Neer Dose Karnataka
Take a fresh look at your lifestyle.

ಬಿಗ್ ಬ್ರೇಕಿಂಗ್: ತೆರೆ ಮೇಲೆ ಬರುತ್ತಿದೆಯೇ ವಿರಾಟ್ ಜೀವನ ಚರಿತ್ರೆ: ಕೇಳಿ ಬಂತು ಸ್ಟಾರ್ ನಟನ ಹೆಸರು: ಈತ ಮಾತ್ರ ಬೇಡವೇ ಬೇಡ ಎಂದ ನೆಟ್ಟಿಗರು.

ವಿರಾಟ್ ಕೋಹ್ಲಿ ಅವರು ಕ್ರಿಕೆಟ್ ಲೋಕದ ಕಿಂಗ್ ಎಂದೇ ಖ್ಯಾತಿ ಪಡೆದಿರುವವರು. ವೃತ್ತಿ ಆರಂಭದ ದಿನಗಳಲ್ಲಿ ಬಹಳ ಕಷ್ಟಪಟ್ಟ ಕೋಹ್ಲಿ ಅವರು ಇಂದು ಸಕ್ಸಸ್ ಎಂಜಾಯ್ ಮಾಡುತ್ತಿದ್ದಾರೆ. ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ಗಳ ಪಟ್ಟಿಯಲ್ಲಿ ಇವರ ಹೆಸರು ಸಹ ಇದೆ. ಇವರ ಹೆಸರಿನಲ್ಲಿ ಇರುವ ದಾಖಲೆಗಳು ಒಂದೆರಡಲ್ಲ. ಈವರೆಗೂ ಕೋಹ್ಲಿ ಅವರು 100 ಟಿ ಟಿ20 ಪಂದ್ಯಗಳನ್ನು ಆಡಿದ್ದಾರೆ, ಈವರೆಗೂ ಯಾವ ಕ್ರಿಕೆಟರ್ ಸಹ ಇಷ್ಟು ಪಂದ್ಯಗಳನ್ನು ಆಡಿಲ್ಲ. ಇನ್ನು ಕೋಹ್ಲಿ ಅವರು ರನ್ ಗಳ ವಿಚಾರದಲ್ಲಿ ಸಹ ದಾಖಲೆ ಬರೆದಿದ್ದಾರೆ.

ನಮ್ಮ ಆರ್.ಸಿ.ಬಿ ತಂಡದ ಖಾಯಂ ಬ್ಯಾಟ್ಸ್ಮನ್ ಆಗಿ ಉಳಿದುಕೊಂಡಿದ್ದಾರೆ. ವಿಶ್ವಾದ್ಯಂತ ಕೋಹ್ಲಿ ಅವರು ಕೋಟ್ಯಾಂತರ ಅಭಿಮಾನಿ ಬಳಗ ಇದೆ. ಆದರೆ ಕಳೆದ ಎರಡು ವರ್ಷಗಳಿಂದ ಕೋಹ್ಲಿ ಅವರು ಕಳಪೆ ಫಾರ್ಮ್ ಇಂದ ಬಳಲುತ್ತಿದ್ದಾರೆ. ಇದೀಗ ಏಷ್ಯಾಕಪ್ 2022 ಪಂದ್ಯಗಳ ಮೂಲಕ ವಿರಾಟ್ ಕೋಹ್ಲಿ ಅವರು ಕಂಬ್ಯಾಕ್ ಮಾಡಿದ್ದಾರೆ. ಇದೀಗ ಕೋಹ್ಲಿ ಅವರ ಬಯೋಪಿಕ್ ಬಗ್ಗೆ ದೊಡ್ಡದಾಗಿ ಚರ್ಚೆ ಆಗುತ್ತಿದೆ. ಈ ಹಿಂದೆ ಕಪಿಲ್ ದೇವ್, ಮಹೇಂದ್ರ ಸಿಂಗ್ ಧೋನಿ ಅವರ ಬಯೋಪಿಕ್ ಗಳು ತೆರೆಕಂಡು, ಯಶಸ್ವಿಯಾಗಿದೆ. ಇದೀಗ ವಿರಾಟ್ ಕೋಹ್ಲಿ ಅವರ ಬಯೋಪಿಕ್ ಬಗ್ಗೆ ಚರ್ಚೆ ಶುರುವಾಗಿದೆ. ವಿರಾಟ್ ಕೋಹ್ಲಿ ಅವರ ಬಯೋಪಿಕ್ ನಡೆದರೆ ನಟಿಸುವ ನಟ ಯಾರು ಎನ್ನುವ ಪ್ರಶ್ನೆ ಸಹ ಶುರುವಾಗಿದೆ.

ಇದೀಗ ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ಅವರು ವಿರಾಟ್ ಕೋಹ್ಲಿ ಅವರ ಬಯೋಪುಕ್ ನಲ್ಲಿ ನಟಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ದುಬೈ ನಲ್ಲಿ ನಡೆದ ಇಂಡಿಯಾ ವರ್ಸಸ್ ಪಾಕಿಸ್ತಾನ್ ಮ್ಯಾಚ್ ನೋಡಲು ವಿಜಯ್ ದೇವರಕೊಂಡ ಅವರು ಮೈದಾನಕ್ಕೆ ಬಂದಿದ್ದರು. ಆತ ಸಂದರ್ಶನದಲ್ಲಿ ಮಾತನಾಡಿದ ವಿಜಯ್ ದೇವರಕೊಂಡ ಅವರಿಗೆ ಒಂದು ಪ್ರಶ್ನೆ ಕೇಳಲಾಯಿತು, ಭಾರತದ ಯಾವ ಕ್ರಿಕೆಟಿಗನ ಬಯೋಪಿಕ್ ನಲ್ಲಿ ನಟಿಸುತ್ತೀರಾ ಎಂದು ಕೇಳಿದ್ದಕ್ಕೆ, ಧೋನಿ ಭಾಯ್ ಬಯೋಪಿಕ್ ನಲ್ಲಿ ಸುಶಾಂತ್ ಸಿಂಗ್ ರಜಪೂತ್ ನಟಿಸಿದ್ದಾರೆ ನಾನು ವಿರಾಟ್ ಅವರ ಬಯೋಪಿಕ್ ಮಾಡಬೇಕು ಎಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ, ಆದರೆ ನೆಟ್ಟಿಗರು ಮಾತ್ರ ವಿಜಯ್ ದೇವರಕೊಂಡ ಈ ಬಯೋಪಿಕ್ ನಲ್ಲಿ ನಟಿಸುವುದು ಬೇಡ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

Comments are closed.