ವಿಶೇಷ ತೀರ್ಪುದಾರಾಗಿ ಡಾನ್ಸ್ ಕರ್ನಾಟಕ ಡಾನ್ಸ್ ಗೆ ಬಂದಿರುವ ಶಿವಣ್ಣ ಒಂದು ಗಂಟೆಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ??
ಕನ್ನಡ ಕಿರುತೆರೆ ಲೋಕ ಈಗ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾ ಹೋಗುತ್ತಿದೆ. ಸಿನಿಮಾ ಪ್ರಪಂಚದಷ್ಟೇ ಕಿರುತೆರೆ ಲೋಕ ಸಹ ಹೆಸರು, ಜನಪ್ರಿಯತೆ ಮಯ್ತು ಸಂಭಾವನೆ ಎಲ್ಲಾ ವಿಚಾರದಲ್ಲೂ ಮುಂದಿದೆ. ವಾರದ ದಿನಗಳಲ್ಲಿ ಧಾರಾವಾಹಿಗಳಾದರೆ, ವಾರಾಂತ್ಯದಲ್ಲಿ ರಿಯಾಲಿಟಿ ಶೋಗಳು ಜನರಿಗೆ ಭರ್ಜರಿ ಮನರಂಜನೆ ನೀಡುತ್ತಲಿದೆ. ಸಿಂಗಿಂಗ್, ಡ್ಯಾನ್ಸಿಂಗ್ ಮತ್ತು ಕಾಮಿಡಿ ರಿಯಾಲಿಟಿ ಶೋಗಳು ಸಾಮಾನ್ಯವಾಗಿ ಪ್ರಸಾರವಾಗುತ್ತಿವೆ. ಇದೀಗ ಈ ಸಾಲಿನಲ್ಲಿ ಪ್ರಮುಖ ಸ್ಥಾನದಲ್ಲಿ ನಿಲ್ಲುವುದು ಜೀಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ. ಇದೀಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದ 6ನೇ ಸೀಸನ್ ಶುರುವಾಗಿದೆ.
ಈ ಬಾರಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮ ಇನ್ನಷ್ಟು ವಿಶೇಷವಾಗಿದೆ, ಏಕೆಂದರೆ ಈ ಬಾರಿ ಜಡ್ಜ್ ಆಗಿ ಕರುನಾಡ ಚಕ್ರವರ್ತಿ ಡ್ಯಾನ್ಸ್ ಕಿಂಗ್ ಶಿವ ರಾಜ್ ಕುಮಾರ್ ಅವರು ಜಡ್ಜ್ ಆಗಿ ಡಿಕೆಡಿ ವೇದಿಕೆಗೆ ಬಂದಿದ್ದಾರೆ. ಶೋ ಶುರುವಾಗಿ ಮುಗಿಯುವವರೆಗೂ ಪ್ರತಿ ಎಪಿಸೋಡ್ ನಲ್ಲೂ ಶಿವಣ್ಣ ಇರಲಿದ್ದಾರೆ ಎನ್ನುವುದು ವಿಶೇಷ. ಇವರ ಜೊತೆ ಚಿನ್ನಿ ಪ್ರಕಾಶ್ ಮಾಸ್ಟರ್, ನಟಿ ರಕ್ಷಿತಾ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇರಲಿದ್ದು, ಎಂದಿನಂತೆ ಅನುಶ್ರೀ ಅವರು ಡಿಕೆಡಿ ನಿರೂಪಣೆ ಮಾಡುತ್ತಿದ್ದಾರೆ. ಮೊದಲ ಬಾರಿಗೆ ಶಿವಣ್ಣ ರಿಯಾಲಿಟಿ ಶೋ ಒಂದಕ್ಕೆ ಜಡ್ಜ್ ಆಗಿ ಬಂದಿದ್ದಾರೆ.
ಪ್ರತಿ ಸ್ಪರ್ಧಿಯ ಪರ್ಫಾರ್ಮೆನ್ಸ್ ಆದ ನಂತರ ಶಿವಣ್ಣ ಅವರು ಕೊಡುವ ಕಮೆಂಟ್ಸ್ ಗಳು ಬಹಳ ಮಹತ್ವದ್ದಾಗಿರುತ್ತದೆ. ಎಲ್ಲರು ಶಿವಣ್ಣ ಅವರಿಂದ ಭೇಷ್ ಎನ್ನಿಸಿಕೊಳ್ಳಬೇಕು ಎಂದು ಪರ್ಫಾರ್ಮ್ ಮಾಡುತ್ತಾರೆ. ಶಿವಣ್ಣ ಅವರಿಗೆ ಈ ಶೋನಲ್ಲಿ ಸಾಕಷ್ಟು ಸರ್ಪ್ರೈಸ್ ಗಳು ಸಹ ಇರಲಿದೆ. ಅಪ್ಪು ಅವರ ನೆನಪುಗಳು, ಫ್ಯಾಮಿಲಿ ಬಗ್ಗೆ ಸರ್ಪ್ರೈಸ್, ಹೀಗೆ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ ಡಿಕೆಡಿ. ಶಿವಣ್ಣ ಬಹಳ ಸಂತೋಷದಿಂದ, ಸಿನಿಮಾ ಚಿತ್ರೀಕರಣಗಳ ನಡುವೆ ಸಮಯ ಮಾಡಿಕೊಂಡು ಡಿಕೆಡಿ ಶೋಗೆ ಬರುತ್ತಿದ್ದಾರೆ. ಇನ್ನು ಜೀಕನ್ನಡ ವಾಹಿನಿ ಶಿವಣ್ಣ ಅವರಿಗೆ ದೊಡ್ಡ ಮಟ್ಟದಲ್ಲಿ ಸಂಭಾವನೆಯನ್ನು ನೀಡುತ್ತಿದ್ದು, ಒಂದು ಗಂಟೆ ಚಿತ್ರೀಕರಣಕ್ಕೆ 1.2 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಶಿವಣ್ಣ.
Comments are closed.