Neer Dose Karnataka
Take a fresh look at your lifestyle.

ದರ್ಶನ್ ಸಿನೆಮಾಗೆ ಆಯ್ಕೆಯಾಗಿರುವ ನಟಿ ಮಾಲಾಶ್ರೀ ಮಗಳ ವಯಸ್ಸು ಎಷ್ಟು ಗೊತ್ತೇ?? ಎಷ್ಟು ಚಿಕ್ಕ ವಯಸ್ಸಿಗೆ ನಟಿ ಗೊತ್ತೇ??

ಕನಸಿನ ರಾಣಿ ಮಾಲಾಶ್ರೀ ಮತ್ತು ನಿರ್ಮಾಪಕ ಕೋಟಿ ರಾಮು ಅವರ ಮಗಳು ರಾಧನ ಈಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಾಲಾಶ್ರೀ ಅವರು ನಾಯಕಿಯಾಗಿ ಸ್ಯಾಂಡಲ್ ವುಡ್ ನಲ್ಲಿ ಟಾಪ್ ನಟಿಯಾಗಿ ಮಿಂಚಿದವರು. ಇದೀಗ ಅವರ ಮಗಳು ಇದೇ ಇಂಡಸ್ಟ್ರಿಗೆ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಮೊದಲ ಸಿನಿಮಾದಲ್ಲೇ ದರ್ಶನ್ ಅವರಿಗೆ ನಾಯಕಿಯಾಗಿ, ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಹಾಗೆಯೇ ರಾಕ್ ಲೈನ್ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ಲಾಂಚ್ ಆಗುತ್ತಿದ್ದಾರೆ ರಾಧನ. ಇವರ ಬಗ್ಗೆ ಈಗ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ.

ನಟಿ ಮಾಲಾಶ್ರೀ ಅವರು ಬಾಲನಟಿಯಾಗಿ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದರು ಸಹ, ನಾಯಕಿಯಾಗಿ ಮೊದಲ ಬಾರಿಗೆ ನಟಿಸಿದ್ದು, ಕನ್ನಡದ ನಂಜುಂಡಿ ಕಲ್ಯಾಣ ಸಿನಿಮಾ ಮೂಲಕ, ಆಗ ಮಾಲಾಶ್ರೀ ಅವರಿಗೆ 15 ವರ್ಷವಾಗಿತ್ತು. ಈಗ ಅವರ ಮಗಳಿಗೆ ಎಷ್ಟು ವರ್ಷ ಇರಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ. ರಾಧನ ಅವರು 13 ವರ್ಷ ಇದ್ದಾಗಲೇ ನಟಿಯಾಗಬೇಕು ಎಂದು ಹೇಳಿದ್ದರಂತೆ. ಕಳೆದ ಎರಡು ವರ್ಷಗಳಿಂದ ನಟನೆಯ ತರಬೇತಿ ಸಹ ಪಡೆದಿದ್ದಾರೆ. ಅನನ್ಯ ಎಂದು ಇವರ ಹೆಸರು, ಆದರೆ ರಾಮು ಅವರೇ ರಾಧನ ಎಂದು ಹೆಸರಿಟ್ಟು, ಚಿತ್ರರಂಗಕ್ಕೆ ಪರಿಚಯ ಆಗುವಾಗ, ಹೆಸರು ಬದಲಾಯಿಸಬೇಕು ಎಂದುಕೊಂಡಿದ್ದರಂತೆ. ಅದೇ ರೀತಿ ಈಗ ರಾಧನ ಎಂದು ಬದಲಾಯಿಸಿ, ಪರಿಚಯ ಮಾಡಲಾಗುತ್ತಿದೆ..

ಮಗಳ ಬಗ್ಗೆ ಮಾತನಾಡಿರುವ ಮಾಲಾಶ್ರೀ ಅವರು, “ಇವತ್ತು ನಾನು ಇಲ್ಲಿ ಇರೋದಕ್ಕೆ ಕಾರಣ, ಪಾರ್ವತಮ್ಮ ರಾಜ್ ಕುಮಾರ್ ಅವರು ಮತ್ತು ಜನರ ಪ್ರೀತಿ. ನನಗೆ ಜೀವನ ಕೊಟ್ಟ ಚಿತ್ರರಂಗಕ್ಕೆ ಇಂದು ನನ್ನ ಮಗಳು ಬರುತ್ತಿದ್ದಾಳೆ, ನನಗೆ ಕೊಟ್ಟಿದ್ದಕ್ಕಿಂತ ಹೆಚ್ಚಿನ ಪ್ರೀತಿಯನ್ನು ಜನರು ಅವಳಿಗೆ ಕೊಡಬೇಕು ಎಂದು ಸ್ವಾರ್ಥದಿಂದ ಕೇಳಿಕೊಳ್ಳುತ್ತೇನೆ. ರಾಕ್ ಲೈನ್ ಸಂಸ್ಥೆ ನನ್ನ ಜೊತೆ ಸಿನಿಮಾ ಮಾಡಿದ್ದರು, ಈಗ ಅದೇ ಸಂಸ್ಥೆಯಿಂದ ನನ್ನ ಮಗಳು ಲಾಂಚ್ ಆಗುತ್ತಿರುವುದು, ಅದು ದರ್ಶನ್ ಅವರ ಜೊತೆ ಎನ್ನುವುದು ತುಂಬಾ ಸಂತೋಷದ ವಿಷಯ..” ಎಂದಿದ್ದಾರೆ ನಟಿ ಮಾಲಾಶ್ರೀ.. ರಾಧನ ಅವರು ಸಹ ಮೊದಲ ಸಿನಿಮಾ ಬಗ್ಗೆ ಬಹಳ ಎಕ್ಸೈಟ್ ಆಗಿ ಮಾತನಾಡಿದ್ದಾರೆ..

“ನಾನು ದರ್ಶನ್ ಅವರ ಜೊತೆಗೆ ಸಿನಿಮಾ ಮಾಡ್ತಾ ಇದ್ದೀನಿ ಅನ್ನೋದನ್ನ ಇನ್ನು ಅರಗಿಸಿಕೊಳ್ಳೋದಕ್ಕೆ ಆಗ್ತಾ ಇಲ್ಲ. ಈ ಅವಕಾಶ ಸಿಕ್ಕಿದ್ದು ಅನಿರೀಕ್ಷಿತವಾಗಿ. ಚಿಕ್ಕವಳಾಗಿದ್ದಾಗ ನನಗೆ ನಾಚಿಕೆ ಸ್ವಭಾವ ಇತ್ತು. ಈಗ ತರಬೇತಿ ಪಡೆದು, ಪ್ರಿಪೇರ್ ಆಗಿ ಬಂದಿದ್ದೇನೆ..” ಎನ್ನುತ್ತಾರೆ ರಾಧನ ರಾಮ್. ಮಾಲಾಶ್ರೀ ಅವರು ಚಿತ್ರರಂಗಕ್ಕೆ ಬಂದಾಗ ಅವರಿಗೆ 15 ವರ್ಷ ವಯಸ್ಸು. ಇದೀಗ ಅವರ ಮಗಳಿಗೆ 21 ವರ್ಷ ವಯಸ್ಸು. ತಾಯಿಯ ಹಾಗೆ ಮಗಳು ಸಹ ಎತ್ತರಕ್ಕೆ ಬೆಳೆಯಲಿ ಎನ್ನುವುದು ಎಲ್ಲರ ಆಸೆ ಆಗಿದೆ.

Comments are closed.