Neer Dose Karnataka
Take a fresh look at your lifestyle.

ನಿಮ್ಮ ಊರಿನಲ್ಲಿಯೇ ಸರ್ಕಾರದಿಂದ 5 ಲಕ್ಷ ಪಡೆದು ಜನೌಷಧಿ ಕೇಂದ್ರ ಉದ್ಯಮ ಆರಂಭ ಮಾಡುವುದು ಹೇಗೆ ಗೊತ್ತೇ?

ನೀವು ಬ್ಯುಸಿನೆಸ್ ಮಾಡಲು ಬಯಸುವುದಾದರೆ ಇಂದು ನಿಮಗೆ ಒಂದು ವಿಷಯ ತಿಳಿಸುತ್ತೇವೆ. ಕೇಂದ್ರ ಸರ್ಕಾರ ಈಗ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರವನ್ನು ಸ್ಥಾಪಿಸುತ್ತಿರುವ ಮಾಹಿತಿ ತಿಳಿದಿದೆ. ಇವುಗಳ ಮೂಲಕ ವಸತಿ ಇಲ್ಲದ ಬಡವರಿಗೆ, ಕಡಿಮೆ ವೆಚ್ಚದಲ್ಲಿ ಔಷಧಿಗಳನ್ನು ನೀಡಲಾಗುತ್ತದೆ. ಮೇ 31, 2022ರ ಪ್ರಕಾರ ದೇಶದಲ್ಲಿ ಈಗ 8,735 ಜನೌಷಧಿ ಕೇಂದ್ರಗಳಿವೆ. 2024ರ ವರೆಗೂ ಇದು 10,000 ಕೇಂದ್ರಗಳಾಗಬೇಕು ಎಂದು ಕೇಂದ್ರ ಸರ್ಕಾರ ಯೋಜನೆ ಹಾಕಿಕೊಂಡಿದೆ. 2,739 ಜಿಲ್ಲೆಗಳಲ್ಲಿ, ಜೆನೆರಿಕ್ ಮೆಡಿಸನ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳ ಸ್ಥಾಪನೆ ಶುರುವಾಗಿದ್ದು, 2014-15 ರಲ್ಲಿ.

ಆ ವರ್ಷದಲ್ಲಿ ಸುಮಾರು 8 ಕೋಟಿ ರೂಪಾಯಿ ವಹಿವಾಟು ನಡೆದಿತ್ತು. ಆದರೆ 2022ರ ಸಮಯಕ್ಕೆ ಇದರ ವಹಿವಾಟು ಸುಮಾರು 100 ಕೋಟಿ ತಲುಪಲಿದೆ. 2021ರ ಮೇ ತಿಂಗಳ 83.77 ಕೋಟಿ ವಹಿವಾಟು ನಡೆದಿದೆ. ಈ ಯೋಜನೆಯಿಂದ ಸಾರ್ವಜನಿಕರಿಗೆ 600 ಕೋಟಿ ಹಣ ಉಳಿತಾಯ ಆಗಿದೆ ಎಂದು ಸರ್ಕಾರ ತಿಳಿಸಿದೆ. ಕೇಂದ್ರ ಸರ್ಕಾರದ ಈ ಯೋಜನೆಯ ಅಡಿಯಲ್ಲಿ ಜನರಿಗೆ ಜೆನೆರಿಕ್ ಔಷಧಿಗಳು ಕಡಿಮೆ ಬೆಲೆಗೆ ಸಿಗುತ್ತದೆ. ಶೇ.50 ರಿಂದ ಶೇ.90ರಷ್ಟು ಕಡಿಮೆ ಬೆಲೆಗೆ ಸಿಗುತ್ತದೆ. ಬ್ಯೂರೋ ಆಫ್ ಫಾರ್ಮಸಿಟಿಕಲ್ಸ್ ಅಂಡ್ ಮೆಡಿಕಲ್ ಡಿವೈಸಸ್ ನ ಆಶೀರ್ವಾದದಲ್ಲಿ 1600ಕ್ಕಿಂತ ಹೆಚ್ಚು ಔಷಧಿಗಳು, 250ಕ್ಕಿಂತ ಹೆಚ್ಚು ಶಸ್ತ್ರಚಿಕಿತ್ಸೆಯ ಸಾಧನಗಳು, ನ್ಯೂಟ್ರಾಸಿಟಿಕಲ್ಸ್, ಆಯುಶ್ ಉತ್ಪನ್ನಗಳು ಹಾಗೂ ಸ್ಯಾನಿಟರಿ ಪ್ಯಾಡ್ ಗಳನ್ನು ಸಹ ಮಾರಾಟ ಮಾಡುತ್ತಾರೆ. ಇಲ್ಲಿ ಎಲ್ಲವೂ ಅತಿ ಕಡಿಮೆ ಬೆಲೆಗೆ ಸಿಗುತ್ತದೆ. ಇದೀಗ ಕೇಂದ್ರ ಸರ್ಕಾರವು, 406 ಜಿಲ್ಲೆಗಳಲ್ಲಿ 3,579 ಬ್ಲಾಕ್ ಗಳಲ್ಲಿ ಜೆನೆರಿಕ್ ಔಷಧಿ ಕೇಂದ್ರಗಳ ಸ್ಥಾಪನೆಗೆ ಅರ್ಜಿಗಳನ್ನು ಸ್ವೀಕರಿಸುತ್ತಿದೆ.

ಇದಕ್ಕಾಗಿ ಕೇಂದ್ರ ಸರ್ಕಾರ ₹2,50,000 ದಿಂದ ₹5,00,000 ರೂಪಾಯಿಯ ವರೆಗೆ ಸಹಾಯ ನೀಡುತ್ತದೆ. ಇದಕ್ಕೆ ಬೇಕಾಗಿರುವ ಎಲ್ಲಾ ವಸ್ತುಗಳನ್ನು ಕೊಂಡುಕೊಳ್ಳಲು, ಒಂದು ಸಾರಿಗೆ 2 ಲಕ್ಷ ರೂಪಾಯಿ ಹಣ ಬೇಕಾಗುತ್ತದೆ. ಜನೌಷಧಿ ಕೇಂದ್ರ ಶುರುಮಾಡಲು, ಬಿ.ಫಾರ್ಮಸಿ, ಡಿ.ಫಾರ್ಮಸಿ, ಪದವಿ ಪಡೆದಿರುವವರಿಗೆ ಕೆಲಸ ಕೊಡಬೇಕು. ಇದಕ್ಕೆ ಸ್ಥಳವು, ಕನಿಷ್ಟ 120 ಅಡಿ ಚದರ ಇರಬೇಕು. ಮರುಪಾವತಿ ಬರದೆ ಇರುವ, 5000 ರೂಪಾಯಿಯ ಅರ್ಜಿ ಸಲ್ಲಿಸಬೇಕು. ಜನೌಷಧಿ ಕೇಂದ್ರ ಶುರು ಮಾಡುವ ಆಸಕ್ತಿ ನಿಮಗೆ ಇದ್ದರೆ ಮೊದಲಿಗೆ, ಈ http://janaushadhi.gov.in/ ವೆಬ್ಸೈಟ್ ಗೆ ಭೇಟಿ ನೀಡಿ. Apply for Kendra ಮೇಲೆ ಕ್ಲಿಕ್ ಮಾಡಿ.ಅಲ್ಲಿರುವ ವಿವರಗಳನ್ನು ಓದಿ, ನಂತರ ಲಭ್ಯವಿರುವ ಸ್ಥಳವನ್ನು ಕ್ಲಿಕ್ ಮಾಡಿ, ನಂತರ ನಿಮ್ಮ ರಾಜ್ಯ ಮತ್ತು ಜಿಲ್ಲೆಯನ್ನು ಆಯ್ಕೆ ಮಾಡಿ. ಆ ಸ್ಥಳದಲ್ಲಿ ಜನೌಷದಿ ಕೇಂದ್ರ ಸ್ಥಾಪಿಸಬಹುದಾದರೆ, ಕ್ಲಿಕ್ ಮಾಡಿ. ನಂತರ ನೋಂದಣಿ ಮಾಡಿ, ಅಪ್ಲಿಕೇಶನ್ ಪೂರ್ತಿ ಮಾಡಿ

Comments are closed.