ಇದೊಂದು ದೇವಸ್ಥಾನದಲ್ಲಿ ಮಾತ್ರ ಹನುಮಾನ್ ಇರುವುದು ಉಲ್ಟಾ: ಹೌದು ತಲೆಕೆಳಗಾಗಿ ಇರುವ ಹನುಮಾನ್, ಇದಕ್ಕೆ ಕಾರಣವೇನು ಗೊತ್ತೇ??
ಶ್ರೀ ಆಂಜನೇಯ ಸ್ವಾಮಿ, ಹನುಮಾನ್, ಭಕ್ತರ ಶಕ್ತಿಯ ಮೂಲ ಎಂದರೆ ತಪ್ಪಾಗುವುದಿಲ್ಲ. ಆಂಜನೇಯ ಸ್ವಾಮಿಯನ್ನು ಪೂಜಿಸಿ, ನಿಷ್ಠೆಯಿಂದ ಬೇಡಿಕೊಂಡರೆ, ಭಕ್ತರ ಎಲ್ಲಾ ಕಷ್ಟಗಳು ಕಳೆಯುತ್ತವೆ ಎಂದು ಹೇಳುತ್ತಾರೆ. ಪ್ರತಿ ಶನಿವಾರ ಭಕ್ತಾದಿಗಳು ಆಂಜನೆಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆಯುತ್ತಾರೆ. ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳಲ್ಲೂ ದೇವರ ಪ್ರತಿಮೆಯನ್ನು ನೋಡಿರುತ್ತೇವೆ. ಆದರೆ ಮಧ್ಯಪ್ರದೇಶಡ್ಸ್ ಉಜ್ಜಯಿನಿಯಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ, ಹನುಮಂತನು ತಲೆಕೆಳಗಾಗಿ ನಿಂತಿರುವ ಭಂಗಿಯಲ್ಲಿದೆ ದೇವರ ಮೂರ್ತಿ.
ಇದೇನು ಉಲ್ಟಾ ಹನುಮಾನ್ ಎಂದು ನೀವು ಸಹ ಯೋಚಿಸಬಹುದು. ಹನುಮಂತನು ಈ ರೀತಿ ಉಲ್ಟಾ ನಿಂತಿರುವುದಕ್ಕೂ ಪುರಾಣದಲ್ಲಿ ಒಂದು ಕಥೆ ಇದೆ. ರಾಮಾಯಣ ನಡೆಯುತ್ತಿದ್ದ ಸಮಯದಲ್ಲಿ, ಐರಾಣನು ರಾಮ ಲಕ್ಷ್ಮಣರನ್ನು ಬಂಧಿಸಿ ಪಾತಾಳ ಲೋಕಕ್ಕೆ ಕರೆದೊಯ್ದಿದ್ದನು. ಆಗ ರಾಮ ಲಕ್ಷ್ಮಣರನ್ನು ರಕ್ಷಿಸಲು ಆಂಜನೇಯನು ತಲೆಕೆಳಗಾಗಿ ಪಾತಾಳ ಲೋಕಕ್ಕೆ ಹೋಗುತ್ತಾನೆ ಎಂದು ಹೇಳಲಾಗುತ್ತದೆ. ಅಂದು ಆಂಜನೇಯ ಸ್ವಾಮಿ ಹೋದ ಸ್ಥಳವೇ ಈ ಸಾನ್ವರ್ ದೇವಸ್ಥಾನ ಎನ್ನುವ ನಂಬಿಕೆ ಇದೆ. ಇದೇ ಕಾರಣದಿಂದ ಹನುಮಂತನ ಮೂರ್ತಿ ಉಲ್ಟಾ ಇದೆ, ತಲೆಯ ಭಾಗ ಮಾತ್ರ ಮೂರ್ತಿಯಾಗಿ ಪ್ರತಿಷ್ಠಾಪನೆ ಮಾಡಲಾಗಿದೆ. ಈ ಹನುಮಂತನಿಗೆ ವೀರಹನುಮಾನ್ ಎಂದು ಕರೆಯುತ್ತಾರೆ. ಈ ದೇವಸ್ಥಾನ ಸುಮಾರು 1200 ವರ್ಷಗಳ ಹಳೆಯ ದೇವಸ್ಥಾನ ಎನ್ನಲಾಗಿದೆ. ಈ ದೇವಸ್ಥಾನದಲ್ಲಿ ಹನುಮಂತನ ಜೊತೆಗೆ, ರಾಮ, ಸೀತಾ, ಲಕ್ಷ್ಮಣ ಮತ್ತು ಶಿವ ಪಾರ್ವತಿಯ ಪೂಜೆ ಸಹ ಮಾಡಲಗುತ್ತದೆ.
ಇದು ರಾಮಾಯಣದ ಕಾಲಕ್ಕೆ ಸೇರಿದ ದೇವಸ್ಥಾನ ಎಂದು ಹೇಳಲಾಗುತ್ತದೆ. ಈ ದೇವಸ್ಥಾನದಲ್ಲಿ ಸಾಕಷ್ಟು ಋಷಿಮುನಿಗಳ ಮಂದಿರ ಸಹ ಇದೆ. ಅಲ್ಲದೆ ದೇವಸ್ಥಾನದ ಎದುರು ಎರಡು ಪುರಾಣದ ಪಾರಿಜಾತ ವೃಕ್ಷಗಳಿದ್ದು, ಅವುಗಳ ಮೇಲೆ ಗಿಳಿಗಳು ಯಾವಾಗಲೂ ಇರುತ್ತವೆ. ಪುರಾಣದಲ್ಲಿ ಆಂಜನೇಯ ಸ್ವಾಮಿ ಗಿಳಿಯ ರೂಪ ತಾಳಿ ಶ್ರೀರಾಮನ ವಾಹನ ಆಗಿದ್ದನು ಎನ್ನುವ ಮಾತಿದೆ. ಹಾಗಾಗಿ ಈ ದೇವಸ್ಥಾನದಲ್ಲಿ ಕಾಣಸಿಗುವ ಗಿಳಿಗಳನ್ನು ಆಂಜನೇಯ ಸ್ವಾಮಿಯ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ಈ ವೀರಹನುಮಾನ್ ದರ್ಶನ ಮಾಡಿ ಭಕ್ತರು ಏನೇ ಕೋರಿಕೆಗಳನ್ನು ಕೇಳಿದರು ಸಹ ಅದು ನೆರವೇರುತ್ತದೆ. ಈ ದೇವರಿಗೆ 3 ಅಥವಾ 5 ಮಂಗಳವಾರ ಕೆಂಪು ವಸ್ತ್ರವನ್ನು ಅರ್ಪಿಸಿ, ಇಷ್ಟಾರ್ಥ ಈಡೇರಿಸಿಕೊಳ್ಳುತ್ತಾರೆ ಭಕ್ತರು. ಪ್ರತಿ ಮಂಗಳವಾರ ಹನುಮಂತನಿಗೆ ಸಿಂಧೂರ ಲೇಪನ ಮಾಡುತ್ತಾರೆ. ಈ ದೇವಸ್ಥಾನದಲ್ಲಿರುವುದು ವಿಶೇಷವಾದ ಹನುಮನ ಮೂರ್ತಿ. ಉಜ್ಜಯಿನಿ ಕಡೆಗೆ ನೀವು ಪ್ರವಾಸ ಹೋದರೆ, ವೀರಹನುಮಾನ್ ದೇವಸ್ಥಾನಕ್ಕೆ ತಪ್ಪದೇ ಭೇಟಿ ನೀಡಿ.
Comments are closed.