ನೀವು ಶನಿ ದೋಷದಿಂದ ಪರಿಹಾರ ಹೊಂದಬೇಕು ಎಂದರೆ ಈ ದೇವಸ್ಥಾನಗಳಿಗೆ ಭೇಟಿ ನೀಡಿ ಸಾಕು. ಎಲ್ಲವೂ ನಿವಾರಣೆಯಾಗುತ್ತದೆ..
ಹಿಂದೂ ಧರ್ಮದ ಪ್ರಕಾರ ಶನಿದೇವರು ಬಹಳ ಪವರ್ ಫುಲ್ ದೇವರು ಎಂದು ಹೇಳಲಾಗುತ್ತದೆ. ಶನಿದೇವರು ಕಬ್ಬ ವ್ಯಕ್ತಿ ಮಾಡುವ ಕೆಲಸಗಳ ಆಧಾರವಾಗಿ ವ್ಯಕ್ತಿತ ಫಲವನ್ನು ನಿರ್ಧಾರ ಮಾಡುತ್ತಾನೆ. ಒಬ್ಬ ಮನುಷ್ಯನ ಪಾಪ ಕರ್ಮಗಳು ಹಾಗೂ ಕೆಟ್ಟ ಕಾರ್ಯಗಳಿಗೆ ಶಿಕ್ಷೆ ನೀಡುತ್ತಾನೆ ಶನಿ. ಒಬ್ಬ ವ್ಯಕ್ತಿಯ ಜಾತಕದಲ್ಲಿ ಶನಿದೇವರ ಸ್ಥಾನ ಒಳ್ಳೆಯ ರೀತಿಯಲ್ಲಿದ್ದಾಗ, ಆ ವ್ಯಕ್ತಿಯ ಉದ್ಯೋಗ, ವ್ಯಾಪಾರ ವಹಿವಾಟು, ವಾಹನಗಳು ಹಾಗೂ ಇನ್ನಿತರ ಸಂತೋಷವನ್ನು ಪಡೆಯಿತ್ತಾನೆ. ಆದರೆ, ಶನಿದೇವರ ಸ್ಥಾನವು ವಿರುದ್ಧವಾದ ರೀತಿಯಲ್ಲಿದ್ದರೆ, ಜೀವನ ನಡೆಸಲು ಕಷ್ಟ ಪಡುವ ಜ್ಜ್ ಆಗುತ್ತದೆ. ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಶನಿದೇವರ ಕೆಲವು ದೇವಸ್ಥಾನಗಳಿದ್ದು, ಅಲ್ಲಿಗೆ ಭೇಟಿ ನೀಡಿದರೆ ಶನಿದೇವರ ದೋಷದಿಂದ ಮುಕ್ತಿ ಸಿಗುತ್ತದೆ ಎಂದು ಹೇಳುತ್ತಾರೆ. ಆ ದೇವಾಲಯಗಳು ಯಾವುದು? ಎಲ್ಲಿವೆ? ತಿಳಿಸುತ್ತೇವೆ ನೋಡಿ..
- ಸಾರಂಗಪುರ ಕಷ್ಟಭಂಜನ ಹನುಮಾನ್ ದೇವಸ್ಥಾನ :- ಈ ದೇವಸ್ಥಾನ ಇರುವುದು ಗುಜರಾತ್ ನ ಭಾವನಗರದ ಸಾರಂಗಪುರದಲ್ಲಿ. ಇದು ಆಂಜನೇಯ ಸ್ವಾಮಿಯ ಪುರಾಣದ ದೇವಸ್ಥಾನವಾಗಿದೆ. ಕಷ್ಟಭಂಜನ ಎಂದು ಕರೆಯುತ್ತಾರೆ, ಈ ದೇವಸ್ಥಾನದಲ್ಲಿ, ಆಂಜನೇಯ ಸ್ವಾಮಿಯ ಜೊತೆಗೆ ಶನಿದೇವರ ವಿಗ್ರಹವನ್ನು ಸಹ ಸ್ಥಾಪಿಸಲಾಗಿದೆ. ಈ ದೇವಸ್ಥಾನದಲ್ಲಿ ಶನಿ ದೇವರ ವಿಗ್ರಹ ವಿಭಿನ್ನವಾಗಿದ್ದು, ಶನಿ ದೇವರು ಸ್ತ್ರೀ ರೂಪದಲ್ಲಿರುತ್ತಾರೆ. ಹಾಗೂ ಆಂಜನೇಯ ಸ್ವಾಮಿಯ ಪಾದದ ಬಳಿ ಕುಳಿತಿರುತ್ತಾರೆ. ಶನಿದೇವರ ದೋಷ ಇರುವವರು, ಈ ದೇವಸ್ಥಾನಕ್ಕೆ ಭೇಟಿ ನೀಡಿ, ಹನುಮಂತನನ್ನು ಪೂಜಿಸುವುದರಿಂದ, ಜೀವನದ ಎಲ್ಲಾ ತೊಂದರೆಗಳಿಂದ ಮುಕ್ತಿ ಸಿಗುತ್ತದೆ.
2.ಉಜ್ಜಯಿನಿ ಶನಿ ದೇವಸ್ಥಾನ :- ಉಜ್ಜಯಿನಿ ಇರುವುದು ಮಧ್ಯಪ್ರದೇಶದಲ್ಲಿ, ಅಲ್ಲಿರುವ ಪುರಾತನ ದೇವಸ್ಥಾನವಾಗಿದ್ದು, ಬಹಳ ಖ್ಯಾತಿ ಪಡೆದಿದೆ. ಈ ದೇವಸ್ಥಾನಕ್ಕೆ ಭಕ್ತಾದಿಗಳು ಭೇಟಿ ನೀಡುವುದರಿಂದ, ಶನಿದೇವರಿಂದ ಆಗಿರುವ ಎಲ್ಲಾ ಕಷ್ಟಗಳು ಪರಿಹಾರ ಆಗುತ್ತದೆ ಎನ್ನುತ್ತಾರೆ. ಈ ದೇವಸ್ಥಾನ ಇರುವ ಊರಿನಲ್ಲಿ, ಯಾವುದೇ ಮನೆಗಳಿಗೂ ಬಾಗಿಲು ಹಾಕುವುದಿಲ್ಲ, ಜೊತೆಗೆ ಈ ದೇವಸ್ಥಾನದ ಗರ್ಭಗುಡಿಯಲ್ಲಿ, ಶನಿದೇವರ ವಿಗ್ರಹ ಇರುವ ಜಾಗದಲ್ಲಿ ಮೇಲ್ಛಾವಣಿ ಇಲ್ಲ, ಆಕಾಶದ ಕೆಳಗೆ ಹಾಗೆಯೇ ಇದೆ ವಿಗ್ರಹ. ಈ ಗ್ರಾಮದಲ್ಲಿ ಶನಿದೇವರ ಶಕ್ತಿ ಹೆಚ್ಚಾಗಿದೆ. ಹಾಗಾಗಿ ಈ ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ, ಒಬ್ಬ ವ್ಯಕ್ತಿಯ ಎಲ್ಲಾ ತೊಂದರೆಗಳಿಂದ ಮುಕ್ತಿ ಪಡೆಯುತ್ತಾನೆ.
3.ಇಂದೋರ್ ಶನಿ ದೇವಸ್ಥಾನ :- ಈ ದೇವಸ್ಥಾನ ಕೂಡ ಮಧ್ಯಪ್ರದೇಶದಲ್ಲಿದೆ. ಇಂದೋರ್ ನ ಈ ದೇವಾಲಯ ಬಹಳ ಮಹತ್ವ ಹೊಂದಿದೆ. ಈ ದೇವಸ್ಥಾನದಲ್ಲಿ ಶನಿದೇವರ 16 ಅಲಂಕಾರಗಳನ್ನು ಮಾಡಿದ್ದು, ಕಪ್ಪು ಕಲ್ಲುಗಳಿಂದ ಈ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ. ಈ ದೇವಸ್ಥಾನಕ್ಕೆ ಭೇಟಿ ನೀಡಿದರೆ, ಒಬ್ಬ ವ್ಯಕ್ತಿಯ ಎಲ್ಲಾ ತೊಂದರೆಗಳು ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಇದೆ.
4.ಗ್ವಾಲಿಯರ್ ನ ಶನೈಶ್ಚರ ದೇವಸ್ಥಾನ :- ಬಹಳ ಪುರಾತನವಾದ ದೇವಸ್ಥಾನಗಳಲ್ಲಿ ಈ ದೇವಸ್ಥಾನ ಸಹ ಒಂದಾಗಿದೆ. ಲಂಕಾದಿಂದ ಶನಿದೇವರ ದೇವಸ್ಥಾನವನ್ನು ಆಂಜನೇಯ ಸ್ವಾಮಿ ಈ ಸ್ಥಳಕ್ಕೆ ಎಸೆದರು ಎಂದು ನಂಬಲಾಗುತ್ತದೆ. ಆ ಘಟನೆ ಬಳಿಕ ಈ ಸ್ಥಳದಲ್ಲಿ ಶನಿದೇವರ ದೇವಸ್ಥಾನವನ್ನು ನಿರ್ಮಿಸಲಾಯಿತು ಎಂದು ಹೇಳುತ್ತಾರೆ. ಈ ದೇವಸ್ಥಾನಕ್ಕೆ ಭೇಟಿ ನೀಡಿ, ಶನಿದೇವರಿಗೆ ಪೂಜೆ ಸಲ್ಲಿಸಿದ ನಂತರ, ಸಾಸಿವೆ ಎಣ್ಣೆ ಅಥವಾ ಎಳ್ಳೆಣ್ಣೆಯನ್ನು ದೇವರಿಗೆ ಅರ್ಪಿಸಬೇಕು. ಬಳಿಕ, ದೇವರ ಬಳಿ ಕಷ್ಟಗಳನ್ನು ಹೇಳಿಕೊಳ್ಳಿ, ಈ ರೀತಿ ಮಾಡುವುದರಿಂದ ಎಲ್ಲಾ ಕಷ್ಟಗಳಿಂದ ಮುಕ್ತಿ ಪಡೆಯುತ್ತೀರಿ.
Comments are closed.