Neer Dose Karnataka
Take a fresh look at your lifestyle.

ಸಾಲ ತೀರಿಸಲು ಆಗದೆ ಫುಲ್ ಟೆನ್ಶನ್ ಜಾಸ್ತಿ ಆಗಿದ್ಯಾ?? ಹಾಗಿದ್ದರೇ ಜಸ್ಟ್ ಈ ಕೆಲಸ ಮಾಡಿ ಸಾಲ ತೀರಿಸಿಕೊಳ್ಳಿ..

ಈಗಿನ ಪ್ರಪಂಚದಲ್ಲಿ ಜನರು ತಮ್ಮ ಬಳಿ ಹಣ ಇಲ್ಲದೆ ಹೋದರು, ಐಷಾರಾಮಿ ಜೀವನ ನಡೆಸಬೇಕು, ದುಬಾರಿ ವಸ್ತುಗಳು ಮನೆಯಲ್ಲಿರಬೇಕು, ತಮ್ಮ ಲೈಫ್ ಹೈಫೈ ಆಗಿರಬೇಕು ಎಂದು ಬಯಸುತ್ತಾರೆ. ತಮ್ಮ ಬಳಿ ಹೆಚ್ಚಿನ ಹಣ ಇಲ್ಲದೆ ಹೋದರು ಎಲ್ಲವನ್ನು ಕೊಂಡುಕೊಳ್ಳಲು ಬಯಸುತ್ತಾರೆ. ಈ ರೀತಿ ಹಣ ಇಲ್ಲದೆ ಹೋದರು ಜನರಿಗೆ ಸಹಾಯ ಆಗುವ ಮಾಡಿರುವುದು ಇಎಂಐ ಗಳು. ಇಎಂಐ ನಲ್ಲಿ ವಸ್ತುಗಳನ್ನು ಖರೀದಿ ಮಾಡಿ, ಪ್ರತಿತಿಂಗಳು ಇಎಂಐ ಕಟ್ಟುವುದು ಹೇಗೆ ಎಂದು ಜನರು ತಲೆಕೆಡಿಸಿಕೊಂಡು ಕೂರುವ ಹಾಗೆ ಆಗಿದೆ. ಜನರು ತಮ್ಮ ಮನೆಯಲ್ಲಿ ದುಬಾರಿ ಪದಾರ್ಥಗಳು ಇರಬೇಕು ಎನ್ನುವ ಆಸೆಯಲ್ಲಿ, ಇಎಂಐ ನಲ್ಲಿ ಪದಾರ್ಥಗಳನ್ನು ಕೊಂಡುಕೊಳ್ಳುತ್ತಾರೆ. ಆದರೆ ಈಗ ರೆಪೋ ರೇಟ್ ದರ ಏರಿಕೆ ಆಗುವ ಸೂಚನೆಗಳಿವೆ.

ರೆಪೋ ರೇಟ್ ಎಂದರೆ, ಬಡ್ಡಿ ದರದ ಏರಿಕೆ ಎಂದು ಅರ್ಥ. ಈಗಾಗಲೇ ನಮ್ಮ ದೇಶದಲ್ಲಿ ಹಣದುಬ್ಬರ ಹೆಚ್ಚಾಗಿದ್ದು, ಇದರಿಂದಾಗಿ ರೆಪೋ ರೇಟ್ ಹೆಚ್ಚಾಗುವ ಸಾಧ್ಯತೆ ಇದೆ. ಕಳೆದ ಕೆಲವು ವರ್ಷಗಳಿಂದ ಆರ್.ಬಿ.ಐ ರೆಪೋ ರೇಟ್ ಅನ್ನು ಏರಿಕೆ ಮಾಡಿಲ್ಲ. ಈಗ ಏರಿಕೆ ಮಾಡಿದರೆ, ಜನರ ಜೀವನ ನಿಜಕ್ಕೂ ಕಷ್ಟವಾಗುತ್ತದೆ. ಈಗಾಗಲೇ ದೈನಂದಿನ ಜೀವನಕ್ಕೆ ಬೇಕಾದ ವಸ್ತುಗಳ ಬೆಲೆ ಏರಿಕೆ ಆಗುತ್ತಿದ್ದು, ಅದರಿಂದಲೇ ಈಗಾಗಲೇ ಜನರು ತತ್ತರಿಸಿ ಹೋಗಿದ್ದಾರೆ. ಈಗ ಮತ್ತೊಮ್ಮೆ ರೆಪೋ ರೇಟ್ ಸಹ ಏರಿಕೆಯಾದರೆ, ಅದರಿಂದ ಜನರಿಗೆ ಇನ್ನಷ್ಟು ಕಷ್ಟವಾಗುವುದರಲ್ಲಿ ಯಾವುದೇ ಸಂಶಯ ಇಲ್ಲ. ಹಾಗಾಗಿ ನೀವು ಕೂಡ ಇಎಂಐ ನಲ್ಲಿ ವಸ್ತುಗಳನ್ನು ಖರೀದಿಸಿ, ಆ ಹಣವನ್ನು ಪಾವತಿ ಮಾಡಲಾಗದೆ ಕಷ್ಟಪಡುತ್ತಿದ್ದರೆ, ಆ ಸಮಸ್ಯೆಯಿಂದ ಇಂದ ಮುಕ್ತಿ ಪಡೆಯಲು, ಕೆಲವು ಟಿಪ್ಸ್ ಗಳನ್ನು ಇಂದು ನಿಮಗೆ ತಿಳಿಸುತ್ತೇವೆ..

ಈಗಾಗಲೇ ನೀವು ಇಎಂಐ ಕಟ್ಟುವ ಪರಿಸ್ಥಿತಿಯಲ್ಲಿದ್ದರೆ, ಜೀವನದಲ್ಲಿ ಅನಗತ್ಯವಾದ ಖರ್ಚುಗಳನ್ನು ಕಡಿಮೆ ಮಾಡಿ. ಇಎಂಐ ಕಟ್ಟುವ ಸಮಯದಲ್ಲಿ ಅನಗತ್ಯ ಖರ್ಚುಗಳನ್ನು ಮಾಡುತ್ತಾ ಬಂದರೆ, ಇಎಂಐ ಕಟ್ಟಲು ಸಹ ಕಷ್ಟವಾಗುತ್ತಾ ಹೋಗುತ್ತದೆ. ಹಾಗಾಗಿ ಇಂತಹ ಪರಿಸ್ಥಿತಿ ಬರದ ಹಾಗೆ ನೋಡಿಕೊಳ್ಳಿ, ನೀವು ಗಳಿಸುವ ಹಣದಲ್ಲಿ ಒಂದು ಭಾಗವನ್ನು ಇಎಂಐ ಕಟ್ಟಲು ಎತ್ತಿಟ್ಟುಬಿಡಿ. ಇದು ಅನಿವಾರ್ಯತೆಯು ಹೌದು. ಇದೆಲ್ಲದಕ್ಕೂ ಸಿದ್ಧತೆ ಮಾಡಿಕೊಂಡು, ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು, ಖರ್ಚುಗಳನ್ನು ಕಡಿಮೆ ಮಾಡಿ. ಬ್ಯಾಂಕ್ ಗಳಲ್ಲಿ ಇಎಂಐ ಅವಧಿ ಹೆಚ್ಚು ಮಾಡುವುದಕ್ಕಿಂತ ಸಾಲದ ಸಮಯವನ್ನು ಜಾಸ್ತಿ ಮಾಡುತ್ತಾರೆ. ಇದರಿಂದ ಬಡ್ಡಿಯ ಹೊರೆ ಇನ್ನಷ್ಟು ಹೆಚ್ಚಾಗುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು, ಇಎಂಐ ಪಾವತಿ ಮಾಡಿ. ಸಾಲವನ್ನು ಪುನರ್ ರಚಿಸಿ ಕೊಡುವಂತೆ ಬ್ಯಾಂಕ್ ನಲ್ಲಿ ಮನವಿ ಮಾಡಿದರೆ, ಬ್ಯಾಂಕ್ ನಿಮಗೆ ಹೊಸದಾದ, ನಿಮಗೆ ಸುಲಭ ಆಗುವಂತಹ, ಇಎಂಐ ಆಯ್ಕೆಗಳನ್ನು ಬ್ಯಾಂಕ್ ನೀಡುತ್ತದೆ. ಇಲ್ಲದೆ ಹೋದರೆ, ಕಡಿಮೆ ಬಡ್ಡಿ ದರ ನೀಡುವ ಬ್ಯಾಂಕ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. ಹೆಚ್ಚಿಗೆ ಬಡ್ಡಿದರ ಇರುತ್ತದೆ, ಒಂದಕ್ಕಿಂತ ಹೆಚ್ಚು ಸಾಲ ಇದ್ದರೆ, ಕಷ್ಟವಾಗಬಹುದು, ಹಾಗಾಗಿ ನೀವು ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

Comments are closed.