ಮೂರುವರ್ಷ ಮಗುವಿನ ಪ್ರಾಣ ತೆಗೆದು ತಾನು ಕೂಡ ಉಸಿರು ನಿಲ್ಲಿಸಿದ ತಾಯಿ. ಈ ಕಠಿಣ ನಿರ್ಧಾರಕ್ಕೆ ಕಾರಣವೇನಂತೆ ಗೊತ್ತೇ??
ಪ್ರಪಂಚದಲ್ಲಿ ಹಲವು ಹೃದಯ ವಿದ್ರಾವಕ ಘಟನೆ ನಡೆಯುತ್ತದೆ. ಅದರ ಬಗ್ಗೆ ಕೇಳಿ ಮನಸ್ಸಿಗೆ ನೋವಾಗುತ್ತದೆ ಹೊರತು ಇನ್ನೇನು ಮಾಡಲು ಸಾಧ್ಯ ಆಗುವುದಿಲ್ಲ. ದುಡುಕಿ ತೆಗೆದುಕೊಳ್ಳುವ ನಿರ್ಧಾರಗಳಿಂದ ಎರಡು ಕುಟುಂಬಕ್ಕೆ ತೊಂದರೆ ಉಂಟಾಗುತ್ತದೆ. ಪ್ರಾಣವನ್ನು ಕಳೆದುಕೊಳ್ಳುವ ಹಾಗೆ ಆಗುತ್ತದೆ. ಇಂಥದ್ದೇ ಘಟನೆ ಬೆಂಗಳೂರಿನ ಆರ್.ಆರ್. ನಗರದಲ್ಲಿ ನಡೆದಿದ್ದು, ಈ ಘಟನೆ ಬಗ್ಗೆ ತಿಳಿಸುತ್ತೇವೆ ನೋಡಿ..
ದೀಪಾ ಎನ್ನುವ 31 ವರ್ಷದ ಮಹಿಳೆಯೊಬ್ಬರು, ತಮ್ಮ ಮುದ್ದಾದ 3 ವರ್ಷದ ಮಗುವನ್ನು ಕೊಂದು, ತಾವು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ಇತ್ತೀಚೆಗೆ ನಡೆದಿದೆ. ದೀಪಾ 2017ರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಆದರ್ಶ್ ಅವರ ಜೊತೆಗೆ ಮದುವೆಯಾಗಿದ್ದರು. ಈ ಕುಟುಂಬ ಆರ್.ಆರ್. ನಗರದ ಅಪಾರ್ಟ್ಮೆಂಟ್ ಒಂದರಲ್ಲಿ ವಾಸ ಮಾಡುತ್ತಿತ್ತು ಈ ದಂಪತಿಗೆ ಮೂರು ವರ್ಷ ಮುದ್ದಾದ ಹೆಣ್ಣು ಮಗು ಇತ್ತು, ಇದೀಗ ಅಮ್ಮ ಮಗು ಇಬ್ಬರು ಸಹ ಪ್ರಾಣ ಕಳೆದುಕೊಂಡಿದ್ದಾರೆ. ಮಗುವಿನ ಕತ್ತನ್ನು ಈಗ ವೇಲ್ ಇಂದ ಗಟ್ಟಿಯಾಗಿ ಕಟ್ಟಿ, ಮಗುವನ್ನು ಪ್ರಾಣ ಕಳೆದುಕೊಳ್ಳುವ ಹಾಗೆ ಮಾಡಿದ್ದಾಳೆ. ಬಳಿಕ ತಾನು ಸಹ ಫ್ಯಾನ್ ಗೆ ನೇಣು ಹಾಕಿಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ.
ಕೆಲವು ದಿನಗಳ ಹಿಂದೆ ದೀಪಾ ಅವರಿಗೆ ಜ್ವರ ಬಂದಿತ್ತು, ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ಹೋಗಿ ತೋರಿಸಿದ್ದರು, ಆದರೆ ಜ್ವರ ಕಡಿಮೆ ಆಗಿರಲಿಲ್ಲ. ಇದರಿಂದಾಗಿ ಮನನೊಂದ ದೀಪಾ, ಮಗುವನ್ನು ಕೊಂದು ತಾನು ಸಹ ಪ್ರಾಣ ಕಳೆದುಕೊಂಡಿದ್ದಾಳೆ. ಈ ರೀತಿ ಮಾಡಿಕೊಳ್ಳುವ ಮೊದಲು, ದೀಪಾ ಡೆತ್ ನೋಟ್ ಬರೆದಿದ್ದು, “Nobody is responsible for it i just felt life is full of shits i am sorry mom and divya Love you shona.” ಎಂದು ಬರೆದು, ಪ್ರಾಣ ಕಳೆದುಕೊಂಡಿದ್ದಾರೆ ದೀಪಾ. ಘಟನೆ ಹೊರಬಂದ ಬಳಿಕ, ಆರ್.ಆರ್ ನಗರದ ಪೊಲೀಸರು, ಸ್ಥಳಕ್ಕೆ ಬಂದು, ಪರಿಶೀಲನೆ ನಡೆಸಿದ್ದಾರೆ.
Comments are closed.