Neer Dose Karnataka
Take a fresh look at your lifestyle.

ಕೊಹ್ಲಿಗೆ ರೋಹಿತ್ ಗೆ ಅಷ್ಟೇ ಅಲ್ಲಾ, ರಾಹುಲ್ ಗೆ ಎಚ್ಚರಿಕೆ ರವಾನೆ ಮಾಡಿದ ಬಿಸಿಸಿಐ. ಹೇಳಿದ್ದೇನು ಗೊತ್ತೇ?

ಬಿಸಿಸಿಐಗೆ ಅತ್ಯಂತ ಕಷ್ಟಕರವಾದ ಕೆಲಸ ಅಂದ್ರೆ, ಪಂದ್ಯಗಳಿಗೆ ಆಟಗಾರರನ್ನು ಆಯ್ಕೆಮಾಡುವುದು. ಯಾಕಂದರೆ ಒಂದೊಂದು ಸ್ಥಾನಕ್ಕೂ ಸಹ, ಹತ್ತಾರು ಆಟಗಾರರು ಪೈಪೋಟಿಯಲ್ಲಿ ಇರುತ್ತಾರೆ. ಹಿರಿಯ ಆಟಗಾರರು ಹಾಗೂ, ಯುವ ಆಟಗಾರರು ಎಲ್ಲರಿಗೂ ಸಹ ಟೀಮ್ ಇಂಡಿಯಾಗೆ ಸೆಲೆಕ್ಟ್ ಆಗಬೇಕು ಎನ್ನುವ ಆಸೆ ಇರುತ್ತದೆ. ಅದರ ಕಡೆಗೆ ಪರಿಶ್ರಮ ವಹಿಸಿ ಉತ್ತಮವಾದ ಪ್ರದರ್ಶನ ನೀಡುತ್ತಿದ್ದಾರೆ. ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ, ಟಿ20 ವಿಶ್ವಕಪ್ ಪಂದ್ಯಗಳಿಗೆ ಆಯ್ಕೆ ಮಾಡುವ ಟಾಸ್ಕ್ ಅವರ ಮೇಲಿದೆ.

ಜುಲೈ 1ರಿಂದ ಇಂಗ್ಲೆಂಡ್ ನಲ್ಲಿ ಸರಣಿ ಪಂದ್ಯಗಳು ಶುರುವಾಗಲಿದ್ದು, ಭಾರತ ತಂಡ ಈಗಾಗಲೇ ಇಂಗ್ಲೆಂಡ್ ಗೆ ತೆರಳಿ ಪ್ರಾಕ್ಟೀಸ್ ಶುರು ಮಾಡಿದೆ. ಭಾರತ ತಂಡದ ಹಿರಿಯ ಸ್ಟಾರ್ ಪ್ಲೇಯರ್ ಗಳು ಈಗ ಇಂಗ್ಲೆಂಡ್ ಪಂದ್ಯಗಳ ಮೂಲಕ ತಂಡಕ್ಕೆ ವಾಪಸ್ ಬಂದಿದ್ದಾರೆ. ಆದರೆ ಹಲವು ಹಿರಿಯ ಆಟಗಾರರು ಫಾರ್ಮ್ ನಲ್ಲಿಲ್ಲ ಎನ್ನುವುದು ಇಲ್ಲಿ ಗಮನಿಸಬೇಕಾದ ವಿಚಾರ. ಹಾಗಾಗಿ ಆಯ್ಕೆಗಾರರರು ತಂಡವನ್ನು ಆಯ್ಕೆ ಮಾಡುವುದು ಬಹಳ ಕಷ್ಟದ ಕೆಲಸ ಆಗಿದೆ. ಆಟಗಾರರು ಫಾರ್ಮ್ ನಲ್ಲರುವುದು, ಅವರ ಪರ್ಫಾರ್ಮೆನ್ಸ್, ಸ್ಟ್ರೈಕ್ ರೇಟ್ ಎಲ್ಲವನ್ನು ಸಹ ಪರಿಗಣಿಸಿ ಆಟಗಾರರನ್ನು ಸೆಲೆಕ್ಟ್ ಮಾಡಬೇಕು. ಇಂಗ್ಲೆಂಡ್ ಸರಣಿ ಪಂದ್ಯಗಳಲ್ಲೆ ಟಿ20 ವಿಶ್ವಕಪ್ ಪಂದ್ಯಕ್ಕೆ ಬೇಕಾಗಿರುವ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಆಯ್ಕೆ ಮಾಡುವವರು ಇಂಗ್ಲೆಂಡ್ ಗೆ ತೆರಳಲಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಪ್ರಸ್ತುತ ಟೀಮ್ ಇಂಡಿಯಾ ಇಂದ ಕೆ.ಎಲ್.ರಾಹುಲ್ ಅವರು ಹೊರಗಿದ್ದಾರೆ, ಗಾಯದ ಕಾರಣದಿಂದ ರಾಹುಲ್ ಅವರಿಗೆ ಪಂದ್ಯಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ರಾಹುಲ್ ಅವರು ಇಂಗ್ಲೆಂಡ್ ಪಂದ್ಯಗಳಲ್ಲಿ ಪಾಲ್ಗೊಳಲ್ಲಿದ್ದಾರೆ. ಆ ಪಂದ್ಯಗಳಲ್ಲಿ ರಾಹುಲ್ ಅವರು ಉತ್ತಮವಾದ ಪ್ರದರ್ಶನ ನೀಡಿದರೆ ಮಾತ್ರ, ಟಿ20 ವಿಶ್ವಕಪ್ ಗೆ ಆಯ್ಕೆ ಆಗುತ್ತಾರೆ. ಇಲ್ಲವಾದರೆ ಮುಂದಿನ ಸಾರಿ ಚೆನ್ನಾಗಿ ಆಡಿ, ಈಗ ಯುವ ಆಟಗಾರರಿಗೆ ಅವಕಾಶ ಕೊಡುತ್ತೇವೆ ಎಂದು ಆಯ್ಕೆ ಸಮಿತಿ, ರಾಹುಲ್ ಅವರಿಗೆ ಎಚ್ಚರಿಕೆ ನೀಡಲಿದೆ. ಲೀಡಿಂಗ್ ರನ್ ಸ್ಕೋರರ್ ಆಗಿರುವ ರಾಹುಲ್ ಅವರು ಈವರೆಗೂ ಆಡಿರುವ 15 ಪಂದ್ಯಗಳಲ್ಲಿ 135.38 ಸ್ಟ್ರೈಕ್ ರೇಟ್ ನಲ್ಲಿ 616 ರನ್ ಗಳನ್ನು ಗಳಿಸಿದ್ದಾರೆ.

Comments are closed.