ಜೀವನದಲ್ಲಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಶ್ಮಿಕಾ, ಇಂತಹ ಸಮಯದಲ್ಲಿ ಯಾಕೆ ತಪ್ಪು ಹೆಜ್ಜೆ ಇಡುತ್ತಾರೆ??
ಪ್ರಸ್ತುತ ಕನ್ನಡ ಬ್ಯೂಟಿ ರಶ್ಮಿಕಾ ಮಂದಣ್ಣ ಅವರು ಇರುವಷ್ಟು ಬ್ಯುಸಿಯಾಗಿ ಮತ್ತೊಬ್ಬ ಹೀರೋಯಿನ್ ಇರಲು ಸಾಧ್ಯವಿಲ್ಲ ಎಂದರೆ ತಪ್ಪಾಗುವುದಿಲ್ಲ. ತೆಲುಗಿನಲ್ಲಿ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಮತ್ತೊಂದು ಕಡೆ ಬಾಲಿವುಡ್ ನಲ್ಲಿ ನಾಲ್ಕು ಬಿಗ್ ಬಜೆಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಸಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ರಶ್ಮಿಕಾ ಅವರು ಹೈದರಾಬಾದ್, ಮುಂಬೈ, ಚೆನ್ನೈ ಎಂದು ಓಡಾಡುತ್ತಿದ್ದಾರೆ. ಈಗಾಗಲೇ ಬಾಲಿವುಡ್ ನಲ್ಲಿ ರಶ್ಮಿಕಾ ಅಭಿನಯದ ಮಿಷನ್ ಮಜ್ನು, ಮತ್ತು ಗುಡ್ ಬೈ ಸಿನಿಮಾ ಚಿತ್ರೀಕರಣವಾಗಿ ಬಿಡುಗಡೆಯಾಗಲು ಸಿದ್ಧವಾಗಿದೆ. ಇದನ್ನು ಹೊರತುಪಡಿಸಿ, ಹಿಂದಿಯಲ್ಲಿ ರಶ್ಮಿಕಾ ಅಭಿನಯದ ಮತ್ತೆರಡು ಸಿನಿಮಾಗಳು ಚಿತ್ರೀಕರಣ ಹಂತದಲ್ಲಿವೆ, ಅದರಲ್ಲಿ ಒಂದು ರಣಬೀರ್ ಕಪೂರ್ ಅವರೊಡನೆ ನಟಿಸಿರುವ ಅನಿಮಲ್ ಸಿನಿಮಾ, ಇದನ್ನು ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ಅವರು ನಿರ್ದೇಶನ ಮಾಡುತ್ತಿದ್ದಾರೆ.
ಇನ್ನು ತೆಲುಗಿನಲ್ಲಿ ಪುಷ್ಪ ಸಿನಿಮಾ ಸೀಕ್ವೆಲ್ ನಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ರಶ್ಮಿಕಾ ಅವರಿಗೆ, ಪ್ಯಾನ್ ಇಂಡಿಯಾ ರೇಂಜ್ ನಲ್ಲಿ ಜನಪ್ರಿಯತೆ ಮತ್ತು ಜನಮನ್ನಣೆ ಸಿಕ್ಕಿದೆ. ಹಾಗೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ರಶ್ಮಿಕಾ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಬಾಲಿವುಡ್ ನಲ್ಲೂ ಇವರ ಮೇಲಿರುವ ಕ್ರೇಜ್ ಹೆಚ್ಚಾಗಿದೆ. ಪುಷ್ಪ ಸಿನಿಮಾ ಇಂದ ರಶ್ಮಿಕಾ ಅವರಿಗೆ ಸಿಕ್ಕಿರುವ ಪ್ಯಾನ್ ಇಂಡಿಯಾ ಕ್ರೇಜ್, ಪ್ರಸ್ತುತ ಅವರಿಗೆ ಸಾಲು ಸಾಲು ಅವಕಾಶಗಳನ್ನು ತಂದು ಕೊಡುತ್ತಿದೆ. ಖ್ಯಾತ ನಟ ದಳಪತಿ ವಿಜಯ್ ಅವರ 66ನೇ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ರಶ್ಮಿಕಾ. ವಂಶಿ ಅವರ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಪ್ಯಾನ್ ಇಂಡಿಯಾ ಸಿನಿಮಾವನ್ನು ದಿಲ್ ರಾಜು ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ರಶ್ಮಿಕಾ ಅವರಿಗೆ ತಮಿಳಿನಲ್ಲಿ ಸಹ ಭಾರಿ ಕ್ರೇಜ್ ಸೃಷ್ಟಿಯಾಗುವುದು ಖಚತ ಎನ್ನಲಾಗುತ್ತಿದೆ.
ಪ್ರಸ್ತುತ ಒಂದಾದ ನಂತರ ಮತ್ತೊಂದು ಒಳ್ಳೆಯ ಪ್ರಾಜೆಕ್ಟ್ ಗಳನ್ನು ಒಪ್ಪಿಕೊಂಡು ಕೂಲ್ ಆಗಿ ಸಾಗುತ್ತಿರುವ ರಶ್ಮಿಕಾ ಕೆರಿಯರ್ ನಲ್ಲಿ, ಒಂದು ಸೆಲೆಕ್ಷನ್ ಹೊಸ ಪ್ರಯೋಗದ ಮೂಲಕ ಅವರ ಕೆರಿಯರ್ ಕಷ್ಟಕ್ಕೆ ಸಿಲುಕುತ್ತಾ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನೆಟ್ಟಿಗರು ಈ ರೀತಿ ಹೇಳಲು ಕಾರಣ ಸೀತಾರಾಮ್ ಎಂಬ ಹೊಸ ಸಿನಿಮಾ. ಈ ಸಿನಿಮಾವನ್ನು ಸ್ವಪ್ನ ಅವರು ನಿರ್ಮಾಣ ಮಾಡಿದ್ದು, ರಾಘವಪುಡಿ ಅವರು ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರೇ ಹೇಳುವ ಹಾಗೆ, ಸಿನಿಮಾದಲ್ಲಿ ರಶ್ಮಿಕಾ ಅವರು ನಾಯಕಿ ಅಲ್ಲ ಎಂದು ಹೇಳಿದ್ದಾರೆ. ನಾಯಕಿ ಎಂದರೆ ಕಣ್ಣಿನಲ್ಲಿ ಎಲ್ಲಾ ಭಾವನೆಯನ್ನು ವ್ಯಕ್ತಪಡಿಸುವ ಪಾತ್ರವಲ್ಲ ಎಂದು ಸ್ವತಃ ರಶ್ಮಿಕಾ ಅವರೇ ಹೇಳುತ್ತಾರೆ, ಮುಖ್ಯವಾದ ಪಾತ್ರವೇ ಆಗಿದ್ದರೂ, ಸಂಭಾಷಣೆ ಕಡಿಮೆ ಇದೆಯಂತೆ. ಈ ರೀತಿ ಇದ್ದಾಗ ಸೀತಾರಾಮ್ ಸಿನಿಮಾ ಅವರ ಕೆರಿಯರ್ ಗೆ ಅಡ್ಡಿ ಆಗಬಹುದು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Comments are closed.