ಸಣ್ಣ ಹೂಡಿಕೆಯಿಂದ ಗೃಹಾಧಾರಿತ ವ್ಯವಹಾರವನ್ನು ಪ್ರಾರಂಭಿಸಿ ಕೈತುಂಬಾ ಹಣ ಗಳಿಸುವುದು ಹೇಗೆ ಗೊತ್ತೇ? ಯಾವ ಉದ್ಯಮ ಗೊತ್ತೇ??
ಕೋವಿಡ್ ಸಾಂಕ್ರಾಮಿಕದಿಂದಾಗಿ ಪ್ರಪಂಚವು ಕುಗ್ಗುತ್ತಿರುವ ಹಿನ್ನೆಲೆಯಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉತ್ತಮ ಆಹಾರವನ್ನು ತೆಗೆದುಕೊಳ್ಳಲು ಆದ್ಯತೆ ನೀಡುತ್ತದೆ. ಹಾಗಾಗಿಅನೇಕ ಜನರು ತಮ್ಮ ದೈನಂದಿನ ಆಹಾರದಲ್ಲಿ ಮಸಾಲೆಗಳ ಬಳಕೆಯನ್ನು ಹೆಚ್ಚಿಸಿದ್ದಾರೆ. ಹೆಚ್ಚು ಹೆಚ್ಚು ಭಾರತೀಯರು ಮಸಾಲೆ ಪದಾರ್ಥಗಳನ್ನು ಸೇವಿಸುತ್ತಿದ್ದಾರೆ. ಪ್ರತಿ ಮನೆಯ ಅಡುಗೆಮನೆಯಲ್ಲಿ ಇವುಗಳು ಇರಲೇಬೇಕು. ಬಳಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಮಸಾಲೆ ಪದಾರ್ಥಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಹಾಗಾಗಿಯೇ ಇವುಗಳನ್ನು ತಯಾರಿಸಲು ಹೆಚ್ಚು ಹೆಚ್ಚು ಮಂದಿ ಆಸಕ್ತಿ ತೋರುತ್ತಿದ್ದಾರೆ. ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಎಲ್ಲ ಕಾಲದಲ್ಲೂ ಈ ವ್ಯಾಪಾರಕ್ಕೆ ಉತ್ತಮ ಬೇಡಿಕೆ ಇದೆ.
ಆದರೆ ಮಸಾಲಾ ತಯಾರಿಕೆ ಘಟಕಕ್ಕೆ ಎಷ್ಟು ಹೂಡಿಕೆ ಬೇಕು? ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಈ ಮಾರುಕಟ್ಟೆಯನ್ನು ಹೇಗೆ ಮಾಡಲಾಗುತ್ತದೆ ಎಂಬುದನ್ನು ನೋಡೋಣ.. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಯೋಜನೆ ಪ್ರಕಾರ, ಮಸಾಲೆ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಒಟ್ಟು ಹೂಡಿಕೆ 3.50 ಲಕ್ಷ ರೂಪಾಯಿಗಳು.300 ಚದರ ಅಡಿ ವಿಸ್ತೀರ್ಣದ ಕಟ್ಟಡದ ಶೆಡ್ ಗೆ ಸುಮಾರು 60,000 ರೂಪಾಯಿಗಳು. ಮತ್ತು ಉಪಕರಣಗಳಿಗೆ 40,000 ರೂಪಾಯಿಗಳು ಬೇಕಾಗುತ್ತದೆ. ಇದಲ್ಲದೇ ಕಾಮಗಾರಿ ಆರಂಭಿಸಲು 2.50 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕು. ಇದಕ್ಕಾಗಿ ನಿಮ್ಮ ಬಳಿ ಸಾಕಷ್ಟು ಹಣವಿಲ್ಲದಿದ್ದರೆ ನೀವು ಬ್ಯಾಂಕಿನಿಂದ ಸಾಲವನ್ನೂ ಪಡೆಯಬಹುದು. ಪ್ರಧಾನ ಮಂತ್ರಿ ಉದ್ಯೋಗ ಯೋಜನೆಯಡಿ ಈ ವ್ಯವಹಾರಕ್ಕಾಗಿ ಸಾಲ ತೆಗೆದುಕೊಳ್ಳಬಹುದು.
ಆದರೆ, ಖರ್ಚು ಕಡಿಮೆ ಮಾಡುವ ವಿಧಾನ ಏನೆಂದರೆ.. ಬಾಡಿಗೆ ಜಾಗದ ಬದಲು ಸ್ವಂತ ಜಾಗದಲ್ಲಿ ಅಥವಾ ಮನೆಯಲ್ಲಿ ಈ ಉದ್ಯಮ ಆರಂಭಿಸಿದರೆ ಖರ್ಚು ಕಡಿಮೆಯಾಗುತ್ತದೆ. ಯೋಜನಾ ವರದಿಯ ಪ್ರಕಾರ ವಾರ್ಷಿಕವಾಗಿ 193 ಕ್ವಿಂಟಾಲ್ ಸಾಂಬಾರು ಪದಾರ್ಥಗಳನ್ನು ಉತ್ಪಾದಿಸಲಾಗುತ್ತದೆ. ಇದರಲ್ಲಿ ಕ್ವಿಂಟಾಲ್ ಗೆ 5,400 ರೂಪಾಯಿಗಳು ಎನ್ನುವುದಾದರೆ ವರ್ಷಕ್ಕೆ ಒಟ್ಟು 10.42 ಲಕ್ಷ ರೂಪಾಯಿಗಳು ಸಿಗುತ್ತದೆ. ಇದರಲ್ಲಿ ಎಲ್ಲಾ ಖರ್ಚು ವೆಚ್ಚಗಳನ್ನು ಕಳೆದು, ವಾರ್ಷಿಕ ಲಾಭ 2.54 ಲಕ್ಷ ರೂಪಾಯಿಗಳು. ಅಂದರೆ ನೀವು ತಿಂಗಳಿಗೆ 21,000 ರೂಪಾಯಿಗಿಂತ ಹೆಚ್ಚು ಗಳಿಸಬಹುದು. ಇದಷ್ಟೇ ಅಲ್ಲದೆ ಉತ್ಪಾದಿಸಿದ ಮಸಾಲೆಗಳನ್ನು ಆಕರ್ಷಕವಾಗಿ ಪ್ಯಾಕ್ ಮಾಡಬೇಕು. ಉತ್ಪನ್ನವನ್ನು ಸ್ಥಳೀಯ ಮಾರುಕಟ್ಟೆಯಲ್ಲಿ, ಮತ್ತು ಚಿಲ್ಲರೆ ಅಂಗಡಿಗಳಲ್ಲಿ, ಹಾಗೆಯೇ ನೇರ ಗ್ರಾಹಕರೊಂದಿಗೆ ಮಾರಾಟ ಮಾಡಬಹುದು. ವ್ಯಾಪಾರ ಬೆಳೆಯುತ್ತಿರುವ ಕೆಲವು ವಿಶೇಷ ವೆಬ್‌ಸೈಟ್‌ಗಳು, ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡಿದರೆ ವ್ಯಾಪಾರವು ಮತ್ತಷ್ಟು ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ.
Comments are closed.