Neer Dose Karnataka
Take a fresh look at your lifestyle.

ಕನ್ನಡ, ಹಿಂದಿ ಬಿಡಿ, ತೆಲುಗಿನಲ್ಲಿ ಶೇಕ್ ಮಾಡುತ್ತಿರುವ ಕಾಂತಾರ, ಮೂರು ದಿನದಲ್ಲಿ ಗಳಿಸಿದ್ದು ಎಷ್ಟು ಕೋಟಿ ಗೊತ್ತೆ?? ಟಿಕೆಟ್ ದರ ಕಡಿಮೆಯಾದರೂ ಎಷ್ಟು ಗೊತ್ತೇ??

ಕಾಂತಾರ ಸಿನಿಮಾ ಕನ್ನಡ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡುತ್ತಿದೆ. ರಿಷಬ್ ಶೆಟ್ಟಿ ಅವರ ಕಥೆ, ನಿರ್ದೇಶನ, ನಟನೆ ಎಲ್ಲವನ್ನು ಒಳಗೊಂಡಿರುವ ಕಾಂತಾರ ಸಿನಿಮಾವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿದೆ, ಕೆಜಿಎಫ್ ನಂತರ ಕಾಂತಾರ ಸಿನಿಮಾ ಇವರಿಗೆ ದೊಡ್ಡ ಸಕ್ಸಸ್ ತಂದುಕೊಟ್ಟಿದೆ. ಮೊದಲಿಗೆ ಕನ್ನಡದಲ್ಲಿ ಮಾತ್ರ ಬಿಡುಗಡೆಯಾದ ಕಾಂತಾರ ಸಿನಿಮಾ, ಬೇರೆ ರಾಜ್ಯಗಳಲ್ಲಿ ಸಹ ಉತ್ತಮ ಪ್ರತಿಕ್ರಿಯೆ ಪಡೆದಿತ್ತು.

ಬಿಡುಗಡೆಯಾಗಿ ಮೂರು ವಾರ ಕಳೆಯುತ್ತಿದ್ದರು, ಇಂದಿಗೂ ಥುಯೇಟರ್ ಗಳು ಹೌಸ್ ಫುಲ್ ಆಗುತ್ತಿವೆ. ಸಿನಿಮಾ ಅದ್ಭುತವಾಗಿ ಮೂಡಿಬಂದಿರುವ ಕಾರಣ, ಕಾಂತಾರ ಸಿನಿಮಾವನ್ನು ಸಿನಿಪ್ರಿಯರು ಭಾಷೆಯ ಹಂಗಿಲ್ಲದೆ ಥಿಯೇಟರ್ ಗೆ ಬಂದು ನೋಡಲು ಶುರು ಮಾಡಿದರು. ಬಳಿಕ ಕಾಂತಾರ ಸಿನಿಮಾಗೆ ಡಿಮ್ಯಾಂಡ್ ಹೆಚ್ಚಾದ ಕಾರಣ, ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಕಳೆದ ವಾರ ತೆರೆಕಂಡಿದ್ದು, ನಾಳೆ ಮಲಯಾಳಂ ನಲ್ಲಿ ತೆರೆಕಾಣತ್ತಿದೆ.

ಕಾಂತಾರ ಸಿನಿಮಾ ಬೇರೆ ಭಾಷೆಗಳಲ್ಲಿ ಸಹ ದಾಖಲೆಯ ಕಲೆಕ್ಷನ್ ಮಾಡುತ್ತಿದೆ. ಅದರಲ್ಲೂ ತೆಲುಗಿನಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಕಾರ್ನಾಟಕದಲ್ಲಿ ಕಾಂತಾರ ಸಿನಿಮಾದ ಮೊದಲ ದಿನದ ಕಲೆಕ್ಷನ್ ಗಿಂತ, ತೆಲುಗು ರಾಜ್ಯಗಳಲ್ಲಿ ತೆಲುಗು ವರ್ಷನ್ ಮೊದಲ ದಿನದ ಕಲೆಕ್ಷನ್ ಜಾಸ್ತಿ ಇದೆ ಎನ್ನುವುದು ಅಚ್ಚರಿಯ ವಿಷಯ ಆಗಿದೆ. ಇನ್ನು ಸಿನಿಮಾದ ಕಲೆಕ್ಷನ್ ನೋಡಿ ಎಲ್ಲರೂ ದಂಗಾಗಿದ್ದಾರೆ ಎಂದೇ ಹೇಳಬಹುದು.

ತೆಲುಗಿನಲ್ಲಿ ಮೊದಲ ಎರಡು ದಿನದಲ್ಲೇ ಕಾಂತಾರ ಸಿನಿಮಾ ಬರೋಬ್ಬರಿ 11 ಕೋಟಿಗಿಂತ ಹೆಚ್ಚು ಕಲೆಕ್ಷನ್ ಮಾಡಿತ್ತು, ಮೂರನೇ ದಿನ 5 ಕೋಟಿ ಕಲೆಕ್ಷನ್ ಮಾಡಿದ್ದು, ತೆಲುಗಿನಲ್ಲಿ ಮೂರು ದಿನಗಳಲ್ಲಿ 16.5 ಕೋಟಿ ಕಲೆಕ್ಷನ್ ಮಾಡಿದೆ ಎಂದು ಮಾಹಿತಿ ಸಿಕ್ಕಿದೆ. ತೆಲುಗು ಡಬ್ಬಿಂಗ್ ರೈಟ್ಸ್ ಖರೀದಿಸಿ ಸಿನಿಮಾ ಬಿಡುಗಡೆ ಮಾಡಿರುವ ಅಲ್ಲೂ ಅರ್ಜುನ್ ಅವರ ತಂದೆ ಅಲ್ಲೂ ಅರವಿಂದ್ ಅವರು, ಕಾಂತಾರ ತೆಲುಗು ಯಶಸ್ಸಿನಿಂದ ಬಹಳ ಸಂತೋಷವಾಗಿದ್ದಾರೆ. ಒಟ್ಟಾರೆಯಾಗಿ ಬೇರೆ ಭಾಷೆಗಳಲ್ಲಿ ಡಬ್ ಆಗಿ ತೆರೆಕಂಡಿರುವ ಕಾಂತಾರ ಸಿನಿಮಾ ಮೂರು ದಿನಗಳಲ್ಲಿ ಸುಮಾರು 20 ಕೋಟಿಗಿಂತ ಹೆಚ್ಚು ಗಳಿಕೆ ಮಾಡಿದೆ..

ವೀಕೆಂಡ್ ಗಳಲ್ಲಿ ಸಿನಿಮಾದ ಕಲೆಕ್ಷನ್ ಜಾಸ್ತಿ ಇರುವುದು ಸಾಮಾನ್ಯ, ಆದರೆ ಸೋಮವಾರದ ದಿನ ಕೂಡ 5ಕೋಟಿ ಕಲೆಕ್ಷನ್ ಮಾಡುವುದು ಸಾಮಾನ್ಯ ವಿಚಾರ ಅಲ್ಲ. ಇದನ್ನು ನೋಡಿದರೆ, ಕಾಂತಾರ ಸಿನಿಮಾ ಜನರಿಗೆ ಎಷ್ಟರ ಮಟ್ಟಿಗೆ ರೀಚ್ ಆಗಿದೆ, ಸಿನಿಮಾನ್ನು ಜನರು ಎಷ್ಟು ಇಷ್ಟಪಟ್ಟಿದ್ದಾರೆ ಎಂದು ಗೊತ್ತಾಗುತ್ತಿದೆ.
ಕಾಂತಾರ ಸಿನಿಮಾ ಬಿಡುಗಡೆಯಾಗಿ ಮೂರು ವಾರ ಕಳೆದಿದೆ, ಈಗ ಟಿಕೆಟ್ ದರಗಳು ಕೂಡ ಇಳಿಕೆ ಆಗಿದೆ.

ಆದರು ಸಿನಿಮಾ ಕೋಟಿಗಟ್ಟಲೆ ಹಣಗಳಿಕೆ ಮಾಡುತ್ತಿದೆ. ರಿಷಬ್ ಶೆಟ್ಟಿ ಅವರು ಬರೆದಿರುವ ನಮ್ಮ ಮಣ್ಣಿನ ಕಥೆ ಅಂಥದ್ದು, ಕರಾವಳಿ ಪ್ರದೇಶದ ಆಚರಣೆಗಳ ಬಗ್ಗೆ ಕಾಂತಾರ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಇನ್ನು ಸಿನಿಮಾದಲ್ಲಿ ಮೊದಲ 20 ನಿಮಿಷ ಮತ್ತು ಕೊನೆಯ ಅರ್ಧಗಂಟೆ ಸಿನಿಮಾ ಪ್ರಿಯರನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುತ್ತದೆ ಎನ್ನುವ ಅಭಿಪ್ರಾಯ ಎಲ್ಲರದ್ದಾಗಿದೆ. ಅದನ್ನು ನೋಡುವ ಸಲುವಾಗಿಯೇ ಎಲ್ಲರು ಪದೇ ಪದೇ ಥಿಯೇಟರ್ ಗೆ ಬರುತ್ತಿದ್ದಾರೆ.

ಕಾಂತಾರ ಸಿನಿಮಾವನ್ನು ಭಾರತದ ಸೆಲೆಬ್ರಿಟಿಗಳು ಸಹ ನೋಡಿ ಮೆಚ್ಚಿಕೊಂಡಿದ್ದಾರೆ. ಕನ್ನಡದ ಎಲ್ಲಾ ಸೆಲೆಬ್ರಿಟಿಗಳು ಕಾಂತಾರ ಒಂದು ಅದ್ಭುತ ಸಿನಿಮಾ ಎಂದರು, ತಮಿಳು ನಟರಾದ ಧನುಷ್, ಕಾರ್ತಿ.. ತೆಲುಗು ನಟರಾದ ಪ್ರಭಾಸ್, ರಾಣಾ ದಗ್ಗುಬಾಟಿ, ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಎಲ್ಲಾ ಕಲಾವಿದರು ಸಿನಿಮಾ ಮೆಚ್ಚಿಕೊಂಡು ಟ್ವೀಟ್ ಮೂಲಕ ಎಲ್ಲರೂ ತಪ್ಪದೆ ಕಾಂತಾರ ಸಿನಿಮಾ ನೋಡಿ ಎನ್ನುತ್ತಿದ್ದಾರೆ.

ಕಾಂತಾರ ಸಿನಿಮಾ ಮುನ್ನುಗ್ಗುತ್ತಿರುವ ವೇಗಕ್ಕೆ ಈಗಾಗಲೇ 100ಕೋಟಿ ಕಲೆಕ್ಷನ್ ಮಾಡಿ, 200 ಕೋಟಿಯತ್ತ ಹೆಜ್ಜೆ ಇಡುತ್ತಿದೆ. ಕಾಂತಾರ ಹೋಗುತ್ತಿರುವ ಸ್ಪೀಡ್ ನೋಡಿದರೆ, ಕೆಜಿಎಫ್ ಚಾಪ್ಟರ್1 ಸಿನಿಮಾದ ಲೈಫ್ ಟೈಮ್ ಕಲೆಕ್ಷನ್ 250 ಕೋಟಿ ರೂಪಾಯಿಗಳ ದಾಖಲೆಯನ್ನು ಬ್ರೇಕ್ ಮಾಡುತ್ತದೆ ಎನ್ನುವುದು ಹಲವರ ಅಭಿಪ್ರಾಯ, ಕಾಂತಾರ ಆ ರೆಕಾರ್ಡ್ ಅನ್ನು ಬ್ರೇಕ್ ಮಾಡುತ್ತಾ ಎಂದು ಕಾದು ನೋಡಬೇಕಿದೆ.

Comments are closed.