ಬರುತ್ತಿದೆ ಹೊಸ ವರ್ಷದ ಮೊದಲ ಸೂರ್ಯಗ್ರಹಣ. ಗ್ರಹಣವಾದ ಮೇಲೆ ಐದು ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಯಾರ್ಯಾರಿಗೆ ಗೊತ್ತೇ?
ವಿಶ್ವದಲ್ಲಿ ಸೂರ್ಯಗ್ರಹಣ, ಚಂದ್ರಗ್ರಹಣ ಇದೆಲ್ಲವೂ ನಡೆಯುತ್ತಿರುತ್ತದೆ. ಪ್ರತಿ ವರ್ಷ ಸೂರ್ಯಗ್ರಹಣ, ಚಂದ್ರಗ್ರಹಣ. ಈ ವರ್ಷದ ಮೊದಲ ಸೂರ್ಯಗ್ರಹಣವು ಏಪ್ರಿಲ್ ತಿಂಗಳ ಕೊನೆಯಲ್ಲಿ, ಅಂದರೆ ಏಪ್ರಿಲ್ 30ರಂದು ನಡೆಯಲಿದೆ. ಹಿಂದೂ ಧರ್ಮದ ಪ್ರಕಾರ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ಈ ಎರಡನ್ನು ಸಹ ಅಶುಭ ಎಂದು ಪರಿಗಣಿಸಲಾಗುತ್ತದೆ. ಗ್ರಹಣ ನಡೆಯುವ ಸಮಯದಲ್ಲಿ ಯಾವುದೇ ಒಳ್ಳೆಯ ಕಾರ್ಯಗಳನ್ನು ಮಾಡುವುದಿಲ್ಲ. ದೇವಸ್ಥಾನದ ಬಾಗಿಲನ್ನು ಮುಚ್ಚಲಾಗುತ್ತದೆ. ಸೂರ್ಯಗ್ರಹಣವು ಈ ಬಾರಿ ಭಾರತದಲ್ಲಿ ಗೋಚರಿಸುತ್ತಿಲ್ಲ.
ಭಾರತದಲ್ಲಿ ಮಧ್ಯರಾತ್ರಿ 12:15ಕ್ಕೆ ಆರಂಭವಾಗಿ, 4:08ರ ವರೆಗೂ ಇರುತ್ತದೆ. ಮಧ್ಯ ರಾತ್ರಿಯಲ್ಲಿ ನಡೆಯುತ್ತಿರುವ ಕಾರಣ, ಭಾರತದಲ್ಲಿ ಸೂತಕದ ಸಮಯ ಇರುವುದಿಲ್ಲ, ದಕ್ಷಿಣ ಅಮೆರಿಕಾದ ನೈಋತ್ಯ ಭಾಗಗಳು, ಪೆಸಿಫಿಕ್ ಮಹಾಸಾಗರ ಮತ್ತು ಅಟ್ಲಾಂಟಿಕ್ ಮಹಾಸಾಗರ ಮತ್ತು ದಕ್ಷಿಣ ಧ್ರುವದಲ್ಲಿ ಗೋಚರಿಸುತ್ತದೆ. ಈ ಸೂರ್ಯಗ್ರಹಣದ ಪರಿಣಾಮ ಐದು ರಾಶಿಗಳಿಗೆ ಅತ್ಯುತ್ತಮ ಫಲವಿದೆ. ಆ ರಾಶಿಗಳು ಯಾವುದು? ಅವುಗಳಿಗೆ ಸಿಗುವ ಫಲವೇನು? ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ವರ್ಷದ ಮೊದಲ ಸೂರ್ಯಗ್ರಹಣ ನಡೆಯುವುದು ಮೇಷ ರಾಶಿಯಲ್ಲಿ, ಹಾಗಾಗಿ ಮೇಷ ರಾಶಿಗೆ ಒಳ್ಳೆಯ ಫಲ ಸಿಗಲಿದೆ. ಮೇಷ ರಾಶಿಯವರ ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ನೀವು ಮಾಡುವ ಕೆಲಸಕ್ಕೆ ಮೆಚ್ಚುಗೆ ಸಿಗುತ್ತದೆ, ಜೊತೆಗೆ ಹಣ ಸಂಪಾದನೆ ಮಾಡಲು ಹೆಚ್ಚಿನ ಮಾರ್ಗಗಳು ಸಿಗುತ್ತಾ ಹೋಗುತ್ತವೆ. ಈಗಾಗಲೇ ಕೆಲಸ ಮಾಡುತ್ತಿರುವವರಿಗೆ ಇನ್ನು ಒಳ್ಳೆಯ ಅವಕಾಶಗಳು ಸಿಗುತ್ತವೆ. ಪ್ರಯಾಣ ಮಾಡುವುದರಿಂದ ಧನಲಾಭ ಸಿಗುತ್ತದೆ. ಹಾಗೂ ಧನಲಾಭ ಹೆಚ್ಚಾಗುತ್ತದೆ.
ವೃಷಭ ರಾಶಿ :- ಸೂರ್ಯಗ್ರಹಣ ಈ ರಾಶಿಯವರಿಗೆ ಒಳ್ಳೆಯ ಫಲ ತಂದುಕೊಡಲಿದೆ. ವೃಷಭ ರಾಶಿಯವರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಬಹಳ ಸಮಯದಿಂದ ಅರ್ಧಕ್ಕೆ ನಿಂತಿರುವ ಕೆಲಸಗಳು ಮುಕ್ತವಾಗುತ್ತದೆ. ಹಣ ಹೂಡಿಕೆ ಮಾಡುವುದರಿಂದ ಲಾಭ ಸಿಗುತ್ತದೆ. ನಿಮ್ಮ ಮಕ್ಕಳ ಕಡೆಯಿಂದ ಸಿಹಿ ಸುದ್ದಿ ಕೇಳುತ್ತೀರಿ.
ಸಿಂಹ ರಾಶಿ :- ಈ ರಾಶಿಯವರಿಗೆ ಸೂರ್ಯಗ್ರಹಣ ಒಳ್ಳೆಯ ಫಲ ತಂದುಕೊಡುತ್ತದೆ. ಮಾಡುತ್ತಿರುವ ಕೆಲಸಗಳಲ್ಲಿ ಲಾಭ ಸಿಗುತ್ತದೆ. ಪಾರ್ಟ್ನರ್ಶಿಪ್ ನಲ್ಲಿ ಕೆಲಸ ಮಾಡುವುದರಿಂದ ಲಾಭ ಜಾಸ್ತಿಯಾಗುತ್ತಿದೆ. ಕೆಲಸದಲ್ಲಿ ಪ್ರೊಮೋಷನ್ ಸಿಗುವ ಸಂಭವವಿದೆ. ಸೂರ್ಯಗ್ರಹಣವು ಸಿಂಹ ರಾಶಿಯವರಿಗೆ ಪ್ರಯೋಜನ ತಂದಿಕೊಡಲಿದೆ.
ಕರ್ಕಾಟಕ ರಾಶಿ :- ಸೂರ್ಯಗ್ರಹಣವು ಕರ್ಕಾಟಕ ರಾಶಿಗೆ ಅದೃಷ್ಟವನ್ನು ತಂದುಕೊಡುತ್ತದೆ. ಸಮಾಜದಲ್ಲಿ ಮತ್ತು ಕೆಲಸ ಮಾಡುವ ಕಡೆ ಗೌರವ ಹೆಚ್ಚಾಗುತ್ತದೆ. ಎಲ್ಲಾ ಕೆಲಸಗಳಲ್ಲೂ ಅದೃಷ್ಟ ಸಿಗಲಿದೆ. ಕೆಲಸ ಮಾಡುವ ಜಾಗದಲ್ಲಿ ಮೆಚ್ಚುಗೆ ಪಡೆದುಕೊಳ್ಳುತ್ತೀರಿ. ನೀವು ಕೆಲಸ ಮಾಡುತ್ತಿರುವ ರೀತಿ ಸಹ ಸುಧಾರಿಸುತ್ತದೆ. ನಿಮ್ಮ ಜೊತೆಗೆ ಕೆಲಸ ಮಾಡುವವರಿಂದ ಸಪೋರ್ಟ್ ಸಿಗುತ್ತದೆ.
ಧನು ರಾಶಿ :- ಈ ಸೂರ್ಯಗ್ರಹಣ ಧನು ರಾಶಿಯವರಿಗೆ ಒಳಿತು ಮಾಡಲಿದೆ. ವ್ಯಾಪಾರದಲ್ಲಿ ಲಾಭವಾಗಲಿದೆ, ನಿಮ್ಮ ಆದಾಯ ಜಾಸ್ತಿಯಾಗಲಿದೆ. ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಕೆಲಸ ಸಿಗಲಿದೆ. ಬಾಳಸಂಗಾತಿಯ ಜೊತೆಗಿನ ಸಂಬಂಧ ಒಳ್ಳೆಯ ಹಂತ ತಲುಪುತ್ತದೆ, ಅದರಿಂದ ಸಪೋರ್ಟ್ ಸಿಗುತ್ತದೆ. ಈ ಸಮಯದಲ್ಲಿ ನಿಮ್ಮ ಶಕ್ತಿ ಹೆಚ್ಚಾಗಿ, ರಹಸ್ಯವಾಗಿ ನಿಮ್ಮ ಮೇಲೆ ವೈರತ್ವ ಸಾಧಿಸುತ್ತಿರುವ ಶತ್ರುಗಳು ನಾಶವಾಗುತ್ತಾರೆ. ಪ್ರಯಾಣ ಮಾಡಲು ಇದು ಒಳ್ಳೆಯ ಸಮಯ ಆಗಿದೆ. ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ ಆಗಿದ್ದು, ಹೊಸ ಯೋಜನೆಗಳಿಂದ ಲಾಭ ಪಡೆಯುತ್ತೀರಿ.
Comments are closed.