Neer Dose Karnataka
Take a fresh look at your lifestyle.

ಮಹೇಶ್ ಬಾಬುಗಾಗಿ ಎಂದಿಗೂ ಮಾಡದ ಕೆಲಸ ಮಾಡಿದ ರಾಜಮೌಳಿ. ಎರೆಡೆರಡು ಕಥೆ ಸಿದ್ದಪಡಿಸಿ ಆಯ್ಕೆ ನೀಡಿದ ರಾಜಮೌಳಿ. ಮಹೇಶ್ ಆಯ್ಕೆ ಯಾವುದು?? ಬಜೆಟ್ ಎಷ್ಟು ಗೊತ್ತೇ??

ಸ್ಟಾರ್ ಡೈರೆಕ್ಟರ್ ರಾಜಮೌಳಿ ಅವರು ಆರ್.ಆರ್.ಆರ್. ಬಳಿಕ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರೊಡನೆ ಸಿನಿಮಾ ಮಾಡುತ್ತಾರೆ ಎನ್ನುವ ವಿಚಾರ ಈಗಾಗಲೇ ಅಧಿಕೃತವಾಗಿ ಎಲ್ಲರಿಗೂ ತಿಳಿದಿದೆ. ರಾಜಮೌಳಿ ಅವರ ಸಿನಿಮಾ ಅಂದ್ರೆ, ಎಲ್ಲರಿಗೂ ಕುತೂಹಲ ಹೆಚ್ಚು, ರಾಜಮೌಳಿ ಅವರ ಒಂದೊಂದು ಸಿನಿಮಾ ಕೂಡ ವಿಭಿನ್ನವಾಗಿರುತ್ತದೆ. ಬಾಹುಬಲಿ ಮತ್ತು ಆರ್.ಆರ್.ಆರ್ ಬಳಿಕ ರಾಜಮೌಳಿ ಅವರ ಮೇಲಿನ ನಿರೀಕ್ಷೆ, ಅವರು ಕಥೆಯನ್ನು ತೆರೆಯ ಮೇಲೆ ತರುವ ಶೈಲಿ, ಸಿನಿಮಾದ ಬಜೆಟ್ ಎಲ್ಲವೂ ಸಹ ದೊಡ್ಡ ಮಟ್ಟದಲ್ಲಿದೆ. ಇದೀಗ ಮಹೇಶ್ ಬಾಬು ಅವರಿಗಾಗಿ ರಾಜಮೌಳಿ ಅವರು ಯಾವ ರೀತಿಯ ಕಥೆ ತಯಾರಿಸಿದ್ದಾರೆ ಗೊತ್ತಾ?

ಮಹೇಶ್ ಬಾಬು ಅವರ ಸಿನಿಮಾ ಅಂದ್ರೆ ಬಹಳ ಸ್ಪೆಷಲ್ ಆಗಿ, ಅದ್ಧೂರಿಯಾಗಿರುತ್ತೆ, ಅದೇ ರೀತಿ ರಾಜಮೌಳಿ ಅವರ ಸಿನಿಮಾ ಮೇಲು ಸಹ ಬಹಳಷ್ಟು ನಿರೀಕ್ಷೇ ಇರುತ್ತದೆ. ಇವರಿಬ್ಬರು ಜೊತಯಾಗಿ ಸಿನಿಮಾ ಮಾಡ್ತಾರೆ ಅಂದ್ರೆ ಅಭಿಮಾನಿಗಳಲ್ಲಿ ಕುತೂಹಲ ಮತ್ತು ಆಸಕ್ತಿ ಡಬಲ್ ಆಗಿದ್ದು, ಜಕ್ಕಣ್ಣ ಮತ್ತು ಪ್ರಿನ್ಸ್ ಸಿನಿಮಾ ಯಾವಾಗ ಶುರು ಆಗುತ್ತದೆ, ಕಥೆ ಹೇಗಿರುತ್ತದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ರಾಜಮೌಳಿ ಅವರ ಬಳಿ ಈಗಾಗಲೇ ಎರಡು ಐಡಿಯಾಗಳಿದ್ದು, ಅವುಗಳಲ್ಲಿ ಮಹೇಶ್ ಬಾಬು ಅವರಿಗೆ ಯಾವ ಐಡಿಯಾ ಇಷ್ಟವಾಗುತ್ತದೆ, ಅದರ ಮೇಲೆ ಕಥೆ ತಯಾರಾಗಲಿದೆಯಂತೆ. ರಾಜಮೌಳಿ ಅವರು ಒಂದು ಸಾರಿ ಕಥೆ ತಯಾರಿಸಿದ ಮೇಲೆ, ಡೈರೆಕ್ಟ್ ಆಜ್ಜ್ ಚಿತ್ರೀಕರಣ ಶುರು ಮಾಡುತ್ತಾರೆ, ಆದರೆ ಇದೇ ಮೊದಲ ಬಾರಿಗೆ ಆಯ್ಕೆಯನ್ನು ನಾಯಕನಿಗೆ ಬಿಟ್ಟಿದ್ದಾರೆ. ಮಹೇಶ್ ಬಾಬು ಅವರು ಯಾವ ಐಡಿಯಾ ಒಪ್ಪಿಕೊಳ್ಳುತ್ತಾರೋ ಆ ಐಡಿಯಾ ಮೇಲೆ ಕಥೆ ತಯಾರಾಗಲಿದೆ.

ಸಿನಿಮಾ ಕಥೆ ಹೇಗಿರಬಹುದು ಎನ್ನುವ ಬಗ್ಗೆ ಸಹ ಗುಸು ಗುಸು ಕೇಳಿ ಬರುತ್ತಿದ್ದು, ಮಹೇಶ್ ಬಾಬು ಅವರು ಬಾಂಡ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗುತ್ತಿದೆ. ಇನ್ನು ಈ ಸಿನಿಮಾ ಮುಂದಿನ ವರ್ಷದ ಆರಂಭದಲ್ಲಿ ಶುರುವಾಗಲಿದ್ದು, 2024ರ ಕೊನೆಯ ಸಮಯಕ್ಕೆ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ. ಆದರೆ ರಾಜಮೌಳಿ ಅವರು ಪರ್ಫೆಕ್ಷನ್ ನಲ್ಲಿ ಕೆಲಸ ಮಾಡುವವರು, ಒಂದೊಂದು ದೃಶ್ಯ ಪರ್ಫೆಕ್ಟ್ ಆಗಿ ಬರುವವರೆಗೂ, ಅವರು ಚಿತ್ರೀಕರಣ ನಿಲ್ಲಿಸುವುದಿಲ್ಲ, ಅದೇ ಕಾರಣದಿಂದ ರಾಜಮೌಳಿ ಅವರ ಸಿನಿಮಾಗಳು ತಡವಾಗುತ್ತವೆ. ಇನ್ನು ಸಿನಿಮಾದ ಬಜೆಟ್ ಸಹ, ಹಿಂದಿನ ರಾಜಮೌಳಿ ಅವರ ಎಲ್ಲಾ ಸಿನಿಮಾಗಳ ಬಜೆಟ್ ಗಿಂತ ಹೆಚ್ಚಾಗಿರಲಿದೆ ಎನ್ನಲಾಗುತ್ತಿದೆ. ಈ ಸಿನಿಮಾದ ಬಜೆಟ್ 800 ಕೋಟಿ ದಾಟಬಹುದು ಎನ್ನುವ ಸುದ್ದಿ ಕೇಳಿಬರುತ್ತಿದೆ. ಹಾಗಾಗಿ ರಾಜಮೌಳಿ ಮತ್ತು ಮಹೇಶ್ ಬಾಬು ಅವರ ಸಿನಿಮಾ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.

Comments are closed.