ಉತ್ತಮ ಸಿನೇಮಾಗಳಾಗಿದ್ದರು ಕೂಡ ಶಾಂತಿಕ್ರಾಂತಿ, ಕಿಂದರಿಜೋಗಿ ಸೋಲಿಗೆ ಆ ಕೆಟ್ಟ ಘಟನೆನೇ ಕಾರಣವಾಗೋಯ್ತಾ?? ರವಿಚಂದ್ರನ್ ಹೇಳಿದ್ದೇನು ಗೊತ್ತೇ??
ಕೆಲವೊಮ್ಮೆ ನಾವು ಯಾವುದಾದರೂ ಕೆಲಸ ಮಾಡಲು ಹೊರಟರೆ ಪ್ರಕೃತಿ ಅದಕ್ಕೆ ಬೇರೆಯದೇ ಪ್ರತಿಕ್ರಿಯೆ ನೀಡಿ, ನೀನು ಹೋಗುತ್ತಿರುವ ದಾರಿ ಸರಿ ಇಲ್ಲ, ಈ ಕೆಲಸ ನಿಲ್ಲಿಸಿದರೆ ಒಳ್ಳೆಯದು, ಎನ್ನುವ ಸೂಚನೆ ಕೊಡುತ್ತದೆ. ಆದರೆ ನಾವು ಕೆಲವೊಮ್ಮೆ ಪ್ರಕೃತಿ ಕೊಡುವ ಸೂಚನೆಯನ್ನು ಅರ್ಥೈಸಿಕೊಳ್ಳದೆ ಅದೇ ದಾರಿಯಲ್ಲಿ ಸಾಗುತ್ತೇವೆ. ಈ ರೀತಿ ಮಾಡಿ ನಷ್ಟವನ್ನು ನೋವನ್ನು ಸಹ ಅನುಭವಿಸುತ್ತೇವೆ. ಈ ಮಾತುಗಳನ್ನು ಇಂದು ಹೇಳುತ್ತಿರುವುದಕ್ಕೆ ಕಾರಣ ಕ್ರೇಜಿಸ್ಟಾರ್ ರವಿಚಂದ್ರನ್ ಅವರು. ರವಿಚಂದ್ರನ್ ಅವರ ಎರಡು ಸಿನಿಮಾಗಳ ವಿಚಾರದಲ್ಲಿ ಹೀಗೆ ಆಯಿತು.. ಪ್ರಕೃತಿ ಸೂಚನೆ ಕೊಟ್ಟರು ಸಹ ರವಿಚಂದ್ರನ್ ಅವರು ಅರ್ಥಮಾಡಿಕೊಳ್ಳಲಿಲ್ಲ. ಆ ಸಿನಿಮಾಗಳು ಯಾವುವು ? ನಿಜಕ್ಕೂ ನಡೆದಿದ್ದೇನು ಗೊತ್ತಾ? ತಿಳಿಸುತ್ತೇವೆ ನೋಡಿ..
ರವಿಚಂದ್ರನ್ ಅವರು ಬಹಳ ನಿರೀಕ್ಷೆ ಮತ್ತು ಪ್ರೀತಿಯಿಂದ ಶುರು ಮಾಡಿದ ಸಿನಿಮಾ ಶಾಂತಿ ಕ್ರಾಂತಿ, ಈ ಸಿನಿಮಾವನ್ನು ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ತಯಾರು ಮಾಡಲಾಯಿತು. ಸಿನಿಮಾದ ಕಥೆ, ಚಿತ್ರಕಥೆ, ನಿರ್ಮಾಣ, ನಿರ್ದೇಶನ ಎಲ್ಲವೂ ರವಿಚಂದ್ರನ್ ಅವರದ್ದೇ. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋತಿತು, ನಿಜಕ್ಕೂ ಹೇಳಬೇಕೆಂದರೆ, ಸೂಪರ್ ಹಿಟ್ ಆಗಬೇಕಿದ್ದ ಸಿನಿಮಾ ಇದು. ಆದರೆ ಸೋಲು ಕಂಡಿತು. ಸಿನಿಮಾ ಶುರುವಾಗುವ ಮೊದಲೇ ರವಿಚಂದ್ರನ್ ಅವರಿಗೆ ಇದರ ಬಗ್ಗೆ ಸೂಚನೆ ಇತ್ತು. ಶಾಂತಿ ಕ್ರಾಂತಿ ಸಿನಿಮಾ ಶುರುವಾಗಿ, ಮೊದಲ ಮೊದಲ ಶಾಟ್ ನಲ್ಲಿ ನಡೆದ ಘಟನೆಯೇ ಮುನ್ಸೂಚನೆ ನೀಡಿತ್ತು. ರವಿಚಂದ್ರನ್ ಅವರಿಗೆ ಇದ್ದ ಮೊದಲ ಶಾಟ್, ರೋಪ್ ನಲ್ಲಿ ಕೆಳಗೆ ಬರುವ ಶಾಟ್ ಆಗಿತ್ತು.
ಅಂದು ರೋಪ್ ನಲ್ಲಿ ತಿರುಗ ಮುರುಗ ಹಿಡಿದು ಬರಬೇಕಿತ್ತು, ಆದರೆ ರವಿಚಂದ್ರನ್ ಅವರು ನೇರವಾಗಿ ಹಿಡಿದುಕೊಂಡು ಬಂದರು. ಅದರಿಂದಾಗಿ ಕೆಳಗೆ ಬರುವ ಹೊತ್ತಿಗೆ ಅವರ ಕೈ ಪೂರ್ತಿ ರಕ್ತವಾಗಿತ್ತು. 10 ಬೆರಳುಗಳು ಪೂರ್ತಿ ರಕ್ತವಾಗಿತ್ತು. ಆಗಲೇ ಅವರಿಗೆ ಸೂಚನೆ ಸಿಕ್ಕಿತ್ತು, ಆದರೆ ಅಂದಿನ ಹುಮ್ಮಸ್ಸಿನಲ್ಲಿ ರವಿಚಂದ್ರನ್ ಅವರು ಈ ಘಟನೆ ಬಗ್ಗೆ ಯೋಚನೆ ಮಾಡಲಿಲ್ಲ. ಅಲ್ಲಿಗೇ ಬಿಟ್ಟುಬಿಟ್ಟರು. ಸಿನಿಮಾ ಚಿತ್ರೀಕರಣ ಸಮಯದಲ್ಲಿ ಸಹ ತೊಂದರೆಗಳಾದರು ಸಹ ತಲೆ ಕೆಡಿಸಿಕೊಳ್ಳಲಿಲ್ಲ, ಸಿನಿಮಾ ಮಾಡಿ ಮುಗಿಸಿದರು. ಆದರೆ ಸಿನಿಮಾ ಸೋತಿತು. ರವಿಚಂದ್ರನ್ ಅವರು ಈ ಘಟನೆಯನ್ನು ಇಂದಿಗೂ ಮರೆತಿಲ್ಲ. ಅಂದು ಆ ಸೂಚನೆಯನ್ನು ಅರ್ಥ ಮಾಡಿಕೊಂಡು, ಸಿನಿಮಾ ನಿಲ್ಲಿಸಿದ್ದರೆ ಅಥವಾ ಬೇರೆ ರೀತಿಯಲ್ಲಿ ಸಿನಿಮಾ ಮಾಡಿದ್ದರೆ, ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿತ್ತು, ನನಗೆ ಮೊದಲ ಸಾರಿ ದೊಡ್ಡ ಪೆಟ್ಟು ಕೊಟ್ಟ ಸಿನಿಮಾ ಶಾಂತಿ ಕ್ರಾಂತಿ ಎನ್ನುತ್ತಾರೆ ಕ್ರೇಜಿಸ್ಟಾರ್.
ಶಾಂತಿ ಕ್ರಾಂತಿ ಮಾತ್ರವಲ್ಲದೆ, ಕಿಂದರಿ ಜೋಗಿ ಸಿನಿಮಾ ವಿಚಾರದಲ್ಲಿ ಸಹ ಹೀಗೆ ಆಗಿತ್ತು. ಪ್ರೇಮಲೋಕ, ಅಂಜದಗಂಡು, ರಣಧೀರ ನಂತರ ರವಿಚಂದ್ರನ್ ಅವರು ಕಿಂದರಿ ಜೋಗಿ ಸಿನಿಮಾ ಶುರು ಮಾಡಿದರು. ಸಿನಿಮಾದಲ್ಲಿ ಮಕ್ಕಳ ಸನ್ನಿವೇಶಗಳೇ ಹೆಚ್ಚಾಗಿತ್ತು. ಈ ಸಿನಿಮಾ ಕಥೆ, ಚಿತ್ರಕಥೆ, ಎಲ್ಲವೂ ರೆಡಿ ಆಗುವ ಸಮಯದಲ್ಲಿ, ಒಂದು ಜಾಗ ಸೂಚಿಸಿ, ಸಹಾಯಕ ನಿರ್ದೇಶಕರು, ಛಾಯಾಗ್ರಹಕರು ಎಲ್ಲರನ್ನು ಕಳಿಸಿ ಜಾಗ ನೋಡಿಕೊಂಡು ಬರಲು ಹೇಳಿದರು. ಅವರು ಸಹ ರವಿಚಂದ್ರನ್ ಅವರ ಮಾತಿನಂತೆ ಹೋಗಿ ಜಾಗ ನೋಡಿಬಂದು, ಅದೇ ಜಾಗ ಫೈನಲ್ ಆಗಿ, ಚಿತ್ರೀಕರಣ ಸಹ ಶುರುವಾಯಿತು. ಆದರೆ ಪ್ರತಿದಿನ ಚಿತ್ರೀಕರಣ ನಡೆಯುವಾಗಲು ಸಹ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿತ್ತು..
ಒಂದು ಸಾರಿ ಜೇನು ಹುಳಗಳು ಬಂದು ಸೆಟ್ ನಲ್ಲಿದ್ದ ಎಲ್ಲರಿಗು ತೊಂದರೆ ಕೊಟ್ಟಿದ್ದವು. ಕೆಲವೊಮ್ಮೆ ಚಿತ್ರೆಕಾರಣದ ಶೆಡ್ಯೂಲ್ ನಲ್ಲಿ ಸಮಸ್ಯೆ ಆಗುತ್ತಿತ್ತು. ರವಿಚಂದ್ರನ್ ಅವರು ಮಕ್ಕಳಿಗಾಗಿ, ಟ್ಯಾಂಕರ್ ನಲ್ಲಿ ಹಾಲು ತರಿಸುತ್ತಿದ್ದರು, ಒಂದು ಸಾರಿ ಹಾಲು ಕೊಡುವ ಮುನ್ನ, ಆ ಟ್ಯಾಂಕರ್ ನಲ್ಲಿ ಹಲ್ಲಿ ಸತ್ತು ಬಿದ್ದಿದ್ದ ವಿಚಾರ ಗೊತ್ತಾಯಿತು. ಮಕ್ಕಳಿಗೆ ಆ ಹಾಲನ್ನು ಕೊಡಲಿಲ್ಲ. ಈ ಘಟನೆಯಿಂದ ರವಿಚಂದ್ರನ್ ಅವರ ಮನಸ್ಸಿಗೆ ಬಹಳ ನೋವಾಗಿತ್ತು. ಈ ರೀತಿ ಯಾಕೆ ಆಗುತ್ತಿದೆ ಎಂದು ಚಿಂತೆ ಮಾಡಲು ಶುರು ಮಾಡಿದರು, ಆಗ ಸಿನಿಮಾದ ಛಾಯಾಗ್ರಹಕರು ಬಂದು, ಜಾಗ ನೋಡಲು ಬಂದಾಗ ನಡೆದ ಘಟನೆ ಬಗ್ಗೆ ತಿಳಿಸಿದರು. ಅಂದು ಜಾಗ ನೋಡಲು ಬಂದಾಗ, ನಮಗೆ ಗೊತ್ತಿಲ್ಲದ ಹಾಗೆ ಕಾರ್ ಟೈರ್ ಗೆ ಒಂದು ಕೋತಿ ಸಿಕ್ಕಿಹಾಕಿಕೊಂಡು ಪ್ರಾಣ ಬಿಟ್ಟಿತು. ಅದಕ್ಕೆ ಏನಾಗಿತ್ತು ಎಂದು ನಾವು ನೋಡಲಿಲ್ಲ, ನಮಗೆ ಗೊತ್ತಿದ್ದರೆ, ಹಾಗೆ ಆಗಲು ಬಿಡುತ್ತಿರಲಿಲ್ಲ. ಇದು ಗೊತ್ತಾಗದೆ ನಡೆದಿದ್ದು ಎಂದು ಅವರು ಹೇಳುತ್ತಾರೆ..
ಆಗ ರವಿಚಂದ್ರನ್ ಅವರಿಗೆ ಗೊತ್ತಾಗುತ್ತದೆ, ಶಾಸ್ತ್ರಗಳ ಪ್ರಕಾರ ಕೋತಿಯನ್ನು ಸಾಯಿಸಿದವರು ಅಥವಾ ಸಾಯುವುದನ್ನು ನೋಡಿದವರು, ಮನುಷ್ಯರಿಗೆ ಸಂಸ್ಕಾರ ಮಾಡುವ ಹಾಗೆ ಅದಕ್ಕೂ ಮಾಡಬೇಕು. ಶಾಸ್ತ್ರದಲ್ಲಿ ಈ ರೀತಿ ಇದೆ, ಜೊತೆಗೆ, ಸಿನಿಮಾದಲ್ಲಿ ಹನುಮಂತನ ಪ್ರತಿಮೆಯನ್ನು ಹೊರಗೆ ಇಟ್ಟು ಚಿತ್ರೀಕರಣ ಮಾಡಬೇಕಿತ್ತು, ಆಗಲೂ ಸಮಸ್ಯೆ ಆಗಿತ್ತು. ಕೋತಿ ಹನುಮಂತನ ಸ್ವರೂಪ. ಈ ಘಟನೆಯೇ ಎಲ್ಲಾ ಸಮಸ್ಯೆಗಳಿಗೂ ಮೂಲ ಎಂದು ರವಿಚಂದ್ರನ್ ಅವರಿಗೆ ಗೊತ್ತಾಯಿತು. ಈ ಎರಡು ಸಿನಿಮಾಗಳು ಸಹ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಲಿಲ್ಲ ಎನ್ನುವುದು ಬೇಸರದ ವಿಚಾರ. ಈ ಘಟನೆಗಳ ಬಗ್ಗೆ ಸಹ ರವಿಚಂದ್ರನ್ ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಹೀಗೆ ಪ್ರಕೃತಿ ಸೂಚನೆ ಕೊಟ್ಟರೂ ಅದನ್ನು ಅರ್ಥ ಮಾಡಿಕೊಳ್ಳದೆ ಇದ್ದ ಕಾರಣ ರವಿಚಂದ್ರನ್ ಅವರ ಎರಡು ಸಿನಿಮಾಗಳು ಸೋತಿವೆ.
Comments are closed.