ರಮಿಕ ಸೇನ್ ಪಾತ್ರಕ್ಕಾಗಿ ಬಾಲಿವುಡ್ ವರೆಗೂ ಹೋಗುವ ಬದಲು ಈ ಕನ್ನಡತಿಗೆ ಅವಕಾಶ ನೀಡಿದ್ದರೆ ಇನ್ನು ಅದ್ಭುತವಾಗಿ ಇರುತಿತ್ತು. ಯಾರು ಗೊತ್ತೇ ಆ ಕನ್ನಡತಿ??
ಕೆಜಿಎಫ್2 ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಜನರನ್ನು ತಲುಪಿದೆ ಎನ್ನುವ ವಿಚಾರ ನಮಗೆಲ್ಲ ಗೊತ್ತಿದೆ. ಈ ಸಿನಿಮಾದಲ್ಲಿ ರಾಕಿ ಭಾಯ್ ಪಾತ್ರವನ್ನ ಜನರು ಎಷ್ಟು ಇಷ್ಟಪಟ್ಟಿದ್ದರೋ, ಅದೇ ರೀತಿ ಮುಖ್ಯಪಾತ್ರಗಳು ಜನರಿಗೆ ಬಹಳ ಇಷ್ಟವಾಗಿದೆ. ಖ್ಯಾತ ನಟ ಸಂಜಯ್ ದತ್ ಅವರ ಅಧೀರ ಪಾತ್ರ, ರವೀನಾ ಟಂಡನ್ ಅಭಿನಯಿಸಿದ ರಮಿಕಾ ಸೇನ್ ಅವರ ಪಾತ್ರ ಸಹ ಜನರಿಗೆ ಬಹಳ ಇಷ್ಟವಾಗಿದೆ. ಕೆಜಿಎಫ್2 ಸಿನಿಮಾ ಈಗ ಬಿಡುಗಡೆಯಾಗಿ ಒಂದು ತಿಂಗಳಿಗಿಂತ ಹೆಚ್ಚಿನ ಸಮಯ ಕಳೆದಿದ್ದರೂ ಸಹ ಕ್ರೇಜ್ ಕಡಿಮೆಯಾಗಿಲ್ಲ. ಸಿನಿಮಾ 1200 ಕೋಟಿಗಿಂತ ಹೆಚ್ಚಿನ ಹಣ ಗಳಿಸಿ ಮುನ್ನುಗ್ಗುತ್ತಿದೆ. ಈ ನಡುವೆ ಅಭಿಮಾನಿಗಳು ರಮಿಕಾ ಸೇನ್ ಪಾತ್ರದ ಬಗ್ಗೆ ಬೇರೆಯದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ..
ಕೆಜಿಎಫ್2 ನಲ್ಲಿ ರಮಿಕಾ ಸೇನ್ ಪಾತ್ರ ಬಹಳ ಸ್ಟ್ರಾಂಗ್ ಆದ ಪಾತ್ರ. ರಾಕಿ ವಿರುದ್ಧ ಸಮರ ಸಾರಿ, ಡೆತ್ ವಾರೆಂಟ್ ಹಾಕುವ ಧೈರ್ಯವಾದ ಪ್ರೈಮ್ ಮಿನಿಸ್ಟರ್ ರಮಿಕಾ. ಈ ಪಾತ್ರದಲ್ಲಿ ನಟಿಸಿರುವುದು ಬಾಲಿವುಡ್ ನ ಖ್ಯಾತ ನಟಿ ರವೀನಾ ಟಂಡನ್. ರವಿನಾ ಟಂಡನ್ ಅವರಿಮು 90ರ ದಶಕದಲ್ಲಿ ಉಪೇಂದ್ರ ಅವರೊಡನೆ ಉಪೇಂದ್ರ ಸಿನಿಮಾದಲ್ಲಿ ನಟಿಸಿ, ಕನ್ನಡಿಗರಿಗೆ ಚಿರಪರಿಚಿತರಾಗಿದ್ದರು. ಕರ್ನಾಟಕದಲ್ಲಿ ಇವರನ್ನು ಮಸ್ತ್ ಮಸ್ತ್ ಹುಡುಗಿ ಎಂದೇ ಕರೆಯುತ್ತಾರೆ. ಉಪೇಂದ್ರ ಬಳಿಕ ರವೀನಾ ಅವರು ಕನ್ನಡಕ್ಕೆ ಕಂಬ್ಯಾಕ್ ಮಾಡಿದ್ದು ಕೆಜಿಎಫ್2 ಸಿನಿಮಾ ಮೂಲಕ. ರಂಜಕಾ ಸೇನ್ ಪಾತ್ರದಲ್ಲಿ ರವೀನಾ ಟಂಡನ್ ಅವರು ಅದ್ಭುತವಾಗಿ ನಟಿಸಿರುವುದರಲ್ಲಿ ಯಾವುದೇ ಸಂಶಯ ಇಲ್ಲ.
ಆದರೆ ಈ ಪಾತ್ರಕ್ಕೆ ಬಾಲಿವುಡ್ ನಟಿ ಬೇಕಿತ್ತಾ ಎನ್ನುವ ಮಾತು ಈಗ ಕೇಳಿ ಬರುತ್ತಿದೆ. ರಮಿಕಾ ಸೇನ್ ಪಾತ್ರಕ್ಕೆ ಕನ್ನಡದಲ್ಲಿ ಧ್ವನಿ ನೀಡಿರುವುದು ಕನ್ನಡದ ಖ್ಯಾತ ನಟಿ ಸುಧಾರಾಣಿ ಅವರು. ಇವರು 80ರ ದಶಕದಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಸುಧಾರಾಣಿ ಅವರು ಸಹ ಅದ್ಭುತವಾದ ಕಲಾವಿದೆ. ರವೀನಾ ಟಂಡನ್ ಅವರ ಬದಲಾಗಿ ಸುಧಾರಾಣಿ ಅವರಿಗೆ ರಮಿಕಾ ಸೇನ್ ಪಾತ್ರದಲ್ಲಿ ನಟಿಸುವ ಅವಕಾಶ ನೀದಿದ್ದರೆ ಚೆನ್ನಾಗಿರುತ್ತದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಸಿನಿಮಾದಲ್ಲಿ ಸುಧಾರಾಣಿ ಅವರ ಧ್ವನಿ ಪ್ರಮುಖ ಪಾತ್ರ ವಹಿಸಿದೆ, ಅವರ ಧ್ವನಿ ಪವರ್ ಫುಲ್ ಆಗಿದ್ದು, ಪಾತ್ರವನ್ನೇ ಅವರಿಗೆ ನೀಡಿದ್ದರೆ ಅದ್ಭುತವಾಗಿ ಅಭಿನಯಿಸುತ್ತಿದ್ದರು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..
Comments are closed.