Neer Dose Karnataka
Take a fresh look at your lifestyle.

ಬಿಗ್ ಬಾಸ್ ಮನೆ ಇಂದ ಹೊರ ಬಂದ ನೇಹಾ ಗೌಡ ರವರಿಗೆ ಕೊಟ್ಟ ಸಂಭಾವನೆ ಎಷ್ಟು ಲಕ್ಷ ಗೊತ್ತೇ?? ಟಾಪ್ ನಟಿಗೂ ಇಷ್ಟು ಕೊಡಲ್ಲ.

244

ಲಕ್ಷ್ಮೀ ಬಾರಮ್ಮ ಧಾರವಾಹಿಯಿಂದ ಕಿರುತೆರೆ ವೀಕ್ಷಕರ ಫೇವರೆಟ್ ನಟಿ ಆಗಿದ್ದಾರೆ ನೇಹಾ ಗೌಡ. ಲಕ್ಷ್ಮೀ ಬಾರಮ್ಮ ಧಾರವಾಹಿಯಿಂದ ಎಲ್ಲರೂ ಇವರನ್ನು ಗೊಂಬೆ ಎಂದೇ ಕರೆಯಲು ಶುರು ಮಾಡಿದ್ದರು. ಈಗಲೂ ಕೂಡ ನೇಹಾ ಅವರನ್ನು ಅವರ ಅಭಿಮಾನಿಗಳು ಗೊಂಬೆ ಎಂದೇ ಕರೆಯುತ್ತಾರೆ. ಲಕ್ಷ್ಮಿ ಬಾರಮ್ಮ ಧಾರವಾಹಿ ಮೂರ್ನಾಲ್ಕು ವರ್ಷಗಳ ಕಾಲ ಪ್ರಸಾರಗೊಂಡಿತು. ಇದಾದ ನಂತರ ಮಾತ್ಯವುದೇ ಧಾರವಾಹಿಯಲ್ಲಿ ನೇಹಾ ಗೌಡ ಕಾಣಿಸಿಕೊಂಡಿರಲಿಲ್ಲ. ಕಲರ್ಸ್ ಕನ್ನಡ ವಾಹಿನಿಯಲ್ಲೇ ಮೂರುಗಂಟು ಧಾರವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ನೇಹಾ.

ಇನ್ನು ಡ್ಯಾನ್ಸಿಂಗ್ ಸ್ಟಾರ್ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದರು. ಅದಾದ ಬಳಿಕ ನೇಹಾ ಗೌಡ ತಮ್ಮ ಬಾಲ್ಯದ ಗೆಳೆಯ ಚಂದನ್ ಅವರೊಡನೆ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ಕೆಲ ಸಮಯ ಪತಿ ವಿದೇಶದಲ್ಲಿ ಕೆಲಸ ಮಾಡುತ್ತಿರುವುದರಿಂದ ಅವರ ಜೊತೆ ಅಲ್ಲಿಯೇ ಹೋದರು. ಬೆಂಗಳೂರಿಗೆ ಬಂದ ನಂತರ ನೇಹಾ ತಮ್ಮ ಪತಿಯ ಜೊತೆಗೆ ರಾಜ ರಾಣಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ, ರಾಜ ರಾಣಿ ಶೋ ಮೊದಲ ಸೀಸನ್ ವಿನ್ನರ್ ಆದರು ನೇಹಾ. ಒಂದು ಬ್ರೇಕ್ ಪಡೆದು ಬಿಗ್ ಬಾಸ್ ಶೋಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು ನೇಹಾ.

ಬಿಗ್ ಬಾಸ್ ಮನೆಯಲ್ಲಿ ಐದು ವಾರಗಳ ಕಾಲ ಇದ್ದರು, ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ಸಮಯ ನೇಹಾ ಅವರು ಜನರ ನಿರೀಕ್ಷೆಗೆ ತಕ್ಕ ಹಾಗೆ ಆಟವಾಡಲಿಲ್ಲ. ಟಾಸ್ಕ್ ಗಳಲ್ಲಿ ಪರ್ಫಾರ್ಮ್ ಮಾಡುವ ಅವಕಾಶ ಸಿಕ್ಕರು ಸರಿಯಾಗಿ ಉಪಯೋಗಿಸಿಕೊಳ್ಳದ ಕಾರಣ ಐದನೇ ವಾರ ನೇಹಾ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ನೇಹಾ ಅವರಿಗೆ ಸಿಕ್ಕ ಸಂಭಾವನೆ ಎಷ್ಟು ಎನ್ನುವ ಚರ್ಚೆ ಆಗುತ್ತಿಡ್ಡಿ, ಯಾವುದೇ ಸಿನಿಮಾ ನಟಿಗೂ ಕಡಿಮೆ ಇಲ್ಲದಷ್ಟು ಸಂಭಾವನೇ ನೇಹಾ ಅವರಿಗೆ ಸಿಕ್ಕಿದೆ. ಒಂದು ವಾರಕ್ಕೆ ನೇಹಾ ಅವರಿಗೆ 1.4ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿದ್ದು, ಐದು ವಾರಕ್ಕೆ 7 ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿದೆ.

Leave A Reply

Your email address will not be published.