ಅಸಲಿಗೆ ಅಮೇರಿಕ ದೇಶದಲ್ಲಿ ನಾಲ್ಕು ರೆಕ್ಕೆ ಇರುವ ಫ್ಯಾನ್, ಭಾರತದಲ್ಲಿ ಮಾತ್ರ ಮೂರು ರೆಕ್ಕೆ ಯಾಕೆ ಗೊತ್ತೇ??
ಫ್ಯಾನ್ ಗೆ ಕೇವಲ ಮೂರು ರೆಕ್ಕೆಗಳಿವೆ ಎಂದು ಸಾಮಾನ್ಯವಾಗಿ ನಾವೆಲ್ಲರೂ ಅಂದುಕೊಂಡಿದ್ದೇವೆ. ಆದರೆ ಮೂರು ರೆಕ್ಕೆಗಳಿಗಿಂತ ಹೆಚ್ಚು ಅಥವಾ ಕಡಿಮೆ ಇದ್ದರೆ, ಅದುವಿಚಿತ್ರ ಸಂಗತಿ ಎಂದು ಹಲವರು ಭಾವಿಸಿದ್ದಾರೆ. ಫ್ಯಾನಿಗೆ ನಾಲ್ಕು ರೆಕ್ಕೆಗಳಿರುತ್ತವೆ ಎಂಬುದು ಅಮೆರಿಕಾಗೆ ಹೋದವರಿಗೆ ಮಾತ್ರ ಗೊತ್ತಿರುವ ಸತ್ಯ ಎಂದರೆ ತಪ್ಪಲ್ಲ. ಅಂದರೆ ನಮ್ಮ ಭಾರತದ ಫ್ಯಾನ್ ಗೆ ಮೂರು ರೆಕ್ಕೆಗಳಿದ್ದರೆ, ಅಮೆರಿಕಾದಲ್ಲಿ ಅದಕ್ಕೆ ನಾಲ್ಕು ರೆಕ್ಕೆಗಳಿವೆ. ಆದರೆ ಇಂದಿನ ದಿನಗಳಲ್ಲಿ ನಾಲ್ಕು ರೆಕ್ಕೆಯ ಫ್ಯಾನ್ ಗಳು ನಮ್ಮ ದೇಶದಲ್ಲೂ ದರ್ಶನ ನೀಡುತ್ತಿವೆ. ಆದರೆ ಅವು ಇಲ್ಲಿ ಬಹಳ ಅಪರೂಪ.
ಆದರೆ ಅಮೆರಿಕಾದಲ್ಲಿರುವ ಫ್ಯಾನ್ ಗಳಿಗೆ ನಾಲ್ಕು ರೆಕ್ಕೆಗಳು ಮತ್ತು ಭಾರತದಲ್ಲಿ ಮೂರು ರೆಕ್ಕೆಗಳು ಇರುವುದರ ಹಿಂದಿನ ಕಾರಣ ಅನೇಕರಿಗೆ ತಿಳಿದಿಲ್ಲ.. ಆ ರೀತಿ ಇರುವುದಕ್ಕೆ ಕಾರಣ ಏನು ಎಂದು ಈಗ ತಿಳಿಯೋಣ.. ಅಮೆರಿಕದಲ್ಲಿ ಸಾಮಾನ್ಯವಾಗಿ ಚಳಿ ಇರುತ್ತದೆ. ಹಾಗಾಗಿ ಅಲ್ಲಿ ನಾಲ್ಕು ವಿಂಗ್ ಫ್ಯಾನ್ ಗಳನ್ನು ಬಳಸಲಾಗುತ್ತದೆ. ನಾಲ್ಕು ರೆಕ್ಕೆಗಳಿಗೂ ಚಳಿಗೂ ಏನು ಸಂಬಂಧ ಎಂಬ ಅನುಮಾನ ನಿಮ್ಮಲ್ಲಿ ಬರಬಹುದು. ಅದಕ್ಕೂ ಒಂದು ಮುಖ್ಯವಾದ ಕಾರಣವಿದೆ..
ನಾಲ್ಕು ಬ್ಲೇಡ್ ಫ್ಯಾನ್ ಗಳಿಂದ ಬರುವ ಗಾಳಿ ಕಡಿಮೆ ಇಯುತ್ತದೆ. ಜೊತೆಗೆ ಅದರ ಗಾಳಿಯ ಸ್ವಲ್ಪ ಬಿಸಿಯಾಗಿರುತ್ತದೆ. ಅದಕ್ಕಾಗಿಯೇ ಅಮೆರಿಕಾದಲ್ಲಿ ನಾಲ್ಕು ವಿಂಗ್ ಫ್ಯಾನ್‌ಗಳನ್ನು ಬಳಸುತ್ತಾರೆ. ಭಾರತದಲ್ಲಿ ಚಳಿಯ ತೀವ್ರತೆ ಹೆಚ್ಚಿಲ್ಲ. ನಮ್ಮದು ಸಮಶೀತೋಷ್ಣ ವಲಯವಾಗಿದ್ದು ಅಲ್ಲಿ ಬಹುತೇಕ ಎಲ್ಲವೂ ಸಮಾನವಾಗಿರುತ್ತದೆ. ಆದ್ದರಿಂದ ನಾವು ನಮ್ಮ ದೇಶದಲ್ಲಿ ಮೂರು ವಿಂಗ್ ಫ್ಯಾನ್‌ಗಳನ್ನು ಬಳಸುತ್ತೇವೆ.
Comments are closed.