Neer Dose Karnataka
Take a fresh look at your lifestyle.

ನಿಮಗೆ ವಿದ್ಯೆ ಹಾಗೂ ಹಣ ಇಲ್ಲ ಎಂದರೂ ಕೂಡ ಬಂಡವಾಳ ಇಲ್ಲದೆ ತಿಂಗಳಿಗೆ 50 ಸಾವಿರ ಗಳಿಸುವ ಈ ಬಿಸಿನೆಸ್ ಆರಂಭಿಸಿ. ಸ್ವಂತ ಉದ್ಯಮ ಬೆಳೆಸಿ.

ಬ್ಯುಸಿನೆಸ್ ಮಾಡಿ ಹೆಚ್ಚಿನ ಹಣ ಗಳಿಸಬೇಕು ಎಂದು ಎಲ್ಲರಿಗೂ ಆಸೆ ಇರುತ್ತದೆ. ಆದರೆ ಓದಿದವರು ಮಾತ್ರ ಬ್ಯುಸಿನೆಸ್ ಮಾಡಬಹುದು, ಓದದೇ ಇರುವವರಿಗೆ ಇದೆಲ್ಲಾ ಕಷ್ಟ ಎಂದೇ ಎಲ್ಲರೂ ಅಂದುಕೊಂಡಿರುತ್ತಾರೆ. ಆದರೆ ವಿದ್ಯಾರ್ಹತೆ ಇಲ್ಲದೆ, ನೀವು ಶುರು ಮಾಡಬಹುದಾದ ಒಂದು ಬ್ಯುಸಿನೆಸ್ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಈ ಬ್ಯುಸಿನೆಸ್ ಮೂಲಕ ನೀವು ತಿಂಗಳಿಗೆ 50 ರಿಂದ 60 ಸಾವಿರ ರೂಪಾಯಿ ಗಳಿಸಬಹುದು. ಇದಕ್ಕೆ ಹೂಡಿಕೆ ಸಹ ಕಡಿಮೆಯೇ. ಇಂದು ನಾವು ನಿಮಗೆ ತಿಳಿಸಲು ಹೊರಟಿರುವುದು ಲಾಂಡ್ರಿ ಬ್ಯುಸಿನೆಸ್ ಬಗ್ಗೆ. ಈಗೆಲ್ಲಾ ಬಟ್ಟೆಯ ಬ್ರ್ಯಾಂಡ್ ಗಳು ಹೆಚ್ಚಾಗುತ್ತಿದ್ದಂತೆ, ಲಾಂಡ್ರಿಗೂ ಬೇಡಿಕೆ ಇದೆ..

ಓದಿರುವವರು ಈ ಕೆಲಸ ಮಾಡಲು ಹಿಂಜರಿಯುತ್ತಾರೆ, ಆದರೆ ಓದದೇ ಇರುವವರಿಗೆ ಹಣ ಸಂಪಾದನೆ ಮಾಡಲು ಇದು ಒಳ್ಳೆಯ ಬ್ಯುಸಿನೆಸ್ ಆಗಿದೆ. ಇದನ್ನು ನೀವು ಸಣ್ಣದಾಗಿ ಅಂಗಡಿಯಲ್ಲಿ ಅಥವಾ ಮನೆಯಲ್ಲೇ ಶುರು ಮಾಡಬಹುದು. ಅಥವಾ ಈಗಾಗಲೇ ಫೇಮಸ್ ಆಗಿರುವ ಲಾಂಡ್ರಿ ಇಂದ ಫ್ರಾಂಚೈಸಿ ಪಡೆಯಬಹುದು. ಒಂದು ಶರ್ಟ್ ಅಥವಾ ಒಂದು ಪ್ಯಾಂಟ್ ಲಾಂಡ್ರಿ ಮಾಡಲಿ 40 ರೂಪಾಯಿ ಚಾರ್ಜ್ ಮಾಡಬಹುದು, ಐರನ್ ಸಹ ಮಾಡಬೇಕಾದರೆ, 50 ರೂಪಾಯಿ ಚಾರ್ಜ್ ಮಾಡಬಹುದು. ಒಂದು ದಿನಕ್ಕೆ 100 ರಿಂದ 120 ಬಟ್ಟೆಗಳನ್ನು ಲಾಂಡ್ರಿ ಮಾಡಿ ಐರನ್ ಮಾಡುತ್ತೀರಾ ಎನ್ನುವುದಾದರೆ ದಿನಕ್ಕೆ 5 ರಿಂದ 6 ಸಾವಿರ ರೂಪಾಯಿ.

ಇಲ್ಲಿಯ ಶೇ.60 ರಷ್ಟು ಅಂದರೆ 3000 ರೂಪಾಯಿ ಬಂಡವಾಳ ಎಂದುಕೊಂಡರೆ ದಿನಕ್ಕೆ 2000 ರೂಪಾಯಿ ನಿಮಗೆ ಲಾಭ ಸಿಗುತ್ತದೆ. ಇದರ ಜೊತೆಗೆ ಹೋಮ್ ಡೆಲಿವರಿ ಕೊಡುವುದರಿಂದ ಇನ್ನು ಹೆಚ್ಚಿನ ಹಣ ಗಳಿಸಬಹುದು. ನೀವು ಕೊಡುವ ಸರ್ವಿಸ್ ಚೆನ್ನಾಗಿದ್ದರೆ ನಿಮ್ಮನ್ನು ಗ್ರಾಹಕರು ಹುಡುಕಿಕೊಂಡು ಬರುತ್ತಾರೆ. ಈ ಬ್ಯುಸಿನೆಸ್ ನಲ್ಲಿ ಲಾಸ್ ಎನ್ನುವುದೇ ಇಲ್ಲ. ಒಳ್ಳೆಯ ಲಾಭ ಪಡೆಯಲು, ಪಿಜಿ, ಆಸ್ಪತ್ರೆ, ಅಥವಾ ಕಂಪನಿ ಇವುಗಳು ಹತ್ತಿರ ಇರುವ ಕಡೆಗಳಲ್ಲಿ ಲಾಂಡ್ರಿ ಶುರುಮಾಡಿ, ತಿಂಗಳಿಗೆ 50 ರಿಂದ 60 ಸಾವಿರ ರೂಪಾಯಿ ಆದಾಯ ಬರುವುದಂತೂ ಗ್ಯಾರಂಟಿ.

Comments are closed.