Neer Dose Karnataka
Take a fresh look at your lifestyle.

ಇದ್ದಕ್ಕಿದ್ದ ಹಾಗೆ ಕಠಿಣ ನಿರ್ಧಾರ ಮಾಡಿ ಶಾಕ್ ನೀಡಿದ ನಯನತಾರ: ಮದುವೆಯಾದ ಕೆಲವೇ ದಿನಗಳಲ್ಲಿ ಏನಾಗಿದೆ ಗೊತ್ತೇ??

65

ನಟಿ ನಯನತಾರ ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎಂದೇ ಹೆಸರು ಮಾಡಿದ್ದಾರೆ. ಇವರು ಚಿತ್ರರಂಗಕ್ಕೆ ಕಾಲಿಟ್ಟು, ಒಂದು ದಶಕಕ್ಕಿಂತ ಹೆಚ್ಚಿನ ಸಮಯ ಕಳೆದಿದೆ, ಆದರೆ ಈಗಲೂ ಇವರೇ ನಂಬರ್ 1, ಬೇರೆ ಎಲ್ಲಾ ನಟಿಯಾರಿಗಿಂತ ಹೆಚ್ಚಿನ ಸಂಭಾವನೆ ಪಡೆದುಕೊಳ್ಳುತ್ತಾರೆ ನಯನ್. ಇದೀಗ ನಯನತಾರ ಅವರು ವೃತ್ತಿಜೀವನದ ಬಗ್ಗೆ ನಿರ್ಧಾರ ಒಂದನ್ನು ತೆಗೆದುಕೊಂಡಿದ್ದು, ಅದನ್ನು ಕೇಳಿ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ..

ಇತ್ತೀಚೆಗೆ ನಯನತಾರ ಅವರು ನಿರ್ದೇಶಕ ವಿಘ್ನೇಶ್ ಶಿವನ್ ಅವರೊಡನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಬಳಿಕ ಪತಿ ಜೊತೆಗೆ ನಯನತಾರ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಜೊತೆಗೆ ಶಾರುಖ್ ಖಾನ್ ಅವರ ಜವಾನ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರೊಡನೆ ಇನ್ನು ಒಂದೆರಡು ಸಿನಿಮಾಗಳನ್ನು ನಯನತಾರ ಅವರು ಒಪ್ಪಿಕೊಂಡಿದ್ದಾರಂತೆ. ಮದುವೆ ಬಳಿಕ ನಯನತಾರ ಅವರು ಸಂಭಾವನೆಯನ್ನು ಸಹ ಹೆಚ್ಚಿಸಿಕೊಂಡರು.

ಆದರೆ ಈಗ ಅವರ ವೃತ್ತಿಜೀವನದ ಬಗ್ಗೆ ಶಾಕಿಂಗ್ ವಿಚಾರ ಒಂದು ಕೇಳಿ ಬರುತ್ತಿದೆ. ಅದೇನೆಂದರೆ, ಈಗ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿಕೊಟ್ಟ ಬಳಿಕ ನಯನತಾರ ಅವರು ಇನ್ನೆಂದು ಸಿನಿಮಾದಲ್ಲಿ ನಟಿಸುವುದಿಲ್ಲವಂತೆ, ಚಿತ್ರರಂಗಕ್ಕೆ ಗುಡ್ ನೈ ಹೇಳುತ್ತಾರಂತೆ. ಈ ರೀತಿಯ ಸುದ್ದಿಯೊಂದು ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದು, ಇದರಲ್ಲಿ ಎಷ್ಟು ಸತ್ಯ ಅಡಗಿದೆ ಎನ್ನುವುದು ಮಾತ್ರ ತಿಳಿದು ಬಂದಿಲ್ಲ. ನಯನತಾರ ಅವರೇ ಈ ವಿಚಾರದ ಬಗ್ಗೆ ಕ್ಲಾರಿಟಿ ಕೊಡಬೇಕಿದೆ.

Leave A Reply

Your email address will not be published.