Neer Dose Karnataka
Take a fresh look at your lifestyle.

ಬಹಳ ಸ್ಪೆಷಲ್ ಆಗಿ ಹುಟ್ಟುಹಬ್ಬ ಆಚರಿಸಿಕೊಂಡ ತುಪ್ಪದ ಹುಡುಗಿ ರಾಗಿಣಿ, ಇವರಿಗೆ ಈಗ ವಯಸ್ಸು ಎಷ್ಟು ಗೊತ್ತೇ?? ಇಷ್ಟು ವಯಸ್ಸಾಗಿದ್ಯಾ??

ಚಂದನವನದ ಖ್ಯಾತ ನಟಿ ರಾಗಿಣಿ ಅವರು ತುಪ್ಪದ ಬೆಡಗಿ ಎಂದೇ ಹೆಸರು ಪಡೆದುಕೊಂಡಿದ್ದಾರೆ. ರಾಗಿಣಿ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 10 ವರ್ಷಕ್ಕಿಂತ ಹೆಚ್ಚಿನ ಸಮಯ ಆಗಿದೆ. ಮೊದಲಿಗೆ ಮಾಡೆಲ್ ಆಗಿದ್ದ ರಾಗಿಣಿ ಅವರು ಕಿಚ್ಚ ಸುದೀಪ್ ಅವರ ಕೆಂಪೇಗೌಡ ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಇಂದು ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಗುರುತಿಕೊಂಡಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ರಾಗಿಣಿ ಅವರು ಇತ್ತೀಚೆಗೆ ವಿಶೇಷವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು, ರಾಗಿಣಿ ಅವದ ನಿಜವಾದ ವಯಸ್ಸು ಎಷ್ಟು ಗೊತ್ತಾ?

ನಟಿ ರಾಗಿಣಿ ಬೆಂಗಳೂರಿನವರಲ್ಲ, ಅವರು ಮೂಲತಃ ಉತ್ತರ ಭಾರತದ ಹರಿಯಾಣದವರು. ಕಾಲೇಜ್ ದಿನಗಳಿಂದಲೇ ಮಾಡೆಲಿಂಗ್ ನಲ್ಲಿ ಸಕ್ರಿಯರಾಗಿದ್ದ ರಾಗಿಣಿ ಅವರು ನಂತರ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಕನ್ನಡ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡರು, ಬೋಲ್ಡ್ ಪಾತ್ರಗಳು ಮತ್ತು ಮಹಿಳಾ ಪ್ರಧಾನ ಪಾತ್ರಗಳು ಎರಡು ರೀತಿಯ ಪಾತ್ರಗಳಲ್ಲಿ ರಾಗಿಣಿ ಅವರು ಅಚ್ಚುಕಟ್ಟಾಗಿ ಅಭಿನಯಿಯಿಸುತ್ತಿದ್ದರು. ಇದೀಗ ನಟಿ ರಾಗಿಣಿ ತಮ್ಮ ಹುಟ್ಟುಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ತಮ್ಮ ಫೌಂಡೇಷನ್ಸ್ ವತಿಯಿಂದ ಮಂಗಳಮುಖಿಯರು ಮತ್ತು ವೃದ್ಧರಿಗೆ ಆಹಾರ ಒದಗಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ ನಟಿ ರಾಗಿಣಿ..

ರಾಗಿಣಿ ಅವರ ಹುಟ್ಟುಹಬ್ಬದ ದಿನ ಅವರು ನಾಯಕಿಯಾಗಿರುವ ಕ್ರೈಮ್ ಥ್ರಿಲ್ಲರ್ ಸಿನಿಮಾ, ಸಾರಿ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಜೊತೆಗೆ ರಾಗಿಣಿ ಅವರು ಈಗ ಕನ್ನಡ ತಮಿಳು ಮತ್ತು ಹಿಂದಿ ಭಾಷೆಗೆ ಎಂಟ್ರಿ ಕೊಡಲಿದ್ದಾರೆ. ಆ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯಸಿ ಇದ್ದಾರೆ ನಟಿ ರಾಗಿಣಿ. ಇದು ರಾಗಿಣಿ ಅವರಿಗೆ 33ನೇ ವರ್ಷದ ಹುಟ್ಟುಹಬ್ಬ, ರಾಗಿಣಿ ಅವರು ಇತ್ತೀಚೆಗೆ ತೂಕ ಇಳಿಸಿಕೊಂಡು ಬಹಳ ಸ್ಲಿಮ್ ಆಗಿದ್ದಾರೆ, ಹಾಗಾಗಿ ಅವರಿಗೆ ಅವಕಾಶಗಳು ಸಹ ಹೆಚ್ಚಾಗಿಯೇ ಬರುತ್ತಿದೆ. ಇದಲ್ಲದೇ ರಾಗಿಣಿ ಅವರು ಶೀಘ್ರದಲ್ಲೇ ಪ್ಯಾನ್ ಇಂಡಿಯಾ ಸಿನಿಮಾ ಒಂದನ್ನು ಮಾಡುವ ಆವೆ ಹೊಂದಿದ್ದಾರೆ. ರಾಗಿಣಿ ಅವರ ಹುಟ್ಟುಹಬ್ಬದ ಸಮಯದಲ್ಲಿ ಅವರ ಆಸೆಗಳು ನೆರವೇರಲಿ ಎಂದು ಹಾರೈಸೋಣ.

Comments are closed.