Neer Dose Karnataka
Take a fresh look at your lifestyle.

ನಿಜಕ್ಕೂ ಕಿರುತೆರೆ ನಟಿ ಚೇತನಾ ರವರಿಗೆ ಆಸ್ಪತ್ರೆಯಲ್ಲಿ ಮಾಡಿದ ಆಪರೇಷನ್ ಯಾವುದು ಗೊತ್ತೇ?? – ಪೊಲೀಸರು ಕಲೆಹಾಕಿದ ಮಾಹಿತಿಯೇನು ಗೊತ್ತೇ??

ಕನ್ನಡ್ಸ್ ಕಿರುತೆರೆ ಲೋಕವನ್ನೇ ಬೆಚ್ಚಿ ಬೀಳಿಸುವಂತಹ ಸುದ್ದಿಯೊಂದು ಮೊನ್ನೆ ರಾತ್ರಿ ಕೇಳಿಬಂದಿತ್ತು. ಕಲರ್ಸ್ ಕನ್ನಡ ವಾಹಿನಿಯ ಗೀತಾ ಮತ್ತು ದೊರಸಾನಿ ಧಾರವಾಹಿಗಳಲ್ಲಿ ನಟಿಸುತ್ತಿದ್ದ ಚೇತನಾ ರಾಜ್ ಅವರು ಕಾಸ್ಮೆಟಿಕ್ ಆಪರೇಷನ್ ಮಾಡಿಸಿಕೊಳ್ಳಲು ಹೋಗಿ, ವೈದ್ಯರ ನಿರ್ಲಕ್ಷ್ಯದಿಂದ ಆದ ಎಡವಟ್ಟಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಸಣ್ಣ ಆಗಬೇಕು ಎಂದು ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳಲು ಹೋಗಿ, ಆದ ಒಂದು ತಪ್ಪಿನಿಂದ ಆಕೆಯ ಪ್ರಾಣವನ್ನೇ ಕಳೆದುಕೊಳ್ಳುವ ಹಾಗೆ ಆಯಿತು. ಮಗಳನ್ನು ಕಳೆದುಕೊಂಡು ಚೇತನಾ ರಾಜ್ ಅವರ ತಂದೆ ತಾಯಿ ಕಣ್ಣೀರು. ಹಾಕುತ್ತಿದ್ದಾರೆ. ಅಷ್ಟಕ್ಕೂ ಚೇತನಾ ರಾಜ್ ಅವರಿಗೆ ಆದ ಆಪರೇಷನ್ ಯಾವುದು? ನಿಜಕ್ಕೂ ಆಗಿದ್ದೇನು? ಪೊಲೀಸರು ನೀಡಿರುವ ಮಾಹಿತಿ ಏನು ಗೊತ್ತಾ?

ಚೇತನಾ ಅವರನ್ನು ಸ್ನೇಹಿತರು ದಪ್ಪಗಿದ್ದೀಯಾ ಎಂದು ರೇಗಿಸುತ್ತಿದ್ದರಂತೆ. ಬಣ್ಣದ ಲೋಕದಲ್ಲಿರುವಾಗ ಸ್ಲಿಮ್ ಆಗಿ ಸುಂದರವಾಗಿ ಗ್ಲಾಮರಸ್ ಆಗಿರಬೇಕು ಎಂದು ಅನ್ನಿಸಿದ ಕಾರಣ, ಚೇತನಾ ರಾಜ್ ಅವರು ತಂದೆ ತಾಯಿಗೂ ಹೇಳದೆ, ಬೆಂಗಳೂರಿನ ನವರಂಗ್ ಸರ್ಕಲ್ ಬಳಿ ಇರುವ ಶೆಟ್ಟಿ ಕಾಸ್ಮೆಟಿಕ್ ಸರ್ಜರಿ ಹಾಸ್ಪಿಟಲ್ ನಲ್ಲಿ ಫ್ಯಾಟ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಆದರೆ ಸರ್ಜರಿ ನಡೆಯುವ ಸಮಯದಲ್ಲಿ ಎಡವಟ್ಟಾಗಿ, ಚೇತನಾ ರಾಜ್ ಅವರ ಶ್ವಾಸಕೋಶಕ್ಕೆ ನೀರು ನುಗ್ಗಿದ ಕಾರಣ, ಬಳಿಕ 4 ಗಂಟೆಗಳ ಚಿಕಿತ್ಸೆ ನೀಡಿದರು ಸಹ, ಚೇತನಾ ಅವರು ಬದುಕಿ ಉಳಿಯಲಿಲ್ಲ.
ಫ್ಯಾಟ್ ಸರ್ಜರಿ ನಡೆಯುವುದು ಎರಡು ರೀತಿ. ಲಿಪೋಸಕ್ಷನ್ ಆಪರೇಶನ್ ಎಂದು ಮಾಹಿತಿ ಸಿಕ್ಕಿದೆ. ಈ ಆಪರೇಷನ್ ಗೆ, ಫ್ಯಾಟ್ ಇರುವ ಭಾಗಕ್ಕೆ ಇಂಜೆಕ್ಷನ್ ಕೊಟ್ಟು ಬ್ಲಂಟ್ ಕ್ಯಾನ್ಯಲಾ ಉಪಯೋಗಿಸಿ ಫ್ಯಾಟ್ ಅನ್ನು ಕರಗಿಸಲಾಗುತ್ತದೆ.

ಮತ್ತೊಂದು ಆಪರೇಷನ್ ಕಡಿಮೆ ಫ್ಯಾಟ್ ಕರಗಿಸುವ ಆಪರೇಶನ್ ಆಗಿದ್ದು, ಅದನ್ನು ಡೇ ಕೇರ್ ಪ್ರೋಸಿಜರ್ ಮೂಲಕ ಮಾಡಲಾಗುತ್ತದೆ. ಮೊನ್ನೆ ಚೇತನಾ ಅವರಿಗೆ ನಡೆದದ್ದು, ಲಿಪೋಸಕ್ಷನ್ ಆಪರೇಷನ್ ಎಂದು ಮಾಹಿತಿ ಸಿಕಿದೆ. ಎಫ್.ಎಸ್.ಎಲ್ ರಿಪೋರ್ಟ್ ಮೂಲಕ ಕನ್ಫರ್ಮೇಷನ್ ಗಾಗಿ ಕಾಯುತ್ತಿದ್ದಾರೆ. ಈ ಪ್ರಕರಣದಲ್ಲಿ ನಡೆದಿರುವುದೇನು ಎನ್ನುವ ಬಗ್ಗೆ ಪೊಲೀಸರಿಗೆ ಕೆಲವು ಅನುಮಾನ ಮೂಡಿದೆ.
*ಏರ್ ಎಂಬೋಲಿಸಂ :- ಸರ್ಜರಿ ನಡೆದ ಬಳಿಕ,ಫ್ಯಾಟ್ ಬರ್ನ್ ಆಗಿರುವ ಸಾಧ್ಯತೆ ಇರುತ್ತದೆ. ಆಪರೇಷನ್ ಆದ 72 ಗಂಟೆಗಳ ಒಳಗೆ ಏರ್ ಎಂಬೋಲಿಸಂ ಆಗಿರುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.

ಫ್ಯಾಟ್ ಎಂಬೋಲಿಸಂ :- ಆಪರೇಷನ್ ಆಗುವ ಸಮಯದಲ್ಲಿ ಫ್ಯಾಟ್ ಸೆಮಿ ಸಾಲಿಡ್ ಆಗಿರುತ್ತದೆ, ಅವುಗಳು ಹೊರಗೆ ಬರುವಾಗ ರಕ್ತನಾಳಗಳಲ್ಲಿ ಬ್ಲಾಕ್ ಆಗುವ ಸಾಧ್ಯತೆ ಇರುತ್ತದೆ. ಇದು ಕೂಡ ಆಪರೇಷನ್ ಆದ ನಂತರ 72 ಗಂಟೆಗಳ ಒಳಗೆ ಆಗಬಹುದು.
ಕ್ಯಾನ್ಯುಲಾ ಮೂಲಕ ಲಿಪೋಸಕ್ಷನ್ ಆಪರೇಷನ್ ನಡೆಯುವಾಗ, ಲಂಗ್ಸ್ ಗೆ ಚುಚ್ಚಿರಬಹುದು. ಆ ಭಾಗದಲ್ಲಿ ಸಹ ಫ್ಯಾಟ್ ಸೇರಿಕೊಂಡಿರಬಹುದು. ಇದಲ್ಲದೆ, ಅನಸ್ತಿಶಿಯ ನೀಡುವಾಗ, ಅಲರ್ಜಿ ಆಗಿರಬಹುದು ಅದು ತುಂಬಾ ರೇರ್ ಕೇಸ್ ಎನ್ನಲಾಗುತ್ತಿದೆ. ಈ ಆಪರೇಷನ್ ಗೆ ಪೋಷಕರ ಸಿಗ್ನೇಚರ್ ಅವಶ್ಯಕತೆ ಇರುವುದಿಲ್ಲ, 18 ವರ್ಷ ಆಗಿದ್ದರೂ ಸಾಕು, ಆಪರೇಷನ್ ನಡೆಯುವಾಗ ಮದ್ಯಸೇವನೆ ಮಾಡಿರಬಾರದು, ಈ ಆಪರೇಷನ್ ಗೆ ಯಾವುದೇ ಗೈಡ್ ಲೈನ್ಸ್ ಇಲ್ಲ ಎಂದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.

Comments are closed.