ಮತ್ತೊಂದು ಹೆಜ್ಜೆ: ನರೇಶ್ ಹಾಗೂ ಪವಿತ್ರ ರವರು ನಿನ್ನೆ ಮತ್ತೊಂದು ದೂರು ದಾಖಲಿಸಿದ್ದು ಯಾರ ವಿರುದ್ಧ ಗೊತ್ತೇ?
ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಅವರ ಮದುವೆಯ ವಿಚಾರ ದಿನದಿಂದ ದಿನಕ್ಕೆ ಬೇರೆಯದೇ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇವರ ವಿಚಾರದಲ್ಲಿ ನಿನ್ನೆ ಮೈಸೂರಿನಲ್ಲಿ ದೊಡ್ಡ ಹೈ ಡ್ರಾಮಾ ನಡೆದಿದೆ. ಜುಲೈ 2ರಂದು ನಟಿ ಪವಿತ್ರಾ ಲೋಕೇಶ್ ಹಾಗೂ ನಟ ನರೇಶ್ ಅವರು ಮೈಸೂರಿನ ಹೋಟೆಲ್ ಒಂದರಲ್ಲಿ ಒಂದು ರಾತ್ರಿ ಪೂರ್ತಿ ಜೊತೆಯಾಗಿ ಉಳಿದುಕೊಂಡಿದ್ದಾರೆ..ಇವರಿಬ್ಬರು ಒಟ್ಟಿಗೆ ಇದ್ದಾರೆ ಎನ್ನುವ ವಿಷಯ ಗೊತ್ತಾಗಿ, ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಅಂದು ಮಧ್ಯರಾತ್ರಿ ಹೋಟೆಲ್ ಗೆ ಬಂದು, ತಾವು ಒಂದು ರೂಮ್ ಪಡೆದು ಉಳಿದುಕೊಂಡಿದ್ದರು.
ಬೆಳಗ್ಗಿನ ವರೆಗೂ ಅಲ್ಲಿಯೇ ಕಾದಿದ್ದು, ಬೆಳಗಾದ ಬಳಿಕ, ಅವರಿಬ್ಬರು ಇದ್ದ ರೂಮ್ ಬಾಗಿಲು ತಟ್ಟಿ, ಇಬ್ಬರು ಹೊರಬರುವಾಗ ಚಪ್ಪಲಿಯಲ್ಲಿ ಹೊಡೆಯಲು ಹೋಗಿದ್ದಾರೆ. ಹೋಟೆಲ್ ನಲ್ಲಿ ದೊಡ್ಡ ಹೈ ಡ್ರಾಮಾ ನಡೆದಿದ್ದು, ಇದರ ಬಗ್ಗೆ ವರದಿಯಾಗಿದೆ. ಜೊತೆಗೆ ನಿನ್ನೆ ಪವಿತ್ರಾ ಲೋಕೇಶ್ ಹಾಗೂ ನಟ ನರೇಶ್ ಅವರು ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪವಿತ್ರಾ ಲೋಕೇಶ್ ಅವರು ಯಾರ ವಿರುದ್ಧ ದೂರು ನೀಡಿದ್ದಾರೆ ಎನ್ನುವ ಬಗ್ಗೆ ಅವರು ಮಾಹಿತಿ ನೀಡಿರಲಿಲ್ಲ. ಆದರೆ ಪೊಲೀಸರ ಮೂಲಕ ಇದರ ಬಗ್ಗೆ ಮಾಹಿತಿ ಸಿಕ್ಕಿದೆ. ಪೊಲೀಸರು ಹೇಳಿರುವ ಪ್ರಕಾರ, ಪವಿತ್ರಾ ಲೋಕೇಶ್ ಅವರು ತಮ್ಮನ್ನು ಹಿಂಬಾಲಿಸುತ್ತಿದ್ದವರ ವಿರುದ್ಧ ದೂರು ನೀಡಿದ್ದಾರಂತೆ.
ಕೆಲವರು ಪವಿತ್ರಾ ಲೋಕೇಶ್ ಅವರ ಪ್ರತಿ ಹೆಜ್ಜೆಯನ್ನು ಗಮನಿಸಿ, ಅವರ ಹಿಂದೆ ಬರುತ್ತಿದ್ದಾರಂತೆ. ಅದರಿಂದ ಅವರಿಗೆ ಮಾನಸಿಕವಾಗಿ ಆಘಾತವಾಗಿದೆ, ಅದರಿಂದ ಸುರಕ್ಷತೆ ಕೋರಿ ಪೊಲೀಸರ ಬಳಿ ದೂರು ನೀಡಿದ್ದಾರಂತೆ, ಮಾಧ್ಯಮದವರು ಸಹ ಸುಖಾಸುಮ್ಮನೆ ಪವಿತ್ರಾ ಲೋಕೇಶ್ ಅವರನ್ನು ಹಿಂಬಾಲಿಸುತ್ತಿದ್ದಾರಂತೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಪವಿತ್ರಾ ಲೋಕೇಶ್ ಅವರ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು, ಅದರ ಮೂಲಕ ಮಾನಹಾನಿ ಆಗುವಂತಹ ಪೋಸ್ಟ್ ಗಳನ್ನು ಹಾಕಲಾಗುತ್ತಿದ್ದು, ಅವರೆಲ್ಲರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಪವಿತ್ರಾ ಲೋಕೇಶ್ ಅವರು ದೂರು ದಾಖಲು ಮಾಡಿದ್ದಾರೆ. ಪೊಲೀಸರು ಸಹ ಈ ವಿಚಾರದ ಬಗ್ಗೆ ಈಗಾಗಲೇ ತನಿಖೆ ಶುರು ಮಾಡಿದ್ದಾರಂತೆ.
Comments are closed.