ಪುನೀತ್ ರಾಜ್ ಕುಮಾರ್ ರವರು ನೋಡಿದ ಕೊನೆ ಸಿನಿಮಾ ಯಾವುದು ಗೊತ್ತೇ?? ಅಪ್ಪು ಇಷ್ಟಪಟ್ಟ ಆ ಸಿನೆಮಾದ ಹೀರೋ ಯಾರು ಗೊತ್ತೇ??
ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಲ್ಲವಾಗಿ 6 ತಿಂಗಳು ಕಳೆದುಹೋಗಿದೆ. ಆದರೆ ಇಂದಿಗೂ ಸಹ ಅಪ್ಪು ಅವರ ನೆನಪುಗಳು, ಅವರು ತೋರಿಸಿಕೊಟ್ಟ ಒಳ್ಳೆಯತನದ ಹಾದಿ ಎಲ್ಲರ ಎದುರು ಇದೆ. ಅಪ್ಪು ಅವರು. ಹಾಕಿಕೊಟ್ಟಿರುವ ಬುನಾದಿಯಲ್ಲೇ ಎಲ್ಲರೂ ಸಾಗುತ್ತಿದ್ದಾರೆ. ಅಪ್ಪು ಅವರ ಆ ಸರಳತೆ, ಒಳ್ಳೆಯತನ, ವೈಶಾಲ್ಯ ಹೃದಯವನ್ನು ಯಾರು ಮರೆಯುವ ಹಾಗಿಲ್ಲ. ಅಪ್ಪು ಅವರು ಕನ್ನಡ ಚಿತ್ರರಂಗದಿಂದ ಸಿನಿಪ್ರಿಯರಿಗೆ ಬಹಳಷ್ಟು ಕೊಡುಗೆಗಳನ್ನು ನೀಡುಬ ದೊಡ್ಡ ಕನಸುಗಳನ್ನು ಕಂಡಿದ್ದರು. ಆ ನಿಟ್ಟಿನಲ್ಲಿ ಯುವಪ್ರತಿಭೆಗಳಿಗೆ ಅವಕಾಶ ನೀಡಲು ಪಿ.ಆರ್.ಕೆ ಪ್ರೊಡಕ್ಷನ್ಸ್ ಸಂಸ್ಥೆ ಶುರು ಮಾಡಿದರು. ಅಪ್ಪು ಅವರಿಗೆ ಈ ರೀತಿ ಆಗುವ ಮೊದಲು ಭಜರಂಗಿ2 ಸಿನಿಮಾ ನೋಡಬೇಕು ಎಂದುಕೊಂಡಿದ್ದರು. ಆದರೆ ಸಿನಿಮಾ ನೋಡಲು ಆಗಲಿಲ್ಲ, ಅದಕ್ಕಿಂತ ಮೊದಲು ಅಪ್ಪು ಅವರು ಕೊನೆಯದಾಗಿ ನೋಡಿ ಮೆಚ್ಚಿಕೊಂಡ ಆ ಸಿನಿಮಾ ಯಾವುದು ಗೊತ್ತಾ?
ಪುನೀತ್ ಅವರು ಚಂದನವನದ ಎಲ್ಲಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಹೊಸ ಸಿನಿಮಾಗಳು, ಹಾಡುಗಳು ಅವರಿಗೆ ಇಷ್ಟವಾದರೆ ಮನಸ್ಪೂರ್ತಿಯಾಗಿ ವಿಶ್ ಮಾಡುತ್ತಿದ್ದರು. ಹಾಗೆ ಅಪ್ಪು ಅವರು ಕೊನೆಯದಾಗಿ ನೋಡಿ, ಆ ಸಿನಿಮಾ ತುಂಬಾ ಇಷ್ಟವಾಗಿ ಮನಸಾರೆ ಇಡೀ ಚಿತ್ರತಂಡವನ್ನು ಹೊಗಳಿದ್ದರು. ಆ ಸಿನಿಮಾ ಮತ್ಯಾವುದು ಅಲ್ಲ, ಡಾಲಿ ಧನಂಜಯ್ ಅವರು ನಾಯಕನಾಗಿದ್ದ ರತ್ನನ್ ಪ್ರಪಂಚ ಸಿನಿಮಾ. ಅಪ್ಪು ಅವರು ನೋಡಿದ ಕೊನೆಯ ಸಿನಿಮಾ ಇದೇ ಆಗಿತ್ತು. ರತ್ನನ್ ಪ್ರಪಂಚ ಸಿನಿಮಾ ನೋಡಿ, ಅಪ್ಪು ಅವರಿಗೆ ಬಹಳ ಸಂತೋಷವಾಗಿತ್ತು, ಡಾಲಿ ಧನಂಜಯ್ ಮತ್ತು ಉಮಾಶ್ರೀ ಅವರ ಅಭಿನಯವನ್ನು ಮೆಚ್ಚಿಕೊಂಡಿದ್ದರು ಅಪ್ಪು. ಕಥೆ ಸಾಗುವ ರೀತಿ, ಚಿತ್ರಕಥೆ, ಎಲ್ಲವು ಅಪ್ಪು ಅವರಿಗೆ ಬಹಳ ಇಷ್ಟವಾಗಿತ್ತು. ಹಾಗಾಗಿ ಟ್ವೀಟ್ ಸಹ ಮಾಡಿ ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು..
ರತ್ನನ್ ಪ್ರಪಂಚ ಸಿನಿಮಾ ನಿರ್ದೇಶಕ ರೋಹಿತ್ ಪಡಕಿ ಅವರ ದಯವಿಟ್ಟು ಗಮನಿಸಿ ಸಿನಿಮಾವನ್ನು ಸಹ ಅಪ್ಪು ಅವರು ನೋಡಿ ಇಷ್ಟಪಟ್ಟಿದ್ದರು. ಅದನ್ನು ಫಾಲೋ ಮಾಡಿದ್ದ ಅಪ್ಪು ಅವರು ರತ್ನನ್ ಪ್ರಪಂಚ ಸಿನಿಮಾವನ್ನು ಸಹ ಮೆಚ್ಚಿಕೊಂಡಿದ್ದರು. ರತ್ನನ್ ಪ್ರಪಂಚ ಸಿನಿಮಾ ಕಥೆ ಸರಳವಾಗಿದ್ದರು ಸಹ, ನಾಯಕನ ಆ ಜರ್ನಿ ಮನಮುಟ್ಟುವಂಥದ್ದು. ಅಮೆಜಾನ್ ಪ್ರೈಮ್ ನಲ್ಲಿ ಈ ಸಿನಿಮಾ ಬಿಡುಗಡೆಯಾಗಿ ಜನಮನ್ನಣೆ ಗಳಿಸಿತ್ತು. ಅಪ್ಪು ಅವರು ಹೀಗೆ ಸ್ಯಾಂಡಲ್ ವುಡ್ ನಲ್ಲಿ ಯಾವುದೇ ಒಳ್ಳೆಯ ಕನ್ನಡ ಸಿನಿಮಾ ತೆರೆಕಂಡರೂ ಸಹ, ಪ್ರೋತ್ಸಾಹ ಕೊಡುತ್ತಿದ್ದರು. ಅಪ್ಪು ಅವರು ಬಹಳ ಆಸೆಯಿಂದ ತೆರೆದ ಸಂಸ್ಥೆ ಪಿ.ಆರ್.ಕೆ ಪ್ರೊಡಕ್ಷನ್ಸ್ ನ ಕೆಲಸಗಳನ್ನು ಅಶ್ವಿನಿ ಅವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
Comments are closed.