ಸತತ ಮೂರು ಸೋಲನ್ನು ಕಂಡಿರುವ ಪೂಜಾ ಹೆಗ್ಡೆ ಮೊದಲ ಬಾರಿಗೆ ಸೋಲಿನ ಕುರಿತು ಮಾತನಾಡಿ ಹೇಳಿದ್ದೇನು ಗೊತ್ತೇ??
ದಕ್ಷಿಣ ಭಾರತ ಚಿತ್ರರಂಗದಲ್ಲಿ ಪ್ರಸ್ತುತ ಭಾರಿ ಜನಮನ್ನಣೆ ಗಳಿಸಿಕೊಂಡಿರುವ ನಟಿ ಪೂಜಾ ಹೆಗ್ಡೆ. ಸ್ಟಾರ್ ನಟರ ಸಿನಿಮಾಗಳಿಗೆ ನಾಯಕಿಯಾಗಿ ಪೂಜಾ ಹೆಗ್ಡೆ ಅವರು ಭಾರಿ ಜನಪ್ರಿಯತೆ ಗಳಿಸಿದರು. ಬಳಿಕ ಪೂಜಾ ಹೆಗ್ಡೆ ಅವರಿಗೆ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆದರೆ ಪೂಜಾ ಹೆಗ್ಡೆ ಅವರು ಅಭಿನಯಿಸಿದ ಮೂರು ಸಿನಿಮಾಗಳು ಸಹ ಬಾಕ್ಸ್ ಆಫೀಸ್ ನಲ್ಲಿ ಫ್ಲಾಪ್ ಎನ್ನಿಸಿಕೊಂಡಿದೆ. ಪೂಜಾ ಹೆಗ್ಡೆ ಅವರು ಇಷ್ಟು ದಿನಗಳ ವರೆಗೂ ಸಿನಿಮಾ ಸೋತಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಇತ್ತೀಚಿನ ಸಂದರ್ಶನ ಒಂದರಲ್ಲಿ ಪೂಜಾ ಹೆಗ್ಡೆ ಅವರು ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ..
ಪೂಜಾ ಹೆಗ್ಡೆ ಅವರು ಮೂಲತಃ ಮಂಗಳೂರಿನವರು. ಹೆಸರು ಮಾಡಿದ್ದು ಮಾತ್ರ ಟಾಲಿವುಡ್ ನಲ್ಲಿ, ತೆಲುಗು ಚಿತ್ರರಂಗದ ಹೆಸರಾಂತ ನಟರಾದ ಅಲ್ಲು ಅರ್ಜುನ್, ಜ್ಯೂನಿಯರ್ ಎನ್.ಟಿ.ಆರ್ ಅವರೊಡನೆ ನಟಿಸಿ ಸ್ಟಾರ್ ಪಟ್ಟಕ್ಕೇರಿದರು ಪೂಜಾ ಹೆಗ್ಡೆ. ಇವರು ನಟಿಸಿದ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಹಿಟ್ ಆಗುತ್ತಿದ್ದವು. ಆದರೆ ಯಾಕೋ ಈ ವರ್ಷ ಪೂಜಾ ಹೆಗ್ಡೆ ಅವರಿಗೆ ಅದೃಷ್ಟ ಕೈಕೊಟ್ಟ ಹಾಗಿದೆ. ಈ ವರ್ಷ ಪೂಜಾ ಹೆಗ್ಡೆ ನಟಿಸಿದ ಮೂರು ಸಿನಿಮಾಗಳು ಸಹ ಫ್ಲಾಪ್ ಲಿಸ್ಟ್ ಗೆ ಸೇರಿವೆ. ಮಾರ್ಚ್ ತಿಂಗಳಲ್ಲಿ ತೆರೆಕಂಡ ರಾಧೆ ಶ್ಯಾಮ್ ಸಿನಿಮಾ ಮಕಾಡೆ ಮಲಗಿತು, ಬಳಿಕ ಏಪ್ರಿಲ್ ತಿಂಗಳಿನಲ್ಲಿ ತೆರೆಕಂಡ ಬೀಸ್ಟ್ ಮತ್ತು ಆಚಾರ್ಯ ಸಿನಿಮಾ ಸಹ ಸೋಲು ಕಂಡಿವೆ. ಇವುಗಳ ಬಗ್ಗೆ ಪೂಜಾ ಹೆಗ್ಡೆ ಅವರು ಇದುವರೆಗೂ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಕಾನ್ ಉತ್ಸವದಲ್ಲಿ ಭಾಗವಹಿಸಿದ ಸಮಯದಲ್ಲಿ ಪೂಜಾ ಹೆಗ್ಡೆ ಅವರು ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ..
“ಇದೆಲ್ಲವೂ ಆಟದ ಒಂದು ಭಾಗ ಅಷ್ಟೇ. ಎಲ್ಲಾ ಸಿನಿಮಾಗಳಿಗೂ ಅದರದ್ದೇ ಆದ ಹಣೆಬರಹ ಇರುತ್ತದೆ. ಈ ಹಿಂದೆ ನಾನು 6 ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲು ನಟಿಸಿದ್ದೇನೆ. ಆ ಸಿನಿಮಾಗಳ ಬಗ್ಗೆ ನನಗೆ ಖುಷಿ ಇದೆ. ಈ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಗೆದ್ದಿರುವ ಸಿನಿಮಾಗಳ ಬಗ್ಗೆ ನನಗೆ ಹೆಮ್ಮೆ ಇದೆ, ಅದೇ ರೀತಿ ಸೋತಿರುವ ಸಿನಿಮಾಗಳನ್ನು ಸಹ ಒಪ್ಪಿಕೊಳ್ಳಬೇಕು. ನನ್ನ ವೃತ್ತಿಗೆ ನಾನು ಅವಮಾನ ಮಾಡುವುದಿಲ್ಲ. ಪ್ರತಿಯೊಂದು ಸಿನಿಮಾದಲ್ಲೂ ಅದೇ ಭಾವದಿಂದ ನಟಿಸಿದ್ದೇನೆ. ರಾಧೆ ಶ್ಯಾಮ್ ಸಿನಿಮಾದಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿತ್ತು ಎನ್ನುವ ಕಾರಣಕ್ಕೆ ಒಪ್ಪಿಕೊಂಡೆ. ಆಚಾರ್ಯ ಸಿನಿಮಾದಲ್ಲಿ ನನ್ನನು ಅತಿಥಿ ಪಾತ್ರ, ಅದು ಹಳ್ಳಿಹುಡುಗಿಯ ಪಾತ್ರವಾಗಿತ್ತು, ಆ ಪಾತ್ರ ನನಗೆ ಇಷ್ಗವಾಗಿತ್ತು. ಇನ್ನು ಬೀಸ್ಟ್ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿವೆ. ನಿರ್ದೇಶಕ ನೆಲ್ಸನ್ ಕುಮಾರ್ ಅವರ ಡಾಕ್ಟರ್ ಸಿನಿಮಾ ಇಷ್ಟವಾದ ಕಾರಣ ಆ ಸಿನಿಮಾ ಮಾಡಿದೆ..”ಎಂದಿದ್ದಾರೆ ಪೂಜಾ.
Comments are closed.