಯ ಅಮರ್ತ್ಯ ಹೆಗಡೆ ರವರ ಒಟ್ಟು ಆಸ್ತಿ ಎಷ್ಟು ಗೊತ್ತೇ??
ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಹೆಗ್ಡೆ ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ, ಕರ್ನಾಟಕದ ಮಾಜಿ ಸಿಎಂ ಆಗಿದ್ದ ಎಸ್.ಎಂ.ಕೃಷ್ಣ ಅವರ ಅಳಿಯ ಆಗಿದ್ದವರು ಸಿದ್ಧಾರ್ಥ್ ಹೆಗ್ಡೆ. ಭಾರತದಲ್ಲಿ ಕೆಫೆ ಕಾಫಿ ಡೇ ಸಂಸ್ಥೆ ಶುರು ಮಾಡಿ, ಹಲವರಿಗೆ ಕೆಲಸ ಸಿಗುವ ಹಾಗೆ ಮಾಡಿದರು. ಕೆಫೆ ಕಾಫಿ ಡೇ ಸಂಸ್ಥೆ ಕರ್ನಾಟಕದ ಬಹುತೇಕ ಎಲ್ಲಾ ಊರುಗಳಲ್ಲೂ ಇದೆ. ಕೆಫೆ ಕಾಫಿ ಡೇ ಮೂಲಕ, ದೊಡ್ಡ ಮಟ್ಟದಲ್ಲಿ ಹಣ, ಯಶಸ್ಸು ಎಲ್ಲವನ್ನು ಪಡೆದ ಸಿದ್ಧಾರ್ಥ್ ಹೆಗ್ಡೆ ಅವರು, ಕೆಲ ವರ್ಷಗಳ ಹಿಂದೆ ಇನ್ನಿಲ್ಲವಾದರು. ಸಿದ್ಧಾರ್ಥ್ ಅವರ ನಂತರ, ಅವರ ಮಗ ಅಮರ್ಥ್ಯ ಹೆಗ್ಡೆ ಬ್ಯುಸಿನೆಸ್ ಗಳನ್ನು ನೋಡಿಕೊಳ್ಳಲು ಶುರು ಮಾಡಿದರು. ತಂದೆಯ ಆಸ್ತಿಯನ್ನು ಹೊರತುಪಡಿಸಿ, ಅಮರ್ಥ್ಯ ಹೆಗ್ಡೆ ಅವರ ಹೆಸರಿನಲ್ಲಿರುವ ಆಸ್ತಿ ಎಷ್ಟು ಕೋಟಿ ಗೊತ್ತಾ?
ಅಮರ್ಥ್ಯ ಹೆಗ್ಡೆ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಡಿ.ಕೆ ಶಿವಕುಮಾರ್ ಅವರ ಮಗಳೊಡನೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಡಿ.ಕೆ.ಶಿವಕುಮಾರ್ ಅವರ ಮಗಳು ಐಶ್ವರ್ಯ. ಅಮರ್ಥ್ಯ ಐಶ್ವರ್ಯ ಇಬ್ಬರು ಸಹ ತಮ್ಮದೇ ಆದ ಸ್ವಂತ ಬ್ಯುಸಿನೆಸ್ ಗಳಲ್ಲಿ ತಲ್ಲೀನರಾಗಿ, ಯುವ ಉದ್ಯಮಿಗಳಾಗಿ ಹೆಸರು ಮಾಡಿದ್ದಾರೆ. ಇವರಿಬ್ಬರ ಮದುವೆ ಅದ್ಧೂರಿಯಾಗಿ ನೆರವೇರಿತು. ಬೆಂಗಳೂರಿನಲ್ಲಿ, ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ, ಅಮರ್ಥ್ಯ ಮತ್ತು ಐಶ್ವರ್ಯ ಮದುವೆ ಮಾಡಲಾಯಿತು. ಇವರಿಬ್ಬರ ಮದುವೆಗೆ ಸುಮಾರು 800 ಜನರಿಗೆ ಆಮಂತ್ರಣ ನೀಡಲಾಗಿತ್ತು. ಆಮಂತ್ರಣ ಪಡೆದ ಎಲ್ಲರು ಸಹ, ಮದುವೆಗೆ ಬಂದು ಹೊಸ ದಂಪತಿಗಳಿಗೆ ಶುಭ ಹಾರೈಸಿದ್ದರು.
ಅಮರ್ಥ್ಯ ಐಶ್ವರ್ಯ ಇಬ್ಬರು ಸಹ ಉದ್ಯಮಿಗಳಾಗಿ ಹೆಸರು ಮಾಡಿರುವ ಕಾರಣ, ಇವರಿಬ್ಬರು ಕೋಟಿ ಕೋಟಿ ಹಣ ಗಳಿಸಿದ್ದಾರೆ. ಐಶ್ವರ್ಯ ಅವರು ತಮ್ಮ ಬ್ಯುಸಿನೆಸ್ ಇಂದ ಸುಮಾರು 100 ಕೋಟಿ ರೂಪಾಯಿ ಗಳಿಸಿದ್ದಾರೆ. ಹಾಗೆಯೇ ಅಮರ್ಥ್ಯ ಅವರು, ಸಹ ತಂದೆಯ ಆಸ್ತಿಯನ್ನು ಹೊರತುಪಡಿಸಿ, 300 ಕೋಟಿ ರೂಪಾಯಿ ಆಸ್ತಿ ಗಳಿಸಿದ್ದಾರೆ. ಇದನ್ನು ಬಿಟ್ಟು, ಸಿದ್ಧಾರ್ಥ್ ಹೆಗ್ಡೆ ಅವರ ಆಸ್ತಿ 10 ಸಾವಿರ ಕೋಟಿಗಿಂತ ಹೆಚ್ಚಿದೆ ಎಂದು ಮಾಹಿತಿ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಈ ಜೋಡಿ ಇನ್ನು ಹೆಚ್ಚು ಯಶಸ್ಸು ಗಳಿಸಲಿ ಎಂದು ಹಾರೈಸೋಣ.
Comments are closed.