Neer Dose Karnataka
Take a fresh look at your lifestyle.

ಅಪ್ಪಿ ತಪ್ಪಿಯೂ ಕೂಡ ಹೆಣ್ಣು ಮಕ್ಕಳು ಈ ಕೆಲಸ ಮಾಡುವಾಗ ನೋಡಬೇಡಿ, ಗರುಡ ಪುರಾಣದ ಪ್ರಕಾರ ಮಹಾ ತಪ್ಪು. ಯಾವ್ಯಾವು ಗೊತ್ತೇ?

ನಮ್ಮ ಜೀವನದಲ್ಲಿ ನಡೆಯುವ, ನಾವು ಮಾಡುವ ಎಲ್ಲಾ ಕೆಲಸಗಳನ್ನು ಪಾಪ ಮತ್ತು ಪುಣ್ಯ ಎಂದು ವಿಂಗಡಿಸಲಾಗುತ್ತದೆ. ಪುರಾಣಗಳ ಪ್ರಕಾರ, ನಾವು ಮಾಡುವ ಒಳ್ಳೆಯ ಕೆಲಸಗಳನ್ನು ಪುಣ್ಯದ ಕೆಲಸಗಳು ಎಂದು, ಕೆಟ್ಟ ಕೆಲಸಗಳನ್ನು ಪಾಪದ ಕೆಲಸಗಳು ಎಂದು ಹೇಳುತ್ತಾರೆ. ನಮ್ಮಿಂದ ನಡೆಯುವ ಪಾಪದ ಕೆಲಸಗಳಿಂದ ನಾವು ವಿಧಿವಶವಾಗಿ ಹೋದ ಬಳಿಕ, ಪುಣ್ಯದ ಕೆಲಸಗಳನ್ನು ಮಾಡಿರುವವರು ಸ್ವರ್ಗವಾಸ, ಹಾಗೂ ಪಾಪದ ಕೆಲಸಗಳನ್ನು ಮಾಡಿರುವವರಿಗೆ ನರಕದಲ್ಲಿ ಹಿಂಸೆ ಸಿಗುತ್ತದೆ ಎಂದು ಹೇಳುತ್ತಾರೆ. ಹಿಂದೂ ಧರ್ಮದ ಪುರಾತನ ಗ್ರಂಥಗಳಲ್ಲಿ ಒಂದಾದ ಗರುಡ ಪುರಾಣದಲ್ಲಿ ಸಹ ಇವುಗಳ ಬಗ್ಗೆ ಉಲ್ಲೇಖವಾಗಿದೆ. ಗರುಡ ಪುರಾಣದಲ್ಲಿ 19,000ಕ್ಕಿಂತ ಹೆಚ್ಚು ಶ್ಲೋಕಗಳು ಇವೆ. ಅವುಗಳಲ್ಲಿ ಮನುಷ್ಯನು ಹೇಗೆ ಬದುಕಬೇಕು, ಯಾವುದು ತಪ್ಪು ಯಾವುದು ಸರಿ ಎಂದು ತಿಳಿಸಿದ್ದಾರೆ. ಗರುಡ ಪುರಾಣದಲ್ಲಿ ಹೇಳಿರುವ ಪ್ರಕಾರ, ಮಹಿಳೆಯರು, ಆ ಎರಡು ಕೆಲಸಗಳನ್ನು ಮಾಡುತ್ತಿರುವಾಗ, ಪುರುಷರು ಅಪ್ಪಿ ತಪ್ಪಿಯೂ ಮಹಿಳೆಯರನ್ನು ನೋಡಬಾರದು, ಒಂದು ವೇಳೆ ನೋಡಿದರೆ, ಅವರಿಗೆ ನರಕದಲ್ಲಿ ಶಿಕ್ಷೆ ತಪ್ಪುವುದಿಲ್ಲ ಎನ್ನುತ್ತಾರೆ. ಅಷ್ಟಕ್ಕೂ ಆ ಎರಡು ಕೆಲಸಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

1.ಹೆಣ್ಣುಮಕ್ಕಳು ತಮ್ಮ ಪುಟ್ಟ ಮಕ್ಕಳಿಗೆ ಹಾಲು ಕುಡಿಸುವಾಗ :- ಹೆಣ್ಣುಮಕ್ಕಳಿಗೆ ಪುಟ್ಟ ಮಕ್ಕಳಿದ್ದರೆ, ಅವುಗಳಿಗೆ ಎದೆ ಹಾಲು ಕುಡಿಸುವ ಮೂಲಕ, ಆಹಾರ ನೀಡುತ್ತಾರೆ. ಆ ಸಮಯಕ್ಕೆ ಮಕ್ಕಳು ಮುಗ್ಧರು, ಏನು ಅರಿಯರಾದವರಿಗಿರುತ್ತಾರೆ. ಇವರಿಗೆ ಆಹಾರ ನೀಡಲು, ಮಹಿಳೆಯರು ತಮ್ಮ ಎದೆಯ ಭಾಗವನ್ನು ಸರಿಸಿ ಹಾಲು ಕುಡಿಸಬೇಕಾಗುತ್ತದೆ. ಹಾಗಾಗಿ ಅಂತಹ ಸಮಯದಲ್ಲಿ ಪುರಿಷರು ಮಹಿಳೆಯರನ್ನು ನೋಡಬಾರದು. ಒಂದು ವೇಳೆ ಪುರುಷರು ಈ ಸಮಯದಲ್ಲಿ ಮಹಿಳೆಯನ್ನು ನೋಡುವುದು ಹಾಗೂ ಮಹಿಳೆಯ ಮೇಲೆ ಕೆಟ್ಟ ದೃಷ್ಟಿ ಹರಿಸುವುದು ಮಾಡಿದರೆ, ಆತನಿಗೆ ನರಕದಲ್ಲಿ ಶಿಕ್ಷೆ ತಪ್ಪಿದ್ದಲ್ಲ ಎನ್ನುತ್ತಾರೆ.

  1. ಮಹಿಳೆಯರು ಸ್ನಾನ ಮಾಡುವಾಗ :- ಮಹಿಳೆಯರು ಪೂರ್ತಿ ಬಟ್ಟೆಯನ್ನು ಧರಿಸದೆ ಸ್ನಾನ ಮಾಡುತ್ತಿದ್ದರೆ, ಪುರುಷರು ಆ ಸಮಯದಲ್ಲಿ ಮಹಿಳೆಯರನ್ನು ನೋಡಬಾರದು ಎಂದು ಹೇಳುತ್ತಾರೆ. ಒಂದು ವೇಳೆ ಮಹಿಳೆಯರು ಸ್ನಾನ ಮಾಡುವಾಗ, ಪುರುಷರು ಬೇಕೆಂದು ಕೆಟ್ಟ ದೃಷ್ಟಿಯಿಂದ ನೋಡುವುದು ಮಾಡಿದರೆ, ಅವರಿಗೆ ನರಕಯಾತನೆ ತಪ್ಪಿದ್ದಲ್ಲ ಎಂದು ಹೇಳುತ್ತಾರೆ. ಈ ಎರಡು ತಪ್ಪುಗಳನ್ನು ಮಾಡುವ ಮನುಷ್ಯರು ಸ್ವರ್ಗಕ್ಕೆ ಹೋಗುವುದಿಲ್ಲ ಎನ್ನುತ್ತಾರೆ.

Comments are closed.