Neer Dose Karnataka
Take a fresh look at your lifestyle.

ಮಾಡಲೇಬೇಕು ಎಂದು ನೂರಾರು ಕನಸುಗಳನ್ನು ಕಟ್ಟಿಕೊಂಡು ಮಾಡಲು ಹೊರಟಿದ್ದ ವಿಷ್ಣು ರವರ ಸಿನಿಮಾ ಕೊನೆಗೂ ಸೆಟ್ಟೇರಲಿಲ್ಲ. ಯಾವುದು ಗೊತ್ತೇ ಆ ಸಿನಿಮಾ?

ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತವಾದ ನಿರ್ದೇಶಕರಲ್ಲಿ ಒಬ್ಬರು ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರು.ಇವರು ಮಾಡುವ ಪ್ರತಿಯೊಂದು ಸಿನಿಮಾ ಕೂಸ ವಿಭಿನ್ನತೆ ಒಳಗೊಂಡಿರುತ್ತದೆ. 70ರ ದಶಕದಿಂದ ಈಗಿನವರೆಗೂ, ಕನ್ನಡ ಚಿತ್ರರಂಗದಲ್ಲಿ ಹೆಸರಾಂತ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ದರ್ಶನ್ ಅವರಿಗಾಗಿ ಮದಕರಿ ನಾಯಕ ಸಿನಿಮಾ ಮಾಡುತ್ತಿದ್ದಾರೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರು. ಇವರು ಒಬ್ಬ ನಿರ್ದೇಶಕನಾಗಿ ಕೆಲಸ ಮಾಡಲು, ಯಾವ ನಟ ಅತ್ಯುತ್ತಮವಾದವರು ಎಂದು ಕೇಳಿದರೆ, ಕನಸಿನಲ್ಲಿ ಕೂಡ ನನ್ನ ಆಪ್ತ ಸ್ನೇಹಿತ ಸಾಹಸಸಿಂಹ ವಿಷ್ಣುವರ್ಧನ್ ಎಂದೇ ಹೇಳುತ್ತಾರೆ..

ವಿಷ್ಣುವರ್ಧನ್ ಅವರು ಮತ್ತು ರಾಜೇಂದ್ರ ಸಿಂಗ್ ಬಾಬು ಅವರದ್ದು ಬಹಳ ಹಳೆಯ ಗೆಳೆತನ. ಇಬ್ಬರು ಜೊತೆಯಾಗಿ ಮೈಸೂರಿನಲ್ಲಿ ಕಾಲೇಜು ಶಿಕ್ಷಣ ಪಡೆದವರು. ನಂತರ ವಿಷ್ಣುವರ್ಧನ್ ಅವರು ಸಿನಿಮಾ ನಾಯಕನಾದರೆ, ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶಕನಾಗಿ ಗುರುತಿಸಿಕೊಂಡರು. ಬಾಬು ಅವರ ನಿರ್ದೇಶನದಲ್ಲಿ ವಿಷ್ಣುವರ್ಧನ್ ಅವರು ನಟಿಸಿದ ಮೊದಲ ಸಿನಿಮಾ ನಾಗರಹೊಳೆ. ಈ ಸಿನಿಮಾದಲ್ಲೆ ತಾವಿಬ್ಬರು ಕನ್ನಡ ಚಿತ್ರರಂಗಕ್ಕೆ ಅತ್ಯಮೂಲ್ಯವಾದ ಕೊಡುಗೆ ನೀಡುತ್ತೇವೆ ಎನ್ನುವುದನ್ನು ಸಾಬೀತು ಮಾಡಿತ್ತು, ಈ ಇಬ್ಬರು ಸ್ನೇಹಿತರ ಜೋಡಿ.

ವಿಷ್ಣುವರ್ಧನ್ ಅವರ ಕೆರಿಯರ್ ನ ಬಹುಮುಖ್ಯವಾದ ಸಿನಿಮಾಗಳು ಎಂದು ನೋಡುವುದಾದರೆ, 70ರ ದಶಕದ ಸೂಪರ್ ಹಿಟ್ ಸಿನಿಮಾ ಕಿಲಾಡಿ ಜೋಡಿ, ನಂತರ ಬಂಧನ, ಮುತ್ತಿನ ಹಾರ, ಹಿಮಪಾತ ಈ ಎಲ್ಲಾ ಸಿನಿಮಾಗಳು ವಿಷ್ಣುವರ್ಧನ್ ಅವರ ಕೆರಿಯರ್ ಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತು, ಆ ಎಲ್ಲಾ ಸಿನಿಮಾಗಳನ್ನು ನಿರ್ದೇಶನ ಮಾಡಿದವರು ರಾಜೇಂದ್ರ ಸಿಂಗ್ ಬಾಬು ಅವರು. ವಿಷ್ಣುವರ್ಧನ್ ಅವರ ಸಿನಿಮಾ ಆಗಲಿ, ಅಥವಾ ಬೇರೆ ಕಲಾವಿದರ ಸಿನಿಮಾ ಆಗಲಿ, ಅತ್ಯುತ್ತಮವಾದ ಕತೆಯನ್ನೇ ರಾಜೇಂದ್ರ ಸಿಂಗ್ ಬಾಬು ಅವರು ಕನ್ನಡ ಸಿನಿಪ್ರಿಯರಿಗೆ ನೀಡುತ್ತಿದ್ದರು.

ವಿಷ್ಣುವರ್ಧನ್ ಅವರಿಗೂ ಸಹ ಸ್ನೇಹಿತನ ಸಿನಿಮಾದಲ್ಲಿ ನಟಿಸುವುದು ಎಂದರೆ ತುಂಬಾ ಇಷ್ಟವಿತ್ತು. ಒಂದು ಹಂತದ ವರೆಗೆ ಜೊತೆಯಾಗಿ ಸಿನಿಮಾ ಮಾಡಿದ ನಂತರ ವಿಷ್ಣುವರ್ಧನ್ ಅವರು ತಮ್ಮ ಸಿನಿಮಾಗಳಲ್ಲಿ ಮತ್ತು ರಾಜೇಂದ್ರ ಸಿಂಗ್ ಬಾಬು ಅವರು ತಮ್ಮ ಕೆರಿಯರ್ ನಲ್ಲಿ ಬ್ಯುಸಿ ಆಗಿಬಿಟ್ಟರು.ಆಪ್ತಮಿತ್ರ, ಆಪ್ತರಕ್ಷಕ, ವಿಷ್ಣುಸೇನ ಅಂತಹ ಸಿನಿಮಾಗಳನ್ನು ಮಾಡಿದ್ದರೂ ಸಹ, ಸ್ನೇಹಿತನ ನಿರ್ದೇಶನದಲ್ಲಿ ಒಂದು ಸಿನಿಮಾದಲ್ಲಿ ನಟಿಸಬೇಕು ಎನ್ನುವ ಆಸೆ ವಿಷ್ಣುವರ್ಧನ್ ಅವರಿಗೆ ಇತ್ತು. ಅದೇ ರೀತಿ, ವಿಷ್ಣುವರ್ಧನ್ ಅವರಿಗೆ ಒಂದು ಸಿನಿಮಾ ಮಾಡಬೇಕು ಎನ್ನುವ ಆಸೆ ರಾಜೇಂದ್ರ ಸಿಂಗ್ ಬಾಬು ಅವರಿಗೂ ಇತ್ತು.

ಅದಕ್ಕಾಗಿ ತಮ್ಮ ಆಪ್ತ ಸ್ನೇಹಿತನಿಗೋಸ್ಕರ, ರಾಜೇಂದ್ರ ಸಿಂಗ್ ಬಾಬು ಅವರು ಒಂದು ವಿಶೇಷವಾದ ಕಥೆ ರೆಡಿ ಮಾಡಿ, ಒನ್ ಲೈನ್ ಸ್ಟೋರಿಯನ್ನು ವಿಷ್ಣುವರ್ಧನ್ ಅವರಿಗೆ ಹೇಳಿದ್ದರು, ವಿಷ್ಣುದಾದ ಅವರಿಗೂ ಕಥೆ ತುಂಬಾ ಇಷ್ಟವಾಗಿ, ಸಿನಿಮಾ ಮಾಡೋಣ ಎಂದು ಪ್ಲಾನ್ ಮಾಡಿಕೊಂಡಿದ್ದರು. ಆದರೆ ವಿಷ್ಣುವರ್ಧನ್ ಅವರು 2009 ರಲ್ಲಿ ಇದ್ದಕ್ಕಿದ್ದ ಹಾಗೆ ಅನಾರೋಗ್ಯಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದ ನಂತರ ಆ ಸಿನಿಮಾ ಕೂಫಾ ನಿಂತು ಹೋಯಿತು. ಆ ಸಿನಿಮಾ ಹೆಸರು ‘ಗುರು ಮಹೇಶ್ವರ’, ಇದು ವಿಷ್ಣುವರ್ಧನ್ ಅವರಿಗಾಗಿಯೇ ವಿಶೇಷವಾಗಿ ತಯಾರು ಮಾಡಲಾಗಿದ್ದ ಕಥೆ, ಈ ಸಿನಿಮಾ ಮೇಲೆ ವಿಷ್ಣುವರ್ಧನ್ ಅವರಿಗೂ ಮತ್ತು ನಿರ್ದೇಶಕ ಬಾಬು ಅವರಿಗು ತುಂಬಾ ಪ್ರೀತಿ ಇತ್ತು.

ಈ ಸಿನಿಮಾದಲ್ಲಿ ದೊಡ್ಡ ತಾರಾಗಣವಿರಲಿದೆ ಎನ್ನಲಾಗಿತ್ತು, ಗುರು ಮಹೇಶ್ವರ ಸಿನಿಮಾದಲ್ಲಿ, ವಿಷ್ಣುವರ್ಧನ್ ಅವರ ಜೋಡಿಯಾಗಿ ಬಾಲಿವುಡ್ ನ ಖ್ಯಾತ ನಟಿ ರೇಖಾ ಅವರೇ ನಟಿಸಬೇಕು ಎಂದು, ಅವರ ಜೊತೆ ಮಾತುಕತೆಗೆ ಹೋಗಲು ಸಿದ್ಧರಾಗಿದ್ದರು ಬಾಬು. 2009ರ ನವೆಂಬರ್ ಕೊನೇ, ಡಿಸೆಂಬರ್ ಮೊದಲ ವಾರದಲ್ಲಿ ಈ ಕಥೆ ಹೇಳಿದ್ದರು ಬಾಬು, ಆದರೆ ಅದಾದ ಕೆಲವೇ ದಿನಕ್ಕೆ ವಿಷ್ಣುವರ್ಧನ್ ಅವರು ಅನಾರೋಗ್ಯಕ್ಕೆ ಈಡಾದರು, ಆದರೆ ಬಾಬು ಅವರು ಸ್ನೇಹಿತ ಬೇಗ ಹುಷಾರಾಗಿ ಬರುತ್ತಾನೆ ಎಂದೇ ಅಂದುಕೊಂಡಿದ್ದರು.. ಆದರೆ ಅದೆಲ್ಲವೂ ಸುಳ್ಳಾಗಿ, ವಿಷ್ಣುವರ್ಧನ್ ಅವರು ಇನ್ನಿಲ್ಲವಾದರು. ಸಿನಿಮಾದ ಕಥೆ ಇಂದಿಗೂ ಬಾಬು ಅವರ ಬಳಿ ಇದೆ. ಆದರೆ ನಟಿಸಲು ವಿಷ್ಣು ಸರ್ ಇಲ್ಲದೆ, ಕಥೆ ಹಾಗೆಯೇ ಉಳಿದಿದೆ.

Comments are closed.