ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲಿ ಮಿಂಚುತ್ತಿರುವ ಸೋನು ಗೌಡ ರವರು ಒಂದು ಎಪಿಸೋಡಿಗೆ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತೇ??
ಪ್ರಸ್ತುತ ಕಿರುತೆರೆಯಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಮತ್ತೆ ಫಾರ್ಮ್ ಗ್ಸ್ ಬಂದಿದೆ. ಈ ಧಾರಾವಾಹಿ ಕೆಲವು ದಿನಗಳ ಕಾಲ ಜನಪ್ರಿಯತೆ ಕಳೆದುಕೊಂಡಿತ್ತು. ಆದರೆ ಈಗ ರಾಜನಂದಿನಿ ಪಾತ್ರ ಎಂಟ್ರಿಯಾದ ಮೇಲೆ ಜೊತೆ ಜೊತೆಯಲಿ ಧಾರಾವಾಹಿಗೆ ಹೊಸ ಹುರುಪು ಬಂದಿದೆ. ರಾಜನಂದಿನಿ ಫ್ಲ್ಯಾಶ್ ಬ್ಯಾಕ್, ಸುಭಾಷ್ ಪಾಟೀಲ್ ಮತ್ತು ರಾಜನಂದಿನಿ ಲವ್ ಸ್ಟೋರಿ , ಅವರಿಬ್ಬರು ಮದುವೆಯ ಎಪಿಸೋಡ್ ಗಳು ಇದೆಲ್ಲವೂ ವೀಕ್ಷಕರಿಗೆ ತುಂಬಾ ಇಷ್ಟವಾಗಿದೆ. ರಾಜನಂದಿನಿ ಪಾತ್ರದ ಮೂಲಕ ಸ್ಯಾಂಡಲ್ ವುಡ್ ನಟಿ ಸೋನು ಗೌಡ ಅವರು ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಸೋನು ಗೌಡ ಅವರು ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದವರು ನಟಿ ಸೋನು ಗೌಡ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಡನೆ ಯುವರತ್ನ ಸಿನಿಮಾದಲ್ಲಿ ಒಳ್ಳೆಯ ಪಾತ್ರದಲ್ಲಿ ನಟಿಸಿದ್ದರು. ಕಿರಗೂರಿನ ಗಯ್ಯಾಳಿಗಳು, ಇಂತಿ ನಿನ್ನ ಪ್ರೀತಿಯ, ಪರಮೇಶ ಪಾನ್ ವಾಲ ಸೇರಿದಂತೆ ಒಳ್ಳೆಯ ಕನ್ನಡ ಸಿನಿಮಾಗಳಲ್ಲಿ ಮುಖ್ಯಪಾತ್ರಗಳಲ್ಲಿ ಸೋನು ಗೌಡ ಮಿಂಚಿದ್ದಾರೆ. ಜೊತೆಜೊತೆಯಲಿ ಧಾರಾವಾಹಿ ಮೂಲಕ ಮೊದಲ ಬಾರಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಸೋನು ಗೌಡ ಅವರ ಪಾತ್ರಕ್ಕೆ ಅಭಿಮಾಣಿಗಳಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಸೋನು ಗೌಡ ಅವರು ಸಂದರ್ಶನ ಒಂದರಲ್ಲಿ ಮಾತನಾಡಿ, ಈ ಪಾತ್ರ ಒಪ್ಪಿಕೊಳ್ಳಲು ತಮ್ಮ ತಂದೆಯೇ ಎಂದು ಹೇಳಿದ್ದರು.
ಪ್ರತಿದಿನ ನಿನ್ನನ್ನ ಟಿವಿಯಲ್ಲಿ ನೋಡಬಹುದು ಎಂದು ಸೋನು ಗೌಡ ಅವರ ತಂದೆ ಹೇಳಿದಕ್ಕೆ ಅವರು ಜೊತೆ ಜೊತೆಯಲಿ ಧಾರಾವಾಹಿ ಒಪ್ಪಿಕೊಂಡಿದ್ದಾರೆ. ಸೋನು ಗೌಡ ಅವರ ತಂಗಿ ನೇಹಾ ಗೌಡ ಕಿರುತೆರೆಯಲ್ಲಿ ಬಹಳ ಫೇಮಸ್ ಆಗಿದ್ದರು, ಸೋನು ಗೌಡ ಅವರಿಗೆ ಬಹಳಷ್ಟು ಆಫರ್ ಗಳು ಬರುತ್ತಿದ್ದರು ಸಹ ಸೋನು ಗೌಡ ಅವರು ಒಪ್ಪಿಕೊಂಡಿರಲಿಲ್ಲ, ಆದರೆ ಜೊತೆ ಜೊತೆಯಲಿ ಧಾರಾವಾಹಿಯನ್ನು ಒಪ್ಪಿಕೊಂಡಿದ್ದಾರೆ. ರಾಜನಂದಿನಿ ಪಾತ್ರದ ಮೂಲಕ ಇವರ ಜನಪ್ರಿಯತೆ ಮತ್ತು ಅಭಿಮಾನಿ ಬಳಗ ಎರಡು ಸಹ ಹೆಚ್ಚಾಗಿದೆ. ಧಾರಾವಾಹಿ ತಂಡ ಇವರಿಗೆ ದುಬಾರಿ ಸಂಭಾವನೆಯನ್ನೇ ನೀಡುತ್ತಿದ್ದು, ಸೋನು ಗೌಡ ಅವರು ಒಂದು ಎಪಿಸೋಡ್ ಗೆ ಬರೊಬ್ಬರಿ 60 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.
Comments are closed.