ಟ್ವಿಟ್ಟರ್ ನಲ್ಲಿ ಸಮಂತಾ ಗುರಿ ಇಟ್ಟಿದ್ದು ಯಾರಿಗೆ ಗೊತ್ತೇ?? ಇಷ್ಟು ದಿನ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸಮಂತಾ ಇದ್ದಕ್ಕಿದ್ದ ಹಾಗೆ ಏನು ಹೇಳಿದ್ದಾರೆ ಗೊತ್ತೇ?
ನಟಿ ಸಮಂತಾ ಅವರು ಪತಿ ನಾಗಚೈತನ್ಯ ಅವರ ಜೊತೆ ವಿಚ್ಛೇದನ ಪಡೆದ ನಂತರ ಸೋಷಿಯಲ್ ಮೀಡಿಯಾದಲ್ಲಿ ಬಹಳ ಟಾರ್ಗೆಟ್ ಆಗುತ್ತಿದ್ದಾರೆ. ಸಮಂತಾ ಏನೇ ಮಾಡಿದರೂ ಒಂದಲ್ಲಾ ಒಂದು ರೀತಿಯಲ್ಲಿ ನೆಟ್ಟಿಗರು ಅವರನ್ನು ಟ್ರೋಲ್ ಮಾಡುತ್ತಲೇ ಇದ್ದಾರೆ. ನಟಿ ಸಮಂತಾ ಅವರು ಯಾವುದೇ ಟ್ರೋಲ್ ಗಳಿಗೂ ತಲೆಕೆಡಿಸಿಕೊಳ್ಳುವುದಿಲ್ಲ. ತಮ್ಮ ಕೆಲಸದ ಮೇಲೆ ಗಮನ ಹರಿಸುತ್ತಾ, ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಇದ್ಯಾವುದರ ಬಗ್ಗೆಯೂ ಸಮಂತಾ ಅವರು ತಲೆಕೆಡಿಸಿಕೊಳ್ಳುವುದಿಲ್ಲ.
ಆದರೆ ನಿನ್ನೆ ನಟಿ ಸಮಂತಾ ಅವರು ನಿನ್ನೆ ಒಂದು ಟ್ವೀಟ್ ಮಾಡಿದ್ದು, ಆ ಟ್ವೀಟ್ ನೋಡಿ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. “ನನ್ನ ಮೌನವನ್ನು ಅಜ್ಞಾನವೆಂದು.. ನನ್ನ ಶಾಂತ ಸ್ವಭಾವವನ್ನು ಸ್ವೀಕಾರವೆಂದು…ನನ್ನ ದಯೆಯನ್ನು ದೌರ್ಬಲ್ಯವೆಂದು ಪರಿಗಣಿಸಬೇಡಿ..” ಎಂದು ಬರೆದುಕೊಂಡಿದ್ದಾರೆ ನಟಿ ಸಮಂತಾ. ಈ ಟ್ವೀಟ್ ಮಾಡಿರುವುದು ಯಾವ ಕಾರಣಕ್ಕಾಗಿ ಎಂದು ತಿಳಿದುಬಂದಿಲ್ಲ. ಆದರೆ ಸಮಂತಾ ಅವರು ಯಾರನ್ನೋ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಮಾತ್ರ ಗೊತ್ತಾಗುತ್ತಿದೆ. ಯಾರಿಂದಾದರು ಸಮಂತಾ ಅವರಿಗೆ ಬೇಸರ ಆಗಿರಬಹುದೇ ಎಂದು ಅಭಿಮಾನಿಗಳು ಊಹೆ ಮಾಡಿದ್ದಾರೆ.
ಸಧ್ಯಕ್ಕೆ ನಟಿ ಸಮಂತಾ ಅವರು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಸಮಂತಾ ಅವರು ಸಧ್ಯಕ್ಕೆ ಸಿನಿಮಾ ಪ್ರೊಮೋಷನ್ ಗಳಲ್ಲಿ ಸಹ ಪಾಲ್ಗೊಳ್ಳುತ್ತಿಲ್ಲ. ಬದಲಾಗಿ ದುಬೈ ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. ಮುಂದಿನ ವಾರ ಸಮಂತಾ, ನಯನತಾರ, ಮತ್ತು ನಟ ವಿಜಯ್ ಸೇತುಪತಿ ಅವರು ಜೊತೆಯಾಗಿ ಅಭಿನಯಿಸಿರುವ ಕಾತುವಾಕುಲ ರೆಂಡು ಕಾದಲ್ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ ಜನರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಸಿನಿಮಾ ಬಿಡುಗಡೆ ಸಮಯದಲ್ಲಿ ಸಮಂತಾ ಅವರು ದುಬೈನಲ್ಲಿ ಪ್ರವಾಸ ಮಡುತ್ತಿದ್ದಾರೆ. ಆದರೆ ಈಗ ದಿಢೀರ್ ಎಂದು ಈ ರೀತಿ ಟ್ವೀಟ್ ಮಾಡಿರುವುದು ಅಭಿಮಾನಿಗಳಲ್ಲೊ ಆತಂಕ ತಂದಿದೆ.
Comments are closed.