Mahalakshmi Vratha 2023: ನಮಸ್ಕಾರ ಸ್ನೇಹಿತರೇ ನಮ್ಮ ಹಿಂದೂ ಪುರಾಣದಲ್ಲಿ ಮಹಾಲಕ್ಷ್ಮಿಯನ್ನು (Mahalakshmi Puja) ಸಂಪತ್ತಿನ ಅಧಿದೇವತೆ ಎಂಬುದಾಗಿ ಕರೆಯಲಾಗುತ್ತದೆ. ಇನ್ನು ಮಹಾಲಕ್ಷ್ಮಿಯನ್ನು ವಿಶೇಷವಾಗಿ ಪೂಜೆ ಮಾಡುವಂತಹ ಮಹಾಲಕ್ಷ್ಮಿ ವ್ರತ ಇದೆ ಸೆಪ್ಟೆಂಬರ್ ತಿಂಗಳ 22ನೇ ತಾರೀಖಿನಿಂದ ಪ್ರಾರಂಭವಾಗಿದೆ. ಇದು ಮುಂದಿನ ತಿಂಗಳ ಅಕ್ಟೋಬರ್ 6 ರವರೆಗೆ ಕೂಡ ಇರುತ್ತದೆ. ಈ ಸಂದರ್ಭದಲ್ಲಿ ಮಹಾಲಕ್ಷ್ಮಿಯನ್ನು ಶ್ರದ್ಧಾಭಕ್ತಿಯಿಂದ ಪೂಜಿಸುವುದು ನಿಮಗೆ ಸಾಕಷ್ಟು ಲಾಭಗಳನ್ನು ತಂದು ಕೊಡುವಂತಹ ಕೆಲಸವನ್ನು ಮಾಡುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಈ 16 ದಿನಗಳ ಮಹಾಲಕ್ಷ್ಮಿಯ ವ್ರತದ ಸಂದರ್ಭದಲ್ಲಿ ಸರಿಯಾದ ರೀತಿಯಲ್ಲಿ ಕ್ರಮಗಳ ಅನುಸಾರವಾಗಿ ಪೂಜೆ ಮಾಡಿದರೆ, ಮಹಾಲಕ್ಷ್ಮಿ ತಾಯಿ ಅಂತಹ ಭಕ್ತರ ಜೀವನದಲ್ಲಿ ಹಣದ ಸುರಿಮಳೆಯನ್ನೇ ಹರಿಸುತ್ತಾಳೆ ಎಂಬುದಾಗಿ ನಂಬಲಾಗುತ್ತದೆ.
Mahalakshmi Vratha 2023 Details Explained in Kannada – By Kannada News Team
ಮೊದಲನೇದಾಗಿ ನೀವು ಒಂದು ವೇಳೆ ನೀವು ಮಾಡುತ್ತಿರುವಂತಹ ಕೆಲಸದ ಸ್ಥಳಗಳಲ್ಲಿ ಏನಾದರೂ ಸಮಸ್ಯೆಯನ್ನು ಪದೇಪದೇ ಅನುಭವಿಸುತ್ತಿದ್ದರೆ ಆ ಸಂದರ್ಭದಲ್ಲಿ ನಿಮ್ಮ ಕೈಯಲ್ಲಿ 16 ಕಾಳು ಅಕ್ಕಿಯನ್ನು ಇಟ್ಟುಕೊಂಡು ಮಹಾಲಕ್ಷ್ಮಿ ವ್ರತದ ಸಂದರ್ಭದಲ್ಲಿ ಮಹಾಲಕ್ಷ್ಮಿ ವ್ರತದ ಕಥೆಯನ್ನು ಕೇಳಬೇಕು. ಅಕ್ಕಿ ಕಾಳುಗಳು ಮುರಿಯದೆ ಇರುವಂತಹ ಪೂರ್ಣವಾಗಿರುವಂತಹ ಅಕ್ಕಿ ಕಾಳು ಆಗಿರಬೇಕು. ಕಥೆ ಪೂರ್ತಿಯಾದ ನಂತರ ಆ ಅಕ್ಕಿಕಾಳನ್ನು ನೀರಿನಲ್ಲಿ ಹಾಕಿದ ನಂತರ ಚಂದ್ರನಿಗೆ ಶ್ರದ್ಧೆ ಭಕ್ತಿಯಿಂದ ಆರ್ಘ್ಯವನ್ನು ನೀಡಬೇಕಾಗಿರುತ್ತದೆ.
ಇದರ ಜೊತೆಗೆ ಮಹಾಲಕ್ಷ್ಮಿ ವ್ರತದ ಸಂದರ್ಭದಲ್ಲಿ ಉಪವಾಸವನ್ನು ಕೂಡ ಆಚರಿಸುವುದು ಸಾಕಷ್ಟು ಪವಿತ್ರ ಎಂಬುದಾಗಿ ಪರಿಗಣಿಸಲಾಗುತ್ತದೆ. ಸಂಜೆಯಾದ ತಕ್ಷಣ ಮಹಾಲಕ್ಷ್ಮಿ ದೇವಿಯ ಎದುರಿಟ್ಟು ಪೂಜಿಸಿರುವಂತಹ ಪಾಯಸವನ್ನು ನೈವೇದ್ಯ ಅರ್ಪಿಸಿದ ನಂತರ ಅದನ್ನು 16 ಮದುವೆ ಆಗದೇ ಇರುವಂತಹ ಹೆಣ್ಣು ಮಕ್ಕಳಿಗೆ ನೀಡಬೇಕು. ಇದನ್ನು ಕೂಡ ಶುಭ ಎಂಬುದಾಗಿ ಪರಿಗಣಿಸಲಾಗುತ್ತದೆ.
ಮಹಾಲಕ್ಷ್ಮಿ ವ್ರತದ ಸಂದರ್ಭದಲ್ಲಿ ಯಶಸ್ಸು ಹಾಗೂ ಹಣವನ್ನು ಸಂಪಾದಿಸಲು ಕೂಡ ಒಂದು ದಾರಿ ಇದ್ದು ಜಪಮಾಲೆಯ ಜೊತೆಗೆ ನೀವು ಓಂ ಶ್ರೀ ಕ್ಲೀನ್ ಮಹಾಲಕ್ಷ್ಮಿ ಮಹಾಲಕ್ಷ್ಮಿ ಮಹಾಲಕ್ಷ್ಮಿ ಏಹ್ಯೇಹಿ ಸರ್ವ ಸೌಭಾಗ್ಯಂ ದೇಹಿ ಮೇ ಸ್ವಾಹಾ ಎನ್ನುವಂತಹ ಲಕ್ಷ್ಮಿ ದೇವರಿಗೆ ಸಂಬಂಧಪಟ್ಟಂತ ಮಂತ್ರವನ್ನು ನಿಯಮಿತವಾಗಿ ಪಠಿಸಬೇಕಾಗಿರುತ್ತದೆ. ಖಂಡಿತವಾಗಿ ನೀವು ಮುಂದಿನ ದಿನಗಳಲ್ಲಿ ಹಣವಂತರಾಗಿ ಹಾಗೂ ಜೀವನದಲ್ಲಿ ಎಲ್ಲಾ ರೀತಿಯ ನೆಮ್ಮದಿಗಳಿಂದ ತುಂಬಿ ತುಳುಕಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದ್ದು ಲಕ್ಷ್ಮಿ ಖಂಡಿತವಾಗಿ ನಿಮಗೆ ಆಶೀರ್ವಾದ ಮಾಡುತ್ತಾಳೆ.
ನಿಮ್ಮ ಕೈಯಲ್ಲಿ ಒಂದು ರೂಪಾಯಿ ಇಲ್ಲ ಅಂದರೂ ಈ ಬಿಸಿನೆಸ್ ಗಳನ್ನೂ ಆರಂಭಿಸಿ ಲಕ್ಷ ಲಕ್ಷ ದುಡಿಯಬಹುದು. Business Ideas
ಮಹಾಲಕ್ಷ್ಮಿ ವ್ರತದ ಸಂದರ್ಭದಲ್ಲಿ 16 ದಿನಗಳ ಪೂಜೆಯ ಸಂದರ್ಭದಲ್ಲಿ ಹಳದಿ ಬಣ್ಣದ ಕಾವಡಿಗಳನ್ನು ಒಂದು ವೇಳೆ ನೀವು ಮಹಾಲಕ್ಷ್ಮಿ ಎದುರು ಇಟ್ಟು ನಿಯಮಿತವಾಗಿ ಪೂಜೆ ಮಾಡಿ ಆಕೆ ಆಶೀರ್ವಾದವನ್ನು ಪಡೆದರೆ ಸಾಕು ನಿಮ್ಮ ಜೀವನದಲ್ಲಿ ಪ್ರತಿಯೊಂದು ಕೆಲಸಗಳು ಕೂಡ ಶುಭವಾಗಿ ನಡೆಯುತ್ತದೆ. ಲಕ್ಷ್ಮಿ ಎದುರು ಇಟ್ಟು ಪೂಜೆ ಮಾಡಿರುವಂತಹ ಆ ಪವಿತ್ರ ಕವಡೆಗಳನ್ನು ಕೆಂಪು ಬಟ್ಟೆಯಲ್ಲಿ ನಿಮ್ಮ ಹಣ ಇಡುವಂತಹ ತಿಜೋರಿ ಸೇರಿದಂತೆ ಇನ್ನಿತರ ಜಾಗದಲ್ಲಿ ಇಟ್ಟರೆ ನಿಮ್ಮ ಜೀವನದಲ್ಲಿ ಹಣ ಅಭಿವೃದ್ಧಿ ಕೂಡ ಹೆಚ್ಚಾಗುತ್ತದೆ. ಈ ಕೆಲವೊಂದು ಪ್ರಮುಖ ಪವಿತ್ರ ಕ್ರಮಗಳನ್ನು ದೈನಂದಿನ ಪೂಜೆಯ ಕ್ರಮಗಳಲ್ಲಿ ಮಹಾಲಕ್ಷ್ಮಿ ವ್ರತದ ಸಂದರ್ಭದಲ್ಲಿ ಇಟ್ಟುಕೊಂಡರೆ ಖಂಡಿತವಾಗಿ ನೀವು ನಿಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತೀರಿ.
Comments are closed.