ತಮಿಳು ನಾಡಿನಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚಿರುವ ರಜನಿರವರು ತಮಿಳುನಾಡಿನಲ್ಲಿ ಕೆಜಿಎಫ್-2 ಚಿತ್ರವನ್ನು ಯಾವ ಭಾಷೆಯಲ್ಲಿ ನೋಡಿದ್ದಾರೆ ಗೊತ್ತೇ? ಏನು ಹೇಳಿದ್ದಾರೆ ಗೊತ್ತೇ?
ಕೆಜಿಎಫ್ ಚಾಪ್ಟರ್2 ಸಿನಿಮಾ ತೆರೆ ಕಂಡು ಈಗಾಗಲೇ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದ ಅದ್ಧೂರಿ ತನ, ಯಶ್ ಅವರ ನಟನೆ ಆಟಿಟ್ಯೂಟ್ ಎಲ್ಲವನ್ನು ವೀಕ್ಷಸಿದ ಸಿನಿಮಾ ಪ್ರೇಕ್ಷಕ ಫಿದಾ ಆಗಿದ್ದಾನೆ. ಬಿಡುಗಡೆಯಾಗಿ ನಾಲ್ಕೇ ವಿಚಾರದಲ್ಲಿ ಎಲ್ಲಾ ದಾಖಲೆಗಳನ್ನು ಮುರಿದಿದೆ ಕೆಜಿಎಫ್2. ಅಭಿಮಾನಿಗಳು ಮಾತ್ರವಲ್ಲದೆ ಭಾರತ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಸಿನಿಮಾ ಜನರಿಗೆ ಇಷ್ಟವಾಗಿದೆ. ಈ ಸಿನಿಮಾವನ್ನು ಚೆನ್ನೈ ನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ವೀಕ್ಷಿಸಿರುವುದು ವಿಶೇಷ. ರಾಜನಿಕಾಂತ್ ಅವರು ಸಿನಿಮಾ ನೋಡಿದ್ದು ಯಾವ ಭಾಷೆಯಲ್ಲಿ? ಸಿನಿಮಾ ವೀಕ್ಷಸಿದ ನಂತರ ಅವರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?
ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಕನ್ನಡ ನಾಡಿನ ಮೇಲೆ, ಕನ್ನಡಿಗರ ಮೇಲೆ ಅಭಿಮಾನ ಗೌರವವಿದೆ. ಒಳ್ಳೆಯ ಕನ್ನಡ ಸಿನಿಮಾಗಳನ್ನಿ ಪ್ರೋತ್ಸಾಹಿಸುತ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿ. ರಜನಿಕಾಂತ್ ಅವರು ಚೆನ್ನೈನಲ್ಲಿಯೇ ಕನ್ನಡದ ಹುಡುಗರು ಹುಮ್ಮಸ್ಸಿನಿಂದ ಮಾಡಿರುವ ಕೆಜಿಎಫ್2 ಸಿನಿಮಾ ವೀಕ್ಷಿಸಿದ್ದಾರೆ. ಕನ್ನಡ ಭಾಷೆಯಲ್ಲೇ ಸಿನಿಮಾ ವೀಕ್ಷಿಸಿರುವುದು ವಿಶೇಷವಾಗಿದೆ. ಖ್ಯಾತ ಸಿನಿಮಾ ವಿಮರ್ಶಕರಾದ ರಮೇಶ್ ಬಾಲ ಅವರು ಇದರ ಬಗ್ಗೆ ಮಾಹಿತಿ ನೀಡಿದ್ದು, ರಜನಿಕಾಂತ್ ಅವರು ಸಿನಿಮಾ ವೀಕ್ಷಿಸಿ ತುಂಬಾ ಇಷ್ಟಪಟ್ಟಿದ್ದಾರೆ. ಸಿನಿಮಾ ನೋಡಿದ ಮೇಲೆ ನಿರ್ಮಾಪಕ ವಿಜಯ್ ಕಿರಗಂದೂರ್ ಅವರಿಗೆ ಕರೆಮಾಡಿ ಸಂತೋಷದ ನುಡಿಗಳನ್ನು ಹೇಳಿದ್ದಾರೆ ಸೂಪರ್ ಸ್ಟಾರ್.
ಈ ಅದ್ಭುತವಾದ ತೆರೆಮೇಲೆ ತಂದ ತಂಡಕ್ಕೆ ತಲೈವಾ ಅಭಿನಂದನೆ ತಿಳಿಸಿದ್ದಾರೆ. ಈ ವಿಚಾರ ಹೊರಬರುತ್ತಿದ್ದಂತೆ, ಅಭಿಮಾನಿಗಳು ಸಾಕಷ್ಟು ಟ್ವೀಟ್ ಗಳನ್ನು ಮಾಡಿದ್ದಾರೆ. ರಜನಿಕಾಂತ್ ಅವರೊಡನೆ ಪ್ರಶಾಂತ್ ನೀಲ್ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ಜೊತೆಯಾಗಿ ಸಿನಿಮಾ ಮಾಡಬೇಕು, ಕೆಜಿಎಫ್ ತಂಡ ಸೂಪರ್ ಸ್ಟಾರ್ ಜೊತೆ ಸಿನಿಮಾ ಮಾಡಿದರೆ ಅದ್ಭುತವಾಗಿರುತ್ತದೆ ಎಂದು ಅಭಿಮಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಜನಿಕಾಂತ್ ಅವರು ಸಿನಿಮಾ ನೋಡಿ ಮೆಚ್ಚಿಕೊಂಡಿರುವ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಅಭಿಮಾನಿಗಳ ಆಸೆಯಂತೆ ಗುಡ್ ನ್ಯೂಸ್ ಸಿಗುತ್ತಾ ಎಂದು ಕಾದು ನೋಡಬೇಕಿದೆ.
Comments are closed.